ಹೌದು.. ನಕ್ಷತ್ರ ತಮ್ಮ ಮಗಳು ಎಂಬ ಸತ್ಯ ಚಂದ್ರಶೇಖರ್‌ಗೆ ಗೊತ್ತಾಗಿದೆ. ಆರತಿ ಚಂದ್ರಶೇಖರ್ ಹೆತ್ತ ಮಗಳು ನಕ್ಷತ್ರ ಎಂಬ ಸಂಗತಿ ಬಹಿರಂಗವಾಗಿದೆ. ಇದು ಕೆಲ ಹೊತ್ತಿನ ಹಿಂದೆಯಷ್ಟೇ ಬಿಡುಗಡೆಯಾಗಿರುವ ಇಂದಿನ ಸಂಚಿಕೆಯ ಪ್ರೋಮೋದಲ್ಲಿ ಸ್ಪಷ್ಟವಾಗಿದೆ.
ಶ್ವೇತಾ ಕನಸು?
ಚಂದ್ರಶೇಖರ್‌ಗೆ ನಿಜವಾಗಿಯೂ ಸತ್ಯ ಗೊತ್ತಾಗಿದ್ಯೋ ಅಥವಾ ಇದೆಲ್ಲಾ ಶ್ವೇತಾ ಕಂಡ ಕನಸೋ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳದುಬರಲಿದೆ.
ಶ್ವೇತಾಳ ಕುತಂತ್ರ ಬುದ್ಧಿ ಗೊತ್ತಾಗಿದೆ!
ತುಕಾರಾಂಗೆ ದುಡ್ಡಿನ ಆಸೆ ತೋರಿಸಿ ನಕ್ಷತ್ರಳನ್ನ ಮನೆಗೆ ಕಳುಹಿಸಿದ್ದು ಶ್ವೇತಾ… ನಕ್ಷತ್ರಳನ್ನ ಕಂಡ್ರೆ ಶ್ವೇತಾಗೆ ಆಗಲ್ಲ… ಶ್ವೇತಾಗೆ ನಕ್ಷತ್ರಳನ್ನ ಕಂಡ್ರೆ ಅಸೂಯೆ ಎಂಬ ಸಂಗತಿ ಚಂದ್ರಶೇಖರ್‌ಗೆ ಗೊತ್ತಾಗಿದೆ. ಆದರೆ, ಇದರ ಹಿಂದೆ ಶ್ವೇತಾಳ ಜನ್ಮರಹಸ್ಯ ಅಡಗಿದೆ. ತನ್ನ ಜನ್ಮರಹಸ್ಯ ಹೊರಗೆ ಬರಬಾರದು ಅಂತ ಶ್ವೇತಾ ಹೀಗೆಲ್ಲಾ ಮಾಡಿದ್ದಾಳೆ ಅಂತ ಚಂದ್ರಶೇಖರ್‌ಗೆ ಗೊತ್ತಿಲ್ಲ.
ಭೂಪತಿಗೆ ಏನೂ ತಿಳಿದಿಲ್ಲ!
ನಕ್ಷತ್ರಳನ್ನ ಮನೆಗೆ ಕಳುಹಿಸಿದ್ದರ ಹಿಂದೆ ಶ್ವೇತಾಳ ದುರ್ಬುದ್ಧಿ ಅಡಗಿದೆ ಎಂಬ ಸತ್ಯ ಭೂಪತಿಗೆ ಗೊತ್ತಿಲ್ಲ. ಒಂದ್ವೇಳೆ ಗೊತ್ತಾದರೆ, ಮದುವೆ ಕ್ಯಾನ್ಸಲ್ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.
ಶ್ವೇತಾ ಬಯಕೆ ಒಂದೇ..!
