Karnataka news paper

ಗ್ರಾಹಕರಿಗೆ ಬಿಗ್‌ ಶಾಕ್‌ ಕೊಟ್ಟ ಎಸ್‌ಬಿಐ! ನಾಳೆಯಿಂದಲೇ ಹೊಸ ನಿಯಮ ಜಾರಿ!


ಎಸ್‌ಬಿಐ

ಹೌದು, ಎಸ್‌ಬಿಐ ಬ್ಯಾಂಕ್‌ ತನ್ನ ಗ್ರಾಹಕರಿಗೆ ಬಿಗ್‌ ಶಾಕ್‌ ನೀಡಿದೆ. ಇನ್ಮುಂದೆ IMPS ಮೂಲಕ ಹಣ ಪಾವತಿ ಮಾಡುವವರಿಗೆ ಹೊಸ ಶುಲ್ಕವನ್ನು ವಿಧಿಸಲಿದೆ. ಇದಲ್ಲದೆ IMPS ಮೂಲಕ ಹಣ ಪಾವತಿಯನ್ನು ಹೊಸ ವಹಿವಾಟು ಮಿತಿಯನ್ನು ಸಹ ಜಾರಿಗೊಳಿಸಲು ಮುಂದಾಗಿದೆ. ಈ ನಿಯಮ ಪೆಬ್ರವರಿ ಒಂದರಿಂದ ಅನ್ವಯವಾಗಲಿದೆ. ಪೆಬ್ರವರಿ ಒಂದರಿಂದ IMPS ಮೂಲಕ ಹಣ ಪಾವತಿ ಮಾಡಬೇಕಾದರೆ ಹೊಸ ಶುಲ್ಕದ ದರಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾಗುತ್ತದೆ. ಹಾಗಾದ್ರೆ ಎಸ್‌ಬಿಐ ಹೊಸದಾಗಿ ಜಾರಿಗೆ ತಂದಿರುವ ನಿಯಮ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಎಸ್‌ಬಿಐ IMPS ವಹಿವಾಟು ಮಿತಿ

ಎಸ್‌ಬಿಐ IMPS ವಹಿವಾಟು ಮಿತಿ

ಎಸ್‌ಬಿಐ ಬ್ಯಾಂಕ್‌ ತನ್ನ ಗ್ರಾಹಕರು IMPS ಮೂಲಕ ಹಣ ಪಾವತಿಸುವುದಕ್ಕೆ ಹೊಸ ಮಿತಿಯನ್ನು ಜಾರಿಗೊಳಿಸಿದೆ. ಇದರ ಅನ್ವಯ IMPS ಮೂಲಕ ಹಣ ಪಾವತಿ ಮಾಡುವವರು ಇದೀಗ 5 ಲಕ್ಷದ ತನಕ ವಹಿವಾಟ ನಡೆಸಬಹುದಾಗಿದೆ. ಈ ಹಿಂದೆ IMPS ಮೂಲಕ ದಿನಕ್ಕೆ 2 ಲಕ್ಷ ರೂ. ವಹಿವಾಟು ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ಹೊಸ ವಹಿವಾಟು ಮಿತಿಯಲ್ಲಿ ಐದು ಲಕ್ಷದ ತನಕ ಹಣವನ್ನು IMPS ಮೂಲಕ ವರ್ಗಾವಣೆ ಮಾಡಬಹುದಾಗಿದೆ. ಈ ವಹಿವಾಟುಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ಗಳ ಮೂಲಕ ಮಾಡಬಹುದಾಗಿದೆ.

