Karnataka news paper

ಭಾರತದಲ್ಲಿ ಲಭ್ಯವಿರುವ 65 ಇಂಚಿನ ಅತ್ಯುತ್ತಮ ಗೇಮಿಂಗ್‌ ಸ್ಮಾರ್ಟ್‌ಟಿವಿಗಳು!


ಗೇಮಿಂಗ್‌

ಹೌದು, ಗೇಮಿಂಗ್‌ ಬೆಂಬಲಿಸುವ ಸ್ಮಾರ್ಟ್‌ಟಿವಿಗಳು ಹೆಚ್ಚಿನ ಗಾತ್ರದ ಆಯ್ಕೆಯನ್ನು ಹೊಂದಿದ್ದರೆ ಉತ್ತಮ ಅನುಭವ ಪಡೆಯಬಹುದಾಗಿದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಗೇಮಿಂಗ್‌ ಬೆಂಬಲಿಸುವ 65 ಇಂಚಿನ ಸ್ಮಾರ್ಟ್‌ಟಿವಿಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಈ ಸ್ಮಾರ್ಟ್‌ಟಿವಿಗಳು ನಿಮಗೆ ಹೆಚ್ಚಿನ ಬ್ರೈಟ್‌ನೆಸ್‌ ಮತ್ತು ಹೆಚ್ಚಿನ ರಿಫ್ರೆಶ್ ರೇಟ್‌ ಅನ್ನು ಹೊಂದಿವೆ. ಜೊತೆಗೆ ಮೀಸಲಾದ ಗೇಮಿಂಗ್ ಮೋಡ್‌ಗಳೊಂದಿಗೆ ಬರುವ ಟಿವಿಗಳನ್ನು ಆಯ್ಕೆಮಾಡುವ ಅವಶ್ಯಕತೆ ಇದೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ಗೇಮಿಂಗ್‌ಗಾಗಿ ನೀವು ಖರೀದಿಸಬಹುದಾದ 65 ಇಂಚಿನ ಅತ್ಯುತ್ತಮ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಬ್ರಾವಿಯಾ XR-65X90J

ಸೋನಿ ಬ್ರಾವಿಯಾ XR-65X90J

ಮಾರುಕಟ್ಟೆಯಲ್ಲಿ ಲಭ್ಯವಿರುವ 65 ಇಂಚಿನ ಅತ್ಯುತ್ತಮ ಗೇಮಿಂಗ್ ಸ್ಮಾರ್ಟ್‌ಟಿವಿಗಳ ಪೈಕಿ ಸೋನಿ ಬ್ರಾವಿಯಾ XR-65X90J ಕೂಡ ಒಂದಾಗಿದೆ. ಇದು 65 ಇಂಚಿನ 4K TV ಆಗಿದ್ದು, ಗೇಮಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ HDMI 2.1 ಪೋರ್ಟ್ ಅನ್ನು ಹೊಂದಿದ್ರದು, ಹೆಚ್ಚಿನ ರೆಸಲ್ಯೂಶನ್ ಮತ್ತು ಫ್ರೇಮ್ ರೇಟ್‌ ಅನ್ನು ಒಳಗೊಂಡಿದೆ. ಜೊತೆಗೆ 120 fps ನಲ್ಲಿ 4K ಯೊಂದಿಗೆ ಇನ್‌ಪುಟ್ ಲ್ಯಾಗ್ ಅನ್ನು ಕಡಿಮೆ ಮಾಡುತ್ತದೆ. ಈ 4K ಟಿವಿಯು ಗೇಮಿಂಗ್‌ ಮೋಡ್ ಮತ್ತು ವೇರಿಯಬಲ್ ರಿಫ್ರೆಶ್ ರೇಟ್ ಅನ್ನು ಸಹ ಹೊಂದಿದೆ. ಇದು 4K ಅಲ್ಟ್ರಾ HD ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿ ಒಟ್ಟು 4 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳೊಂದಿಗೆ ಬರುತ್ತದೆ. ಇದಲ್ಲದೆ ಡಾಲ್ಬಿ ಅಟ್ಮಾಸ್ ಮತ್ತು ಆಂಬಿಯೆಂಟ್ ಆಪ್ಟಿಮೈಸೇಶನ್ ಜೊತೆಗೆ 20W ಸೌಂಡ್ ಔಟ್‌ಪುಟ್ ಅನ್ನು ನೀಡಲಿದೆ. ಪ್ರಸ್ತುತ ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 1,51,990ರೂ. ಬೆಲೆಗೆ ಲಭ್ಯವಿದೆ.

