‘ನಿಯೋಕೋವ್ ಎನ್ನುವುದು ಮಧ್ಯ ಪ್ರಾಚ್ಯ ಶ್ವಾಸಕೋಶ ಸಂಬಂಧಿ ಕೊರೊನಾ ಮಾದರಿ ಸಾಂಕ್ರಾಮಿಕ ಕಾಯಿಲೆ ಆಗಿದ್ದು, ಹೊಸ ರೂಪಾಂತರಿ ಅಲ್ಲ. ಇದರಿಂದ ಮನುಷ್ಯರಿಗೆ ಹೆಚ್ಚು ಅಪಾಯವಿಲ್ಲ. ಅನಗತ್ಯವಾಗಿ ಭಯ ಪಡುವುದು ಬೇಡ’ ಎಂದು ಮಹಾರಾಷ್ಟ್ರದ ಕೋವಿಡ್-19 ಕಾರ್ಯಪಡೆ ಸದಸ್ಯ ಡಾ. ಶಶಾಂಕ್ ಜೋಶಿ ಹೇಳಿದ್ದಾರೆ.
‘ಸಾಮಾಜಿಕ ಜಾಲತಾಣಗಳಲ್ಲಿ ನಿಯೋಕೋವ್ ವೈರಾಣು ಬಾವಲಿಗಳಿಂದ ಮನುಷ್ಯರಿಗೆ ಹರಡುವ ಮೂಲಕ ಮಾರಣಾಂತಿಕವಾದ ಸಾಂಕ್ರಾಮಿಕ ಅಪ್ಪಳಿಸುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಕೆಲವು ಪ್ರಾಂತ್ಯಗಳಲ್ಲಿ ನಿಯೋಕೋವ್ ಅಬ್ಬರಿಸುತ್ತಿದೆ ಎನ್ನಲಾಗಿದೆ. ಆದರೆ, ಇದು ಸತ್ಯಕ್ಕೆ ದೂರವಾದ ಸಂಗತಿ. ಬಾವಲಿಗಳಲ್ಲಿನ ದೇಹದ ಕಿಣ್ವವನ್ನು ಮಾತ್ರ ನಿಯೋಕೋವ್ ಆಶ್ರಯಿಸುತ್ತದೆ. ಮನುಷ್ಯನ ದೇಹವು ಇದಕ್ಕೆ ಒಗ್ಗುವುದಿಲ್ಲ. ನಿಯೋಕೋವ್ ತನ್ನ ರಚನೆಯಲ್ಲಿ ಮಾರ್ಪಾಡು ಮಾಡಿಕೊಂಡು ಹೊಸ ರೂಪಾಂತರಿಯಾಗಿ ದಾಳಿ ಮಾಡಿದರೆ ಮಾತ್ರವೇ ಅಪಾಯವಿದೆ. ಅದು ದೂರದ ಮಾತು’ ಎಂದು ಜೋಶಿ ವಿವರಿಸಿದ್ದಾರೆ.
‘ಸೌದಿ ಅರೇಬಿಯಾ ಸೇರಿದಂತೆ ಮಧ್ಯ ಪ್ರಾಚ್ಯದ ಕೆಲವು ರಾಷ್ಟ್ರಗಳಲ್ಲಿ ಕಳೆದ 2012ರಲ್ಲಿ ಒಂಟೆಗಳ ಮೂಲಕ ನಿಯೋಕೋವ್ ಮನುಷ್ಯರಿಗೆ ಹರಡಿತ್ತು. ಹಾಗಾಗಿ ಸೋಂಕು ಪ್ರಸರಣ ಹೆಚ್ಚಿಸಿಕೊಂಡು ಮಾರಣಾಂತಿಕವಾಗಿ ಪರಿಣಮಿಸಿತ್ತು. ಪ್ರಾಥಮಿಕವಾಗಿ ಮನುಷ್ಯರಿಂದಲೇ ಈ ವೈರಾಣು ಪ್ರಸರಣ ಆರಂಭಿಸಲ್ಲ. ಹಾಗಾಗಿ ಜನರು ಗಾಬರಿಪಡುವ ಅಗತ್ಯವಿಲ್ಲ’ ಎಂದು ಖ್ಯಾತ ವೈರಾಣು ವಿಜ್ಞಾನಿ ಡಾ. ಶಾಹೀದ್ ಜಮೀಲ್ ಕೂಡ ಅಭಿಪ್ರಾಯಪಟ್ಟಿದ್ದಾರೆ.
2 ವರ್ಷ ಪೂರೈಕೆ, 75% ಮಂದಿಗೆ ಲಸಿಕೆ
ಕೊರೊನಾ ಸಾಂಕ್ರಾಮಿಕವು ದೇಶಕ್ಕೆ ಅಪ್ಪಳಿಸಿ ಜನವರಿ 30ಕ್ಕೆ ಎರಡು ವರ್ಷವಾಗಿದೆ. ಈ ನಡುವೆ, ‘ಕೇಂದ್ರ ಸರಕಾರದ ಕೊರೊನಾ ನಿರೋಧಕ ಲಸಿಕಾ ಅಭಿಯಾನದ ಅಡಿಯಲ್ಲಿ ದೇಶದ ವಯಸ್ಕ ಜನಸಂಖ್ಯೆಯ ಶೇ.75ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ತಿಳಿಸಿದ್ದಾರೆ.
2020ರ ಜನವರಿ 30ರಂದು ದೇಶದಲ್ಲಿ ಮೊದಲ ಕೊರೊನಾ ಸೋಂಕಿನ ಪ್ರಕರಣ ದೃಢಪಟ್ಟಿತ್ತು. ಚೀನಾದ ವುಹಾನ್ ನಗರದ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ಕೇರಳದ ವಿದ್ಯಾರ್ಥಿನಿಯಲ್ಲಿ ಸೋಂಕು ಪತ್ತೆಯಾಗಿತ್ತು.
ನಟಿ ಕಾಜೊಲ್‌ಗೆ ಕೊರೊನಾ ಪಾಸಿಟಿವ್
ಬಾಲಿವುಡ್ ನಟಿ ಕಾಜೊಲ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ‘ನೆಗಡಿ ಹಾಗೂ ಸಣ್ಣ ಜ್ವರ ಕಾಣಿಸಿಕೊಂಡಿತ್ತು. ಕೊರೊನಾ ಪರೀಕ್ಷೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ. ಆದರೆ ಸೋಂಕಿನ ಲಕ್ಷಣಗಳು ಸೌಮ್ಯವಾಗಿವೆ’ ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾಜೋಲ್ ಬಹಿರಂಗಪಡಿಸಿದ್ದಾರೆ.
Read more
[wpas_products keywords=”deal of the day sale today offer all”]