
ಐಟಿಸಿ, ವಿಎಸ್‌ಟಿ ಇಂಡಸ್ಟ್ರೀಸ್ ಮತ್ತು ಗಾಡ್ಫ್ರೇ ಫಿಲಿಪ್ಸ್
ಐಟಿಸಿ, ವಿಎಸ್‌ಟಿ ಇಂಡಸ್ಟ್ರೀಸ್ ಮತ್ತು ಗಾಡ್ಫ್ರೇ ಫಿಲಿಪ್ಸ್ ಮೂರು ಕಂಪನಿಗಳ ಷೇರುಗಳು ಬಜೆಟ್ ದಿನದಂದು ಹೆಚ್ಚು ನಿಶ್ಚಲವಾಗಿರಲಾರದು. ಏಕೆಂದರೆ ಈ ಮೂರು ಕಂಪನಿಗಳು ಸಿಗರೇಟ್ ಮತ್ತು ತಂಬಾಕು ಸಂಸ್ಥೆಗಳು ಆಗಿದೆ. ಉದ್ಯಮವು ತೆರಿಗೆಗಳಿಂದ ಈ ಮುಕ್ತವಾಗಲಿದೆಯೇ ಎಂಬ ನಿಟ್ಟಿನಲ್ಲಿ ಈ ವಲಯವು ಚಿತ್ತ ಇರಿಸಿದೆ. ತಂಬಾಕು ಎಲೆಗಳನ್ನು ಹೊರತುಪಡಿಸಿ, ಸಿಗರೇಟ್‌ಗಳಂತಹ ತಂಬಾಕು ಉತ್ಪನ್ನಗಳು ಶೇಕಡ 28 ಜಿಎಸ್‌ಟಿಯನ್ನು ಹೊಂದಿದೆ. ತಂಬಾಕು ಎಲೆಗಳಿಗೆ ಶೇಕಡ 5 ತೆರಿಗೆ ವಿಧಿಸಲಾಗುತ್ತದೆ. ತಂಬಾಕುಗಳ ಮೇಲೆ ಸೆಸ್ ಕೂಡಾ ಇದೆ. ಬ್ರಾಂಡ್ ಹೆಸರನ್ನು ಹೊಂದಿರುವ ತಯಾರಿಸದ ತಂಬಾಕಿನ ಮೇಲೆ ಸೆಸ್ ಶೇಕಡ 65 ಆಗಿದೆ.

ತೆರಿಗೆ ಹೆಚ್ಚಳ ಷೇರುಗಳ ಮೇಲೆ ಪ್ರಭಾವ
ಯಾವುದೇ ತೆರಿಗೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಹೆಚ್ಚಿಸಿದರೆ ಅದು ಷೇರುಗಳ ಬೆಲೆಗಳ ಮೇಲೆ ಪ್ರಭಾವ ಬೀರುತ್ತದೆ. ವಿಎಸ್‌ಟಿ ಇಂಡಸ್ಟ್ರೀಸ್ 90 ವರ್ಷಗಳಿಗಿಂತ ಹೆಚ್ಚು ಕಾಲ ತಂಬಾಕು ಉದ್ಯಮವನ್ನು ನಡೆಸುತ್ತಿರುವ ಸಂಸ್ಥೆಯಾಗಿದೆ. ಕಂಪನಿಯು ಕಳೆದ ಅರ್ಧ ದಶಕದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಿಗರೇಟ್ ಕಂಪನಿಯಾಗಿದೆ. ಗಾಡ್‌ಫ್ರೇ ಫಿಲಿಪ್ಸ್ ಮತ್ತು ವಿಎಸ್‌ಟಿ ಇಂಡಸ್ಟ್ರೀಸ್‌ಗೆ ಹೋಲಿಸಿದರೆ ಐಟಿಸಿ ಬೆಲೆ ಚಲನೆಯ ವಿಷಯದಲ್ಲಿ ಕಡಿಮೆ ಅಸ್ಥಿರವಾಗಿದೆ. ಈ ಸಂಸ್ಥೆಯು ಬೇರೆ ಕ್ಷೇತ್ರದಲ್ಲಿಯೂ ತನ್ನ ಘಟಕ ಹೊಂದಿದೆ. ಎಫ್‌ಎಂಸಿಜಿ, ಹೋಟೆಲ್‌ಗಳು, ಪೇಪರ್ ಮತ್ತು ಪೇಪರ್ ಬೋರ್ಡ್‌ಗಳು ಇತ್ಯಾದಿಗಳಿಂದ ಗಮನಾರ್ಹ ಆದಾಯವನ್ನು ಪಡೆಯುತ್ತದೆ. ತಂಬಾಕು ಮತ್ತು ಪೂರಕ ಉತ್ಪನ್ನಗಳ ಮೇಲೆ ಕೇಂದ್ರ ಬಜೆಟ್‌ನಲ್ಲಿ ಯಾವುದೇ ತೆರಿಗೆಗಳನ್ನು ವಿಧಿಸದಿದ್ದರೆ, ಈ ಕಂಪನಿಗಳ ಷೇರುಗಳ ಬೆಲೆಗಳು ಏರುವುದು ಖಚಿತವಾಗಿದೆ. ಆದಾಗ್ಯೂ, ಸರ್ಕಾರದ ತೀವ್ರ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದರೆ, ಷೇರುಗಳ ಮೇಲೆ ನೆಗೆಟಿವ್ ಪ್ರಭಾವ ಬೀರುವ ಸಾಧ್ಯತೆ ಇದೆ.