SBI ಆಫ್‌ಲೈನ್ IMPS ವಹಿವಾಟಿನ ಹೊಸ ಶುಲ್ಕಗಳು

SBI ಆಫ್‌ಲೈನ್ IMPS ವಹಿವಾಟಿನ ಹೊಸ ಶುಲ್ಕಗಳು

ಎಸ್‌ಬಿಐ ಬ್ಯಾಂಕ್‌ ಆಫ್‌ಲೈನ್ ಮೋಡ್ ಮೂಲಕ ಮಾಡಿದ IMPS ವಹಿವಾಟುಗಳಿಗೆ ಹೊಸ ಶುಲ್ಕಗಳನ್ನು ಪರಿಚಯಿಸಿದೆ. ಆಫ್‌ಲೈನ್‌ ಮೋಡ್‌ನಲ್ಲಿ IMPS ವಹಿವಾಟು ಮಾಡಲು ಬ್ಯಾಂಕ್ ಶಾಖೆಗೆ ಹೋಗುವ ಗ್ರಾಹಕರು ಹೊಸ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಹೊಸ IMPS ಶುಲ್ಕಗಳ ಪ್ರಕಾರ, 1000 ರೂ.ವರೆಗಿನ ಎಲ್ಲಾ ಆಫ್‌ಲೈನ್ ವಹಿವಾಟು ವಿನಂತಿಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ. ಆದರೆ 1,000 ರೂ.ನಿಂದ 10,000 ರೂ.ವರೆಗಿನ ವಹಿವಾಟುಗಳಿಗೆ ಗ್ರಾಹಕರು 2ರೂ. ಮತ್ತು ಜಿಎಸ್‌ಟಿ ಯನ್ನು ಪಾವತಿಸಬೇಕಾಗುತ್ತದೆ. ಇನ್ನು 10,000ರೂ.ಗಳಿಂದ 1,00,000ರೂ. ರವರೆಗಿನ ವಹಿವಾಟುಗಳಿಗೆ 4ರೂ. ಮತ್ತು ಜಿಎಸ್‌ಟಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ 1,00,000 ರಿಂದ 2,00,000ಲಕ್ಷ ರೂ. ವರೆಗಿನ ಪ್ರತಿ ವಹಿವಾಟಿಗೆ 12ರೂ ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಇನ್ನು ಎಸ್‌ಬಿಐ ಪರಿಚಯಿಸಿರುವ ಹೊಸ ಸ್ಲ್ಯಾಬ್‌ನಲ್ಲಿ 2,00,000ರೂ.ನಿಂದ 5,00,000ರೂ.ವರೆಗಿನ ವಹಿವಾಟುಗಳು ಸೇರಿವೆ. ಈ ವಹಿವಾಟಿಗಳಿಗೆ ಖಾತೆದಾರರು 20ರೂ. ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

SBI ಆನ್‌ಲೈನ್ IMPS ವಹಿವಾಟು ಶುಲ್ಕಗಳು

SBI ಆನ್‌ಲೈನ್ IMPS ವಹಿವಾಟು ಶುಲ್ಕಗಳು

ಎಸ್‌ಬಿಐ ಬ್ಯಾಂಕ್‌ ಗ್ರಾಹಕರು ಎಲ್ಲಾ ಆನ್‌ಲೈನ್ IMPS ವಹಿವಾಟುಗಳು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸುವಂತಿಲ್ಲ. ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಈ ವಹಿವಾಟಿನ ಮೇಲೆ ಬ್ಯಾಂಕ್ ಯಾವುದೇ ಜಿಎಸ್‌ಟಿ ಶುಲ್ಕವನ್ನು ವಿಧಿಸುವುದಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು YONO ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಮಾಡಿದ ಎಲ್ಲಾ IMPS ವಹಿವಾಟುಗಳಿಗೆ ವಿನಾಯಿತಿ ನೀಡಲಾಗುತ್ತದೆ. ಬ್ಯಾಂಕ್ ತನ್ನ ಖಾತೆದಾರರನ್ನು ಆನ್‌ಲೈನ್‌ ಬ್ಯಾಂಕಿಂಗ್ ವಹಿವಾಟು ನಡೆಸುವುದಕ್ಕೆ ಪ್ರೋತ್ಸಾಹಿಸುವುದಕ್ಕಾಗಿ ಆನ್‌ಲೈನ್ ವಹಿವಾಟುಗಳಿಗೆ ವಿನಾಯಿತಿ ನೀಡಿದೆ.

ಬ್ಯಾಂಕಿಂಗ್

ಇದಲ್ಲದೆ ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ, ಎಸ್‌ಬಿಐ 5 ಲಕ್ಷರೂ.ವರೆಗಿನ ಐಎಂಪಿಎಸ್ ವಹಿವಾಟುಗಳ ಮೇಲೆ ಯಾವುದೇ ಸೇವಾ ಶುಲ್ಕವನ್ನು ವಿಧಿಸಿಲ್ಲ. YONO ಸೇರಿದಂತೆ ಇಂಟರ್‌ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್ ಮೂಲಕ ಮಾಡಲಾಗುತ್ತದೆ. ಇನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಸ್ಲ್ಯಾಬ್‌ಗಳಲ್ಲಿ ಬ್ರಾಂಚ್ ಚಾನೆಲ್ ಮೂಲಕ ಮಾಡಲಾದ IMPS ಗಾಗಿ ಸೇವಾ ಶುಲ್ಕಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.



Read more…

[wpas_products keywords=”smartphones under 15000 6gb ram”]