Karnataka news paper

‘ಪ್ರೀತಿಗಿಬ್ಬರು’ ಯಾಕೆ ಬೇಕು?


ಒಂದು ಪ್ರೀತಿಯ ಕಥೆಯಲ್ಲಿ ಇಬ್ಬರಿಗೇನು ಕೆಲಸ? ಅದಕ್ಕೆ ಉತ್ತರ ಕೊಡುತ್ತದೆಯಂತೆ ‘ಪ್ರೀತಿಗಿಬ್ಬರು’ ಚಿತ್ರ. ತಿರುಪತಿಯ ಬಿಲ್ಡರ್‌ ಬಿ.ಬಾಲಾಜಿ ಬೊರ್ಲಿಗೊರ್ಲ ಅವರು ತಮ್ಮ ಅಕ್ಷತಾ ಮೂವೀಸ್‌ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ನಾಯಕನಾಗಿ ಗೋವಿಂದ. ನಾಯಕಿಯಾಗಿ ನಿರೋಷ ಶೆಟ್ಟಿ ಇದ್ದಾರೆ. ಚಿತ್ರದಲ್ಲಿ ಇಬ್ಬರು ಖಳನಾಯಕಿಯರು ಇದ್ದಾರೆ. ಮಂಜುಳಾ ಮತ್ತು ಕಾವ್ಯಪ್ರಕಾಶ್, ಚಿರಾಗ್, ಶೈಲೇಶ್, ಸಂದೀಪ್ ನಟಿಸಿದ್ದಾರೆ. 

ಕಥೆ ಏನಿದೆ?

ಒಂದು ಹಳ್ಳಿಯಲ್ಲಿ ನಡೆಯುವ ಪ್ರೇಮಕಥೆ. ಕೆಲವು ಕಷ್ಟಕರ ಸನ್ನಿವೇಶದಲ್ಲಿ ಪ್ರೇಮಿಗಳು ತಮ್ಮ ಬದುಕಿನಲ್ಲಿ ಒಂದಾಗಾತ್ತಾರೋ ಇಲ್ಲವೋ ಎಂಬುದು ಕಥೆ. ಜತೆಗೆ ಜಾತಿ ಸಮಸ್ಯೆ ಸಣ್ಣ ಎಳೆಯಾಗಿ ಬಂದು ಹೋಗುತ್ತದೆ. ಈ ಸನ್ನಿವೇಶದಲ್ಲಿ ಇಬ್ಬರು ಹೆಣ್ಣು ಮಕ್ಕಳು ಖತರ್‌ನಾಕ್ ಖಳನಾಯಕಿಯರಾಗಿ ಬಂದು ಹೋಗುತ್ತಾರೆ. 

ಚಿತ್ರದಲ್ಲಿ ನಾಯಕಿ ಹೊರತುಪಡಿಸಿ ಉಳಿದ ಕಲಾವಿದರುಗಳು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಕೆ.ವಿ.ರಾಜು, ಎಂ.ಎಸ್.ರಮೇಶ್ ಬಳಿ ಕೆಲಸ ಕಲಿತಿರುವ ಶಾಂಡಿಲ್ಯ ಬಿ.ಟಿ. ಕಥೆ, ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. 

ಸಂಗೀತ ಅನುರಾಗ್‌ರೆಡ್ಡಿ, ಹಿನ್ನಲೆ ಶಬ್ದ ಎ.ಟಿ.ರವೀಶ್, ಛಾಯಾಗ್ರಹಣ ರಮೇಶ್‌ಗೌಡ, ಸಂಕಲನ ಅರ್ಜುನ್‌ಕಿಟ್ಟು, ಸಾಹಿತ್ಯ ಡಾ.ದೊಡ್ಡರಂಗೇಗೌಡ, ಸಾಹಸ ಆರ್ಯನ್‌ ಶ್ರೀನಿವಾಸನ್-ಅಶೋಕ್, ನೃತ್ಯ ಪ್ರವೀಣ್ ಅವರದ್ದು. ಚಾಮರಾಜನಗರ, ಉಡುಪಿ, ಬಳ್ಳಾರಿ, ಬೀದರ್, ನಾಗಮಂಗಲ, ಕೊಳ್ಳೆಗಾಲ, ಮರವಂತೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಇದೇ ತಿಂಗಳಲ್ಲಿ ವಿತರಕ ರಮೇಶ್ ಅವರ ಮೂಲಕ ಬಿಡುಗಡೆಗೊಳಿಸಲು ಸಿದ್ಧತೆ ನಡೆದಿದೆ.



Read More…Source link

[wpas_products keywords=”deal of the day party wear for men wedding shirt”]