ಬಜೆಟ್‌ಗೂ ಮುನ್ನ ಷೇರುಗಳನ್ನು ಖರೀದಿಸಬೇಕೇ?
ಬಜೆಟ್‌ಗೂ ಮುನ್ನ ನೀವು ಷೇರುಗಳನ್ನು ಖರೀದಿ ಮಾಡಬಹುದೇ ಎಂಬುವುದು ಮೂಲಭೂತ ಅಂಶಗಳಾಗಿರುತ್ತದೆ. ತೆರಿಗೆ ಎಂಬ ವಿಚಾರದ ಬಗ್ಗೆ ಸ್ಫಷ್ಟತೆ ದೊರೆಯದೆ ಈ ಷೇರು ಖರೀದಿ ಕೊಂಚ ರಿಸ್ಕ್ ಎಂದರೆ ತಪ್ಪಾಗಲಾರದು. ಆದರೆ ಈ ಸಂದರ್ಭದಲ್ಲಿ ಐಟಿಸಿ ಷೇರು ಖರೀದಿ ಲಾಭದಾಯಕವಾಗಿದೆ. ಇದರ ದರವು ಹೆಚ್ಚು ದುಬಾರಿಯಾಗಿಲ್ಲ. ಸ್ಟಾಕ್ ಸುಮಾರು ಶೇಕಡ 4.9ರಷ್ಟು ಲಾಭಾಂಶವನ್ನು ಪಡೆದಿದೆ.

ಇಲ್ಲಿ ಗಮನಿಸಿ
ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಮತ್ತು ಆದ್ದರಿಂದ ಹೂಡಿಕೆದಾರರು ಅಪಾಯವನ್ನು ಅರ್ಥಮಾಡಿಕೊಂಡು ಹೂಡಿಕೆ ಮಾಡಬೇಕಾಗಿದೆ. ಈ ಲೇಖನದ ಆಧಾರದಲ್ಲಿ ಯಾವುದೇ ನಷ್ಟ ಉಂಟಾದರೆ ಅದಕ್ಕೆ ಲೇಖಕರು ಮತ್ತು ಗ್ರೇನಿಯಮ್ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಜವಾಬ್ದಾರರಾಗಿರುವುದಿಲ್ಲ. ಲೇಖಕರಾಗಲಿ ಅಥವಾ ಕುಟುಂಬದವರಾಗಲಿ ಈ ಮೇಲೆ ಉಲ್ಲೇಖಿಸಲಾದ ಸಂಸ್ಥೆಯಲ್ಲಿ ಷೇರುಗಳನ್ನು ಹೊಂದಿಲ್ಲ.
Read more…
[wpas_products keywords=”deal of the day”]