Karnataka news paper

ಐಪಿಎಲ್‌ 2022: ಲಖನೌ ಸೂಪರ್‌ ಜಯಂಟ್ಸ್‌ ಲಾಂಛನ ಅನಾವರಣ!


ಬೆಂಗಳೂರು: ಉದ್ಯಮಿ ಸಂಜೀವ್‌ ಗೋಯೆಂಕಾ ಮಾಲೀಕತ್ವದ ಲಖನೌ ಫ್ರಾಂಚೈಸಿ ಇತ್ತೀಚೆಗಷ್ಟೇ ಲಖನೌ ಸೂಪರ್‌ ಜಯಂಟ್ಸ್‌ ಎಂದು ನಾಮಕರಣ ಮಾಡಿತ್ತು, ಈಗ ಐಪಿಎಲ್ 2022 ಟೂರ್ನಿಯ ಮೆಗಾ ಆಕ್ಷನ್‌ಗೂ ಮುನ್ನ ನೂತನ ಲಾಂಛನವನ್ನು ಸೋಷಿಯಲ್‌ ಮೀಡಿಯಾ ಮೂಲಕ ಬಿಡುಗಡೆ ಮಾಡಿದೆ. ಭಾರತೀಯ ಪುರಾಣದಿಂದ ಸ್ಫೂರ್ತಿ ಪಡೆದು ಲಖನೌ ತಂಡದ ಲಾಂಛನ ರೂಪಿಸಲಾಗಿದೆ ಎಂದು ಫ್ರಾಂಚೈಸಿ ತಿಳಿಸಿದೆ.

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಲಖನೌ ಮತ್ತು ಅಹ್ಮದಾಬಾದ್‌ ಫ್ರಾಂಚೈಸಿಗಳು ಹೊಸ ತಂಡಗಳಾಗಿ ಕಣಕ್ಕಿಳಿಯುತ್ತಿವೆ. ಅಹ್ಮದಾಬಾದ್‌ ತಂಡ ತನ್ನ ಹೆಸರು ಮತ್ತು ಲಾಂಛನವನ್ನು ಇನ್ನು ಪ್ರಕಟ ಮಾಡಿಲ್ಲ. ಈ ಬಾರಿ ಒಟ್ಟು 10 ತಂಡಗಳು ಟ್ರೋಫಿಗಾಗಿ ಕಾದಾಟ ನಡೆಸಲಿವೆ.

ಕಳೆದ ವರ್ಷ ಹೊಸ ತಂಡಗಳ ಖರೀದಿ ಸಲುವಾಗಿ ನಡೆದ ಹರಾಜಿನಲ್ಲಿ ಸಂಜೀವ್‌ ಗೋಯೆಂಕ ಅವರ ಆರ್‌ಪಿಎಸ್‌ಜಿ ಸಂಸ್ಥೆಯು ಬರೋಬ್ಬರಿ 7090 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಲಖನೌ ಫ್ರಾಂಚೈಸಿಯನ್ನು ಖರೀದಿ ಮಾಡಿತ್ತು. ಮತ್ತೊಂದೆಡೆ ಅಹ್ಮದಾಬಾದ್‌ ಫ್ರಾಂಚೈಸಿಯನ್ನು ಐರೆಲಾ ಕಂಪನಿ ಪ್ರೈವೇಟ್‌ ಲಿಮಿಟೆಡ್‌ (ಸಿವಿಸಿ ಕ್ಯಾಪಿಟಲ್‌ ಪಾರ್ಟ್ನರ್ಸ್‌) ಸಂಸ್ಥೆಯು 5635 ಕೋಟಿ ರೂ.ಗಳನ್ನು ನೀಡಿ ಖರೀದಿ ಮಾಡಿತ್ತು.

ಐಪಿಎಲ್‌ ವೇಳೆ ದೇಶಕ್ಕಾಗಿ ಆಡುತ್ತೇನೆಂಬ ಆಟಗಾರರು ಬೇಡ ಎಂದ ಗಂಭೀರ್‌!

