ನಾಯಕತ್ವದ ಕೊರತೆ

ಸ್ಯಾಂಡಲ್‌ವುಡ್‌ಗೆ ಅಂಬರೀಷ್ ನಂತರ ಸಮರ್ಥ ನಾಯಕತ್ವದ ಕೊರತೆ ಎದುರಾಗಿದೆ. ಚಿತ್ರರಂಗದ ಪರವಾಗಿ ಸರ್ಕಾರವನ್ನು ದಿಟ್ಟವಾಗಿ ಪ್ರಶ್ನೆ ಮಾಡುವವರು ಮತ್ತು ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳುವವರು ಯಾರೂ ಇಲ್ಲದಂತಾಗಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಆಗಾಗ ಮುಖ್ಯಮಂತ್ರಿಯ ಬಳಿಗೆ ಹೋಗುತ್ತಿರುತ್ತಾರೆ. ಆದರೆ ಸರ್ಕಾರ ಅಥವಾ ಮುಖ್ಯಮಂತ್ರಿ ಈ ಕಡೆ ಹೆಚ್ಚು ಗಮನ ಕೊಡುತ್ತಿಲ್ಲ. ಇದರಿಂದಾಗಿ ಚಿತ್ರಮಂದಿರಗಳ ಮೇಲೆ ಕೊರೊನಾ ಆರೋಗ್ಯ ನಿಯಮಗಳು ಕೊನೆ ಕ್ಷಣದವರೆಗೂ ಸಡಿಲವಾಗುತ್ತಿಲ್ಲಎಂಬ ಮಾತನ್ನು ಹಲವರು ವ್ಯಕ್ತಪಡಿಸಿದ್ದಾರೆ.
ನೈಟ್ ಕರ್ಫ್ಯೂ, 50:50 ರೂಲ್ಸ್ ಕ್ಯಾನ್ಸಲ್ ಆದರೂ ಥಿಯೇಟರ್‌ಗಳಿಗೆ ಮುಂದುವರಿದ ನಿರ್ಬಂಧ!
ಇಂದು ಪ್ರಸ್ತಾವನೆ

ಚಿತ್ರಮಂದಿರಗಳಿಗೆ ನಿಯಮ ಸಡಿಲಿಕೆ ಮಾಡದ ಕಾರಣ ಶನಿವಾರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಸೇರಿದಂತೆ ಒಂದಷ್ಟು ಮಂದಿ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ. ಅವರು ಸೋಮವಾರ ಬಂದು ಟೆಕ್ನಿಕಲ್ ಕಮಿಟಿ ಮುಂದೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದಾರಂತೆ. ‘ಸೋಮವಾರ ಟೆಕ್ನಿಕಲ್ ಕಮಿಟಿ ಮುಂದೆ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಮತ್ತು ನಾನು ಹೋಗುತ್ತಿದ್ದೇವೆ. ಅಲ್ಲಿ ನಮಗಾಗಿರುವ ನಷ್ಟ ಮತ್ತು ಇತರೆ ಸಂಕಷ್ಟಗಳ ಬಗ್ಗೆ ಅರಿವು ಮೂಡಿಸುತ್ತೇವೆ. ಈ ಶುಕ್ರವಾರದೊಳಗೆ ನಮಗೆ ಶೇ.100 ಸೀಟಿಂಗ್ ವ್ಯವಸ್ಥೆಗೆ ಅನುಮತಿ ನೀಡಿ ಎಂಬ ಮನವಿ ಸಲ್ಲಿಸುತ್ತೇವೆ’ ಎಂದು ಜೈರಾಜ್ ಹೇಳಿದ್ದಾರೆ.
ವೀಕೆಂಡ್ ಕರ್ಫ್ಯೂ ಕ್ಯಾನ್ಸಲ್ ಆದ ಬೆನ್ನಲ್ಲೇ ಸಿನಿಮಾ ಬಿಡುಗಡೆಗೆ ಭರದ ಸಿದ್ಧತೆ
ಚಿತ್ರಮಂದಿರಕ್ಕೆ ಸಂಕಷ್ಟ

