Karnataka news paper

ಕೆಎಸ್ ಆರ್ ಟಿಸಿ ಬಸ್ ಚಾಲಕನಿಗೆ ಜೈಲು ಶಿಕ್ಷೆ ಬದಲು ದಂಡಕ್ಕೆ ಸೀಮಿತಗೊಳಿಸಿದ ಹೈಕೋರ್ಟ್: ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದು


The New Indian Express

ಬೆಂಗಳೂರು: ವಿಚಾರಣಾಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಿದ್ದುಪಡಿ ತಂದು ಆದೇಶ ಹೊರಡಿಸಿದೆ. ಅದು ಕೆಎಸ್ ಆರ್ ಟಿಸಿ ಚಾಲಕರಿಗೆ ಸಂಬಂಧಿಸಿದ್ದು. ಚಾಲಕನಿಗೆ ನೀಡಿದ ಶಿಕ್ಷೆ ಆತನ ವೃತ್ತಿಯ ಮೇಲೆ ಪರಿಣಾಮ ಬೀರಿ ಆತನ ಉದ್ಯೋಗದ ಬಗ್ಗೆ ಕಪ್ಪುಚುಕ್ಕೆ ತೋರಿಸಬಾರದು ಎಂದು ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಚಾಲಕನಿಗೆ ಕೇವಲ ದಂಡ ವಿಧಿಸುವ ಮೂಲಕ ಜೈಲುಶಿಕ್ಷೆಯಿಂದ ಪಾರುಮಾಡಿದೆ.

ಎರಡೂ ಕಡೆಯ ವಾದ ವಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ವಿಚಾರಣಾಧೀನ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ. 

ಏನಿದು ಪ್ರಕರಣ?: 2014ರ ಆಗಸ್ಟ್ 14ರಂದು ಶಿವಮೊಗ್ಗ ಜಿಲ್ಲೆಯ ದೇವೇಂದ್ರಪ್ಪ ಕೆಎಸ್ ಆರ್ ಟಿಸಿ ಬಸ್ಸನ್ನು ಚಲಾಯಿಸುವಾಗ ನಿರ್ಲಕ್ಷ್ಯದಿಂದ ವೇಗವಾಗಿ ಚಾಲನೆ ಮಾಡಿ ಚಾರ್ಮಾಡಿ ಘಾಟ್ ಬಳಿ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದ್ದರು