ಐಪಿಎಲ್ 2022 ಟೂರ್ನಿ ಸಲುವಾಗಿ ಫೆಬ್ರವರಿ 12-13ರಂದ ಬೆಂಗಳೂರಿನಲ್ಲಿ ಮೆಗಾ ಆಕ್ಷನ್‌ ನಡೆಯಲಿದ್ದು, ಲಖನೌ ಸೂಪರ್‌ ಜಯಂಟ್ಸ್‌ ತಂಡ ಈಗಾಗಗಲೇ ತನ್ನ ಮೂರು ಸ್ಟಾರ್‌ ಆಟಗಾರರ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಕ್ಯಾಪ್ಟನ್‌ ಆಗಿ ಕೆಎಲ್‌ ರಾಹುಲ್‌ (17 ಕೋಟಿ ರೂ.) ಅವರನ್ನು ಭಾರಿ ಮೊತ್ತದ ಸಂಭಾವನೆಗೆ ತೆಗೆದುಕೊಂಡಿರುವ ಲಖನೌ, ಆಲ್‌ರೌಂಡರ್‌ ಮಾರ್ಕಸ್‌ ಸ್ಟೊಯ್ನಿಸ್‌ (9.2 ಕೋಟಿ ರೂ.) ಮತ್ತು ಯುವ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ (4 ಕೋಟಿ ರೂ.) ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಅಂದಹಾಗೆ ಆರ್‌ಪಿಎಸ್‌ಜಿ ಸಂಸ್ಥೆಯು ಈ ಮೊದಲು ರೈಸಿಂಗ್‌ ಪುಣೆ ಸೂಪರ್‌ ಜಯಂಟ್ಸ್‌ ತಂಡದ ಮಾಲೀಕತ್ವ ಹೊಂದಿತ್ತು. ಐಪಿಎಲ್‌ ಬೆಟ್ಟಿಂಗ್‌ ಹಗರಣ ಹಿನ್ನೆಲೆಯಲ್ಲಿ ಸಿಎಸ್‌ಕೆ ಮತ್ತು ಆರ್‌ಆರ್‌ ತಂಡಗಳು 2 ವರ್ಷ ಅಮಾನತ್ತಿನಲ್ಲಿ ಇದ್ದಾಗ ಆಡಿದ್ದ ಪುಣೆ ಸೂಪರ್‌ ಜಯಂಟ್ಸ್‌ ಒಮ್ಮೆ ಧೋನಿ ಸಾರಥ್ಯದಲ್ಲಿ ರನ್ನರ್ಸ್‌ಅಪ್‌ ಸ್ಥಾನ ಪಡೆದಿತ್ತು.

ಕೆಎಲ್‌ ರಾಹುಲ್‌ ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಸಂಭಾವನೆ ಸ್ವೀಕರಿಸಿದ ಆಟಗಾರನಾಗಿ ವಿರಾಟ್‌ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೊಹ್ಲಿ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ 2018-2021ರವರೆಗೆ ವಾರ್ಷಿಕ 17 ಕೋಟಿ ರೂ. ಸಂಭಾವನೆ ಸ್ವೀಕರಿಸಿದ್ದರು.

ಐಪಿಎಲ್‌: ಭವಿಷ್ಯದ ಸೂಪರ್ ಸ್ಟಾರ್‌ ಆಟಗಾರನ ಹೆಸರಿಸಿದ ರಾಹುಲ್‌!

ಈ ನಡುವೆ ಅಹ್ಮದಾಬಾದ್‌ ತಂಡ ತನ್ನಹೆಸರು ಘೋಷಿಸುವುದು ಬಾಕಿಯಿದ್ದು, ಈಗಾಗಲೇ ಮೂರು ಆಟಗಾರರನ್ನಾಗಿ ಹಾರ್ದಿಕ್‌ ಪಾಂಡ್ಯ (15 ಕೋಟಿ ರೂ.), ರಶೀದ್‌ ಖಾನ್‌ (15 ಕೋಟಿ ರೂ.) ಮತ್ತು ಶುಭಮನ್‌ ಗಿಲ್‌ (8 ಕೋಟಿ ರೂ.) ಅವರೊಟ್ಟಿಗೆ ಒಪ್ಪಂದ ಮಾಡಿಕೊಂಡಿದೆ.

ಲಖನೌ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್‌
1. ಕೆಎಲ್‌ ರಾಹುಲ್‌ (ನಾಯಕ/ಓಪನರ್‌)
2. ಇಶಾನ್‌ ಕಿಶನ್‌ (ವಿಕೆಟ್‌ಕೀಪರ್‌/ಓಪನರ್‌)
3. ಮನೀಶ್ ಪಾಂಡೆ (ಬ್ಯಾಟ್ಸ್‌ಮನ್‌)
4. ಮಾರ್ಕಸ್‌ ಸ್ಟೋಯ್ನಿಸ್‌ (ಆಲ್‌ರೌಂಡರ್‌)
5. ಶಾರುಖ್‌ ಖಾನ್‌ (ಆಲ್‌ರೌಂಡರ್‌)
6. ಶಿಮ್ರಾನ್‌ ಹೆಟ್ಮಾಯೆರ್‌ (ಬ್ಯಾಟ್ಸ್‌ಮನ್‌)
7. ಹರ್ಷಲ್‌ ಪಟೇಲ್‌ (ಬಲಗೈ ವೇಗಿ)
8. ರವಿ ಬಿಷ್ಣೋಯ್‌ (ಲೆಗ್ ಸ್ಪಿನ್ನರ್‌)
9. ಮೊಹಮ್ಮದ್‌ ಶಮಿ (ಬಲಗೈ ವೇಗಿ)
10. ಕಗಿಸೊ ರಬಾಡ (ಬಲಗೈ ವೇಗಿ)
11. ಯುಜ್ವೇಂದ್ರ ಚಹಲ್‌ (ಲೆಗ್‌ ಸ್ಪಿನ್ನರ್‌)



Read more

[wpas_products keywords=”deal of the day sale today offer all”]