ಎಲ್‌ಜಿ 65UP7500PTZ

ಎಲ್‌ಜಿ 65UP7500PTZ

ಇದು ಎಲ್‌ಜಿ ಕಂಪೆನಿಯ ಪ್ರಮುಖ ಗೇಮಿಂಗ್‌ ಸ್ಮಾರ್ಟ್‌ಟಿವಿಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್‌ಟಿವಿ 65 ಇಂಚಿನ 4K ಟಿವಿಯಾಗಿದ್ದು HDR ಗೇಮಿಂಗ್ ಇಂಟರೆಸ್ಟ್ ಗ್ರೂಪ್ ಅನ್ನು ಹೊಂದಿದೆ. ಇದು HDR ಗೇಮಿಂಗ್ ಅನ್ನು ಉತ್ತಮಗೊಳಿಸುತ್ತದೆ. ಈ ಸ್ಮಾರ್ಟ್‌ಟಿವಿ ಗೇಮ್ ಆಪ್ಟಿಮೈಸರ್ ಮತ್ತು ಲೋ ಇನ್‌ಪುಟ್ ಲ್ಯಾಗ್ ಅನ್ನು ಸಹ ಹೊಂದಿದೆ. ಇದು 60Hz ರಿಫ್ರೆಶ್ ದರದೊಂದಿಗೆ 4K UHD ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಇದರೊಂದಿಗೆ ನಿಮ್ಮ ಗೇಮಿಂಗ್ ಕನ್ಸೋಲ್ ಮತ್ತು ಇತರ ಡಿವೈಸ್‌ಗಳನ್ನು ಕನೆಕ್ಟ್‌ ಮಾಡುವುದಕ್ಕೆ ನೀವು ಎರಡು HDMI ಪೋರ್ಟ್‌ಗಳು ಮತ್ತು ಒಂದು USB ಪೋರ್ಟ್ ಅನ್ನು ಕೂಡ ಬೆಂಬಲಿಸಲಿದೆ. ಪ್ರಸ್ತುತ ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 84,000.ರೂ ಬೆಲೆಗೆ ಲಭ್ಯವಿದೆ.

Vu 65LX

Vu 65LX

ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರೀಮಿಯಂ ಆಯ್ಕೆಗಳಿಗೆ ಹೋಲಿಸಿದರೆ Vu 65LX ಸ್ಮಾರ್ಟ್‌ಟಿವಿ ಕೈಗೆಟುಕುವ ಬೆಲೆಯ ಗೇಮಿಂಗ್‌ ಟಿವಿ ಆಗಿದೆ. ಈ ಸ್ಮಾರ್ಟ್ ಟಿವಿಯು ಸುಗಮ ಗೇಮಿಂಗ್‌ಗಾಗಿ ನಿಮ್ಮ ಸ್ಕ್ರೀನ್‌ ರಿಫ್ರೆಶ್‌ ರೇಟ್‌ನೊಂದಿಗೆ ಕಂಟೆಂಟ್‌ ಫ್ರೇಮ್ ರೇಟ್‌ಗೆ ಸೆಟ್‌ ಆಗುವ ವರ್ಧಿತ MEMC ಯನ್ನು ಹೊಂದಿದೆ. ಇದು HDR10+ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ ಡಾಲ್ಬಿ ವಿಷನ್ ಅನ್ನು ಹೊಂದಿದೆ. ಇದು ಒಟ್ಟು ಆರು JBL ಸ್ಪೀಕರ್‌ಗಳು ಇಂಟರ್‌ಬಿಲ್ಟ್‌ ಮತ್ತು 100W ಸೌಂಡ್‌ಬಾರ್‌ನೊಂದಿಗೆ ಬರುವುದರಿಂದ ಸೌಂಡ್‌ ಗುಣಮಟ್ಟದ ಬಗ್ಗೆ ಚಿಂತಿಸಬೇಕಾಗಿಲ್ಲ. ಪ್ರಸ್ತುತ ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 63,999ರೂ ಬೆಲೆಗೆ ಲಭ್ಯವಾಗಲಿದೆ.

