Karnataka news paper

‘ಡಿಸ್ಟರ್ಬ್ಡ್’ ಪೋಸ್ಟ್: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಖಾತೆ ಬ್ಲಾಕ್ ಮಾಡಿದ ಮಮತಾ ಬ್ಯಾನರ್ಜಿ


Online Desk

ಕೊಲ್ಕತ್ತಾ: ತಮ್ಮ ಸರ್ಕಾರದ ವಿರುದ್ಧ ನಿತ್ಯ ಪೋಸ್ಟ್ ಗಳನ್ನು ಮಾಡಿ ತೊಂದರೆ ಕೊಡುತ್ತಿದ್ದ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಅವರ ಟ್ವಿಟರ್ ಖಾತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಬ್ಲಾಕ್ ಮಾಡಿದ್ದಾರೆ.

ಮಹಾತ್ಮ ಗಾಂಧಿಯವರ ಪುಣ್ಯತಿಥಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಧನಕರ್ ಅವರು ಮಮತಾ ಬ್ಯಾನರ್ಜಿ ಸರ್ಕಾರವನ್ನು ಟೀಕಿಸಿ, ಬಂಗಾಳದ ಪವಿತ್ರ ಭೂಮಿ ಹಿಂಸಾಚಾರದಲ್ಲಿ ಮುಳುಗುವುದನ್ನು ಮತ್ತು ಮಾನವ ಹಕ್ಕುಗಳನ್ನು ತುಳಿಯುವ ಪ್ರಯೋಗಾಲಯವಾಗುವುದನ್ನು ನನಗೆ ನೋಡಲಾಗುತ್ತಿಲ್ಲ. ರಾಜ್ಯವು ಪ್ರಜಾಪ್ರಭುತ್ವದ ಗ್ಯಾಸ್ ಚೇಂಬರ್ ಆಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ” ಎಂದು ಟ್ವಿಟ್ ಮಾಡಿದ್ದರು.

ಇದನ್ನು ಓದಿ: ನೇತಾಜಿ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸಿ: ಕೇಂದ್ರಕ್ಕೆ ಮಮತಾ ಮನವಿ​

ರಾಜ್ಯಪಾಲರ ಈ ಪೊಸ್ಟ್ ಅನ್ನು ಖಂಡಿಸಿದ ಮಮತಾ ಬ್ಯಾನರ್ಜಿ, ಈ ಕ್ರಮ ತೆಗೆದುಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಇದನ್ನು ಖುದ್ದಾಗಿ ಒಪ್ಪಿಕೊಂಡಿರುವ ಅವರು, ನಾನು ಮುಂಚಿತವಾಗಿ ಕ್ಷಮೆಯಾಚಿಸುತ್ತೇನೆ. ಜಗದೀಪ್ ಧನಕರ್ ಪ್ರತಿದಿನ ನನ್ನನ್ನು ಅಥವಾ ನನ್ನ ಅಧಿಕಾರಿಗಳನ್ನು ನಿಂದಿಸುತ್ತಾ ಟ್ವೀಟ್ ಮಾಡುತ್ತಲೇ ಇರುತ್ತಾರೆ. ಅಸಾಂವಿಧಾನಿಕ, ಅನೈತಿಕ ವಿಷಯಗಳ ಬಗ್ಗೆ ಮಾತನಾಡುತ್ತಾರೆಯೇ ವಿನಃ ಯಾವುದೇ ಸಲಹೆ ನೀಡುವುದಿಲ್ಲ. ಚುನಾಯಿತ ಸರ್ಕಾರವನ್ನು ಬಂಧಿತ ಕಾರ್ಮಿಕರಂತೆ ಪರಿಗಣಿಸುತ್ತಾರೆ. ಅದಕ್ಕಾಗಿಯೇ ನಾನು ಅವರನ್ನು ಬ್ಲಾಕ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮುಖ್ಯಸ್ಥರಿಗೆ ಹಲವು ಸಂದರ್ಭಗಳಲ್ಲಿ ಬೆದರಿಕೆ ಹಾಕಿರುವ ಧನಕರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಬಾರಿ ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.



Read more

[wpas_products keywords=”deal of the day”]