ಈಗಾಗಲೇ ಸಿನಿಮಾಗಳಿಲ್ಲದೆ ಮೈಸೂರಿನಂಥ ದೊಡ್ಡ ನಗರದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಿಯಮಗಳು ಬೇಗ ಸಡಿಲವಾಗದಿದ್ದರೆ ಶಾಶ್ವತವಾಗಿ ಚಿತ್ರಮಂದಿರ ಮುಚ್ಚಬೇಕಾಗುತ್ತದೆ ಎಂದು ಚಿತ್ರಮಂದಿರದ ಮಾಲೀಕರು ಹೇಳಿದ್ದಾರೆ. ಸರ್ಕಾರದ ಕೆಲವು ಕಠಿಣ ನಿಯಮಗಳಿಂದಾಗಿ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಭವಿಷ್ಯ ಕೂಡ ಅತಂತ್ರವಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಚಿತ್ರಮಂದಿರಗಳ ಸಮಸ್ಯೆ ಒಂದು ಕಡೆಯಾದರೆ, ಇತ್ತ ‘ಪೆಟ್ರೋಮ್ಯಾಕ್ಸ್’, ‘ತೋತಾಪುರಿ’, ‘ಓಲ್ಡ್ ಮಾಂಕ್’, ‘ಅವತಾರ ಪುರುಷ’, ‘ವಿಕ್ರಾಂತ್ ರೋಣ’ ಸೇರಿದಂತೆ ಹಲವು ಸಿನಿಮಾಗಳು ಸಾಲು ಸಾಲಾಗಿ ಬಿಡುಗಡೆಗೆ ಸಿದ್ಧವಾಗಿವೆ. ಸರ್ಕಾರ ಅನುಮತಿ ಕೊಡುವುದು ಯಾವಾಗ? ಮತ್ತು ಇವೆಲ್ಲವೂ ರಿಲೀಸ್ ಆಗುವುದು ಯಾವಾಗ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಲವಲವಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಫೆಬ್ರವರಿ ಮೊದಲ ವಾರ ಕಳೆದ ತಕ್ಷಣ ಚಿತ್ರಮಂದಿರಗಳಿಗೂ ಶೇ.100 ಸೀಟಿಂಗ್ ವ್ಯವಸ್ಥೆಯ ಅನುಮತಿಯನ್ನು ಸರ್ಕಾರ ನೀಡಲಿದೆ. ಆದರೆ ಅಷ್ಟೊತ್ತಿಗೆ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಬೇಕು ಅಷ್ಟೇ ಎಂದು ಚಿತ್ರರಂಗದ ಪ್ರಮುಖರೊಬ್ಬರು ಹೇಳಿದ್ದಾರೆ.
ಒಟಿಟಿಗಿಂತ ಸಿನಿಮಾ ರಂಗಕ್ಕೆ ಚಿತ್ರಮಂದಿರವೇ ಆಧಾರ: ಥಿಯೇಟರ್ ಯಾವತ್ತಿದ್ದರೂ ಕಿಂಗ್!
ತೆಲಂಗಾಣ ಶೇ. 100

ನೆರೆಯ ತೆಲಂಗಾಣದ ಚಿತ್ರಮಂದಿರದಲ್ಲಿ ಶೇ. 100 ಸೀಟಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಅಲ್ಲಿ ಕೋವಿಡ್ ನಿಯಮಗಳಲ್ಲಿಯೂ ಚಿತ್ರಮಂದಿರಗಳು ಅಬಾಧಿತವಾಗಿ ನಡೆದವು. ನಾಗಾರ್ಜುನ ಮತ್ತು ನಾಗಚೈತನ್ಯ ನಟಿಸಿದ್ದ ‘ಬಂಗಾರ್ರಾಜು’ ಹಿಟ್ ಆಗಿದೆ. ತಮಿಳುನಾಡು, ಆಂಧ್ರಪ್ರದೇಶ, ಕೇರಳದಲ್ಲಿ ಶೇ. 50 ಸೀಟಿಂಗ್ ವ್ಯವಸ್ಥೆಯೇ ಜಾರಿಯಲ್ಲಿದೆ.
‘ಸರ್ಕಾರ ನೂರು ಸೀಟು ಭರ್ತಿಗೆ ಆದೇಶ ನೀಡಿದ ಮೇಲೆ ವಾರಕ್ಕೆರಡು ಸಿನಿಮಾಗಳು ಬಿಡುಗಡೆಯಾದರೆ ಚಿತ್ರಮಂದಿರಗಳು ಉಸಿರಾಡಲು ಸಾಧ್ಯ. ಸರ್ಕಾರದ ನಿರ್ಧಾರವನ್ನು ನಾವು ಕಾಯುತ್ತಿದ್ದೇವೆ’ ಎಂದಿದ್ದಾರೆ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್,
‘ಸಿನಿಮಾ ಪ್ರದರ್ಶನ ಕ್ಲೋಸ್ಡ್ ಆಡಿಟೋರಿಯಂನಲ್ಲಿ ನಡೆಯುವುದರಿಂದ ನಿಯಮಗಳನ್ನು ಸಡಿಲಿಕೆ ಮಾಡಿಲ್ಲ ಎಂಬ ಮಾತು ಕೇಳಿ ಬಂದಿದೆ. ಸೋಮವಾರ ಟೆಕ್ನಿಕಲ್ ಕಮಿಟಿಯೊಂದಿಗೆ ಮಾತನಾಡುತ್ತೇವೆ. ಸಚಿವ ಅಶೋಕ್ ಕೂಡ ನಮ್ಮ ಜತೆ ಇರುತ್ತಾರೆ’ ಅಂತ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ತಿಳಿಸಿದ್ದಾರೆ.
‘ಥಿಯೇಟರ್ ಪ್ರವೇಶಕ್ಕೆ ಶೇ.50ರ ಸೀಟು ನಿರ್ಬಂಧ ಬೇಡವೆಂದು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ’ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
Read more
[wpas_products keywords=”deal of the day party wear dress for women stylish indian”]