Karnataka news paper

‘ಗ್ಯಾಸ್ ಚೇಂಬರ್’ ಹೇಳಿಕೆಗೆ ಮುನಿದ ಮಮತಾ: ಟ್ವಿಟ್ಟರ್‌ನಲ್ಲಿ ರಾಜ್ಯಪಾಲರನ್ನು ಬ್ಲಾಕ್ ಮಾಡಿದ ದೀದಿ!


ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಜಗದೀಪ್ ಧನ್ಕರ್ ನಡುವಿನ
ವೈಮನಸ್ಸು ಮುಂದುವರೆದಿದೆ. ಇದಕ್ಕೆ ಪುಷ್ಠಿ ಎಂಬಂತೆ ಮಮತಾ ಬ್ಯಾನರ್ಜಿ ಅವರು ಜಗದೀಪ್ ಧನ್ಕರ್ ಅವರನ್ನು ಟ್ವಿಟ್ಟರ್‌ನಲ್ಲಿ ಬ್ಲಾಕ್ ಮಾಡಿದ್ದಾರೆ.

ಹೌದು, ಜಗದೀಪ್ ಧನ್ಕರ್ ಅವರನ್ನು ಟ್ವಿಟ್ಟರ್‌ನಲ್ಲಿ ಬ್ಲಾಕ್ ಮಾಡಿರುವ ಮಮತಾ ಬ್ಯಾನರ್ಜಿ, ರಾಜ್ಯಪಾಲರು ತಮ್ಮ ಟ್ವೀಟ್‌ಗಳಲ್ಲಿ ಬಳಸುತ್ತಿರುವ ಭಾಷೆ ಸಹಿಸಲು ಅಸಾಧ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರ ಪ್ರಜಾಪ್ರಭುತ್ವದ ಪಾಲಿಗೆ ‘ಗ್ಯಾಸ್ ಚೇಂಬರ್'(ಹಿಟ್ಲರ್ ಕಾಲದಲ್ಲಿ ಕೈದಿಗಳನ್ನು ಕೊಲ್ಲಲು ಬಳಸುತ್ತಿದ್ದ ಗುಪ್ತ ಬಂಕರ್‌ಗಳು) ಆಗಿದೆ ಎಂದು ರಾಜ್ಯಪಾಲ ಜಗದೀಪ್ ಧನ್ಕರ್ ಟ್ವೀಟ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದಿರುವ ಮಮತಾ ಬ್ಯಾನರ್ಜಿ, ಧನ್ಕರ್ ಅವರನ್ನು ಟ್ವಿಟ್ಟರ್‌ನಲ್ಲಿ ಬ್ಲಾಕ್ ಮಾಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

‘ನಾನು ರಾಜ್ಯಪಾಲ ಜಗದೀಪ್ ಧನ್ಕರ್ ಅವರನ್ನು ಟ್ವಿಟ್ಟರ್‌ನಲ್ಲಿ ಬ್ಲಾಕ್ ಮಾಡಿದ್ದೇನೆ. ಇದಕ್ಕಾಗಿ ಕ್ಷಮೆಯನ್ನೂ ಕೇಳುತ್ತೇನೆ. ಆದರೆ ರಾಜ್ಯಪಾಲರು ನನ್ನ ಸರ್ಕಾರದ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪಗಳಿಂದ ನಾನು ಬೇಸತ್ತಿದ್ದೇನೆ. ರಾಜ್ಯಪಾಲರಾದವರು ಸರ್ಕಾರಕ್ಕೆ ಸಲಹೆ ನೀಡಬೇಕೇ ವಿನಃ ಆದೇಶವನ್ನಲ್ಲ..’ ಎಂದು ಮಮತಾ ಬ್ಯಾನರ್ಜಿ ಟ್ವೀಟ್‌ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

‘ರಾಜ್ಯಪಾಲರು ಅನಗತ್ಯವಾಗಿ ರಾಜ್ಯ ಸರ್ಕಾರದ ಜನಪ್ರಿಯತೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಜಗದೀಪ್ ಧನ್ಕರ್ ತಮ್ಮ ಹುದ್ದೆಯ ಘನತೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ. ನಿತ್ಯವೂ ಅವರ ಟ್ವೀಟ್‌ಗಳನ್ನು ನೋಡಿ ನೋಡಿ ರೋಸಿ ಹೋಗಿದ್ದೇನೆ. ಹೀಗಾಗಿ ಅವರನ್ನು ಬ್ಲಾಕ್ ಮಾಡುತ್ತಿದ್ದೇನೆ..’ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.

ಬಂಗಾಳದಲ್ಲಿ ನಿಲ್ಲದ ಮಮತಾ-ಗೌರ್ನರ್‌ ಗುದ್ದಾಟ: ರಾಜ್ಯಪಾಲರ ಈ ಬಾರಿಯ ಟಾರ್ಗೆಟ್‌ ಸ್ಪೀಕರ್‌
ಇದಕ್ಕೂ ಮೊದಲು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡಿದ್ದ ರಾಜ್ಯಪಾಲ ಜಗದೀಪ್ ಧನ್ಕರ್, ‘ಪಶ್ಚಿಮ ಬಂಗಾಳದ ಪುಣ್ಯಭೂಮಿ ರಕ್ತದಿಂದ(ಹಿಂಸಾಚಾರದಿಂದ) ಮುಳುಗಿರುವುದನ್ನು ನಾನು ನೋಡಲಾರೆ. ಪಶ್ಚಿಮ ಬಂಗಾಳ ರಮಾನವ ಹಕ್ಕುಗಳನ್ನು ತುಳಿಯುವ ಪ್ರಯೋಗಾಲಯವಾಗಿ ಮಾರ್ಪಟ್ಟಿದೆ. ರಾಜ್ಯ ಸರ್ಕಾರ ಪ್ರಜಾಪ್ರಭುತ್ವದ ಪಾಲಿಗೆ ಗ್ಯಾಸ್ ಚೇಂಬರ್ ಆಗಿ ಮಾರ್ಪಟ್ಟಿದೆ..’ ಎಂದು ಕಿಡಿಕಾರಿದ್ದರು.



Read more

[wpas_products keywords=”deal of the day sale today offer all”]