ಹಿಸೆನ್ಸ್ 65A73F

ಹಿಸೆನ್ಸ್ 65A73F

ಹಿಸೆನ್ಸ 65A73F ಸ್ಮಾರ್ಟ್‌ಟಿವಿ 65 ಇಂಚಿನ ಗೇಮಿಂಗ್ ಟಿವಿಗಳಲ್ಲಿ ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಟಿವಿ ಮೀಸಲಾದ ಗೇಮಿಂಗ್ ಮೋಡ್‌ ಅನ್ನು ಒಳಗೊಂಡಿದೆ. ಇದು ಕನಿಷ್ಟ ಇನ್‌ಪುಟ್ ಲ್ಯಾಗ್ ಅನ್ನು ನೀಡುತ್ತದೆ. ಆದ್ದರಿಂದ ನೀವು ಸುಗಮ ಗೇಮಿಂಗ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಹಿಸೆನ್ಸ್ ಟಿವಿಯು ಡಾಲ್ಬಿ ವಿಷನ್ ಎಚ್‌ಡಿಆರ್, ಎಚ್‌ಡಿಆರ್ 10+, ಬ್ರೈಟ್‌ನೆಸ್‌ ವೈಟ್‌ ಮತ್ತು ಡೀಪ್‌ ಬ್ಲಾಕ್‌ ಅಲ್ಟ್ರಾ ಡಿಮ್ಮಿಂಗ್ ಮತ್ತು ಎಚ್‌ಡಿಆರ್ ಅನ್ನು ಒಳಗೊಂಡಿದೆ. ಇದು ಸರೌಂಡ್ ಸೌಂಡ್ ಅನುಭವಕ್ಕಾಗಿ ಡಾಲ್ಬಿ ಅಟ್ಮಾಸ್ ಜೊತೆಗೆ JBL ನಿಂದ 102W 6-ಸ್ಪೀಕರ್ ವ್ಯವಸ್ಥೆಯನ್ನು ಹೊಂದಿದೆ. ಪ್ರಸ್ತುತ ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 64,990ರೂ. ಬೆಲೆಗೆ ಲಭ್ಯವಿದೆ.

ರೆಡ್ಮಿ X65

ರೆಡ್ಮಿ X65

ರೆಡ್ಮಿ X65 ಸ್ಮಾರ್ಟ್‌ಟಿವಿ 65 ಇಂಚಿನ ಬಜೆಟ್‌ ಸ್ನೇಹಿ ಗೇಮಿಂಗ್‌ ಟಿವಿ ಆಗಿದೆ. ಈ ಸ್ಮಾರ್ಟ್‌ಟಿವಿ ಮೂರು HDMI 2.1 ಜೊತೆಗೆ eARC ಮತ್ತು ALLM ಬೆಂಬಲವನ್ನು ಒಳಗೊಂಡಿದೆ. ಇದು ಗೇಮಿಂಗ್‌ಗೆ ಸೂಕ್ತವಾದ ಆಯ್ಕೆಯಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ HDR10+ ಮತ್ತು ಡಾಲ್ಬಿ ವಿಷನ್ ಅನ್ನು ಒಳಗೊಂಡಿದೆ. ಇದಲ್ಲದೆ ಡಾಲ್ಬಿ ಆಡಿಯೋ, DTS Virtual:X ಮತ್ತು ಡಾಲ್ಬಿ ಅಟ್ಮೋಸ್‌ ಜೊತೆಗೆ 30W ಸ್ಪೀಕರ್‌ಗಳನ್ನು ಸಹ ದೊರೆಯಲಿದೆ. ಹಾಗೆಯೇ ಇಂಟರ್‌ಬಿಲ್ಟ್‌ ಕ್ರೋಮಾಕಾಸ್ಟ್‌, ಗೂಗಲ್‌ ಅಸಿಸ್ಟೆಂಟ್‌ ಮತ್ತು ಶಿಯೋಮಿ ಕಸ್ಟಮ್ ಲಾಂಚರ್ ಪ್ಯಾಚ್‌ವಾಲ್‌ನಂತಹ ಫೀಚರ್ಸ್‌ಗಳನ್ನು ಸಹ ಹೊಂದಿದೆ. ಪ್ರಸ್ತುತ ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 61,999ರೂ.ಬೆಲೆಗೆ ಲಭ್ಯವಾಗಲಿದೆ.



Read more…

[wpas_products keywords=”smartphones under 15000 6gb ram”]