ತಾನು ಆರತಿ-ಚಂದ್ರಶೇಖರ್ ಮಗಳಲ್ಲ, ತುಕಾರಾಂ ಅವರ ಪುತ್ರಿ ಎಂಬ ಸತ್ಯ ಶ್ವೇತಾಗೆ ತಿಳಿದಿದೆ. ಆದರೆ, ಕೋಟ್ಯಂತರ ರೂಪಾಯಿ ಆಸ್ತಿ ಹಾಗೂ ಐಷಾರಾಮಿ ಜೀವನ ಬಿಟ್ಟು ಹೆತ್ತವರ ಬಳಿ ಹೋಗಿ ಮಧ್ಯಮ ವರ್ಗದವರಂತೆ ಬದುಕು ನಡೆಸಲು ಶ್ವೇತಾಗೆ ಇಷ್ಟವಿಲ್ಲ. ಹೇಳಿ ಕೇಳಿ ಭೂಪತಿ ಉದ್ಯಮಿ. ಹೀಗಾಗಿ ಆದಷ್ಟು ಬೇಗ ಭೂಪತಿಯನ್ನ ಮದುವೆಯಾಗಿಬಿಟ್ಟರೆ, ಐಷಾರಾಮಿ ಜೀವನವನ್ನು ಮುಂದುವರಿಸಬಹುದು ಎಂಬ ಲೆಕ್ಕಾಚಾರ ಶ್ವೇತಾ ತಲೆಯಲ್ಲಿ ಓಡುತ್ತಿದೆ. ಹೀಗಾಗಿ ಭೂಪತಿ ಜೊತೆಗೆ ಮದುವೆ ನಡೆಯುವವರೆಗೂ ತನ್ನ ಜನ್ಮರಹಸ್ಯ ಹೊರಗೆ ಬರಬಾರದು ಅಂತ ಶ್ವೇತಾ ಸಕಲ ರೀತಿಯಲ್ಲೂ ಪ್ರಯತ್ನ ಪಡುತ್ತಿದ್ದಾಳೆ.
ಶ್ವೇತಾಗೆ ತೊಂದರೆ ಕೊಡಲು ನಕ್ಷತ್ರ ತಯಾರಿಲ್ಲ!
ತಾನು ಆರತಿ-ಚಂದ್ರಶೇಖರ್ ಪುತ್ರಿ ಅಂತ ನಕ್ಷತ್ರಗೂ ಗೊತ್ತಾಗಿದೆ. ಆದರೆ, ಈ ಸತ್ಯ ಹೊರಗೆ ಬಂದರೆ ಶ್ವೇತಾಗೆ ಸಮಸ್ಯೆ ಆಗುತ್ತದೆ, ಭೂಪತಿಯೊಂದಿನ ಮದುವೆ ನಿಲ್ಲುತ್ತದೆ ಎಂಬುದರ ಅರಿವು ನಕ್ಷತ್ರಗಿದೆ. ಹೀಗಾಗಿ ಸತ್ಯವನ್ನು ತನ್ನ ಬಳಿಯೇ ನಕ್ಷತ್ರ ಬಚ್ಚಿಟ್ಟುಕೊಂಡಿದ್ದಾಳೆ. ಈ ಸತ್ಯವೆಲ್ಲ ಯಾವಾಗ ಆಚೆ ಬರುತ್ತೋ ಅಂತ ವೀಕ್ಷಕರು ಕಾಯುತ್ತಿದ್ದಾರೆ.
ಅಂದ್ಹಾಗೆ, ‘ಲಕ್ಷಣ’ ಧಾರಾವಾಹಿಯಲ್ಲಿ ನಕ್ಷತ್ರ ಆಗಿ ವಿಜಯಲಕ್ಷ್ಮೀ, ಭೂಪತಿಯಾಗಿ ಜಗನ್ನಾಥ್ ಚಂದ್ರಶೇಖರ್, ಶ್ವೇತಾ ಆಗಿ ಸುಕೃತಾ ನಾಗ್ ಅಭಿನಯಿಸುತ್ತಿದ್ದಾರೆ.
Read more
[wpas_products keywords=”deal of the day party wear dress for women stylish indian”]