Karnataka news paper

ರೆಡಾರ್‌ನಿಂದ ಕಣ್ಮರೆಯಾದಜಪಾನ್‌ನ F15 ಯುದ್ಧ ವಿಮಾನಕ್ಕಾಗಿ ಶೋಧಕಾರ್ಯ!


ಟೋಕಿಯೋ: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಜಪಾನ್ ವಾಯುಸೇನೆಯ ಯುದ್ಧ ವಿಮಾನವೊಂದು ಕಣ್ಮರೆಯಾಗಿದ್ದು,
ಶೋಧಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಜಪಾನ್‌ ಮಿಲಿಟರಿ ಮೂಲಗಳು ಸ್ಪಷ್ಟಪಡಿಸಿವೆ.

ಈ ಕುರಿತು ಮಾಹಿತಿ ನೀಡಿರುವ ಜಪಾನ್‌ನ ಏರ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ ವಕ್ತಾರ, F15 ಯುದ್ಧ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಕೊಮಾಟ್ಸು ಕಂಟ್ರೋಲ್ ಟವರ್‌ನ ರೆಡಾರ್ ಡೇಟಾದಿಂದ ಕಣ್ಮರೆಯಾಗಿದೆ ಎಂದು ಹೇಳಿದ್ದಾರೆ.

ಜಪಾನ್ ಸಮುದ್ರದ ಮಧ್ಯದ ಇಶಿಕಾವಾ ಪ್ರದೇಶದ ಕೊಮಾಟ್ಸು ವಾಯುನೆಲೆಯಿಂದ ಐದು ಕಿಲೋಮೀಟರ್ ದೂರದಲ್ಲಿ ಈ
ಯುದ್ಧ ವಿಮಾನ ಕಣ್ಮರೆಯಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೆಡಾರ್‌ನಿಂದ ಕಣ್ಮರೆಯಾದ ಯುದ್ಧ ವಿಮಾನ: ಪರಿಶೀಲನೆಗೆ ಎಲ್ಲಾ F-16 ಜೆಟ್ ಕೆಳಗಿಳಿಸಿದ ತೈವಾನ್!
ಈ ಯುದ್ಧ ವಿಮಾನದಲ್ಲಿ ಇಬ್ಬರು ಪೈಲೆಟ್‌ಗಳು ಸವಾರಿ ಮಾಡಬಹುದಾಗಿದ್ದು, ಕಣ್ಮರೆಯಾದ ವಿಮಾನದಲ್ಲಿ ಎಷ್ಟು ಜನ ಪೈಲೆಟ್‌ಗಳು ಇದ್ದರು ಎಂಬುದು ಇದುವರೆಗೂ ಖಚಿತಪಟ್ಟಿಲ್ಲ ಎಂದೂ ಜಪಾನ್ ಸೇನಾ ಮೂಲಗಳು ತಿಳಿಸಿವೆ.

ಸದ್ಯ ಕಣ್ಮರೆಯಾಗಿರುವ ಯುದ್ಧ ವಿಮಾನಕ್ಕಾಗಿ ತೀವ್ರ ಶೋಧ ನಡೆಸುತ್ತಿದ್ದು, ವಿಮಾನ ಸಮುದ್ರದಲ್ಲಿ ಮುಳುಗಿರುವ ಆತಂಕ ಇದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಜಪಾನ್ ವಾಯುಸೇನೆಯ ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿದ್ದು, 2019ರಲ್ಲಿ F-35A ಸ್ಟೆಲ್ತ್ ಜೆಟ್ ವಿಮಾನವೊಂದು ಸಮುದ್ರಕ್ಕೆ ಅಪ್ಪಳಿಸಿ ಮುಳುಗಿದ್ದನ್ನು ಇಲ್ಲಿ ಸ್ಮರಿಸಬಹುದು.



Read more

[wpas_products keywords=”deal of the day sale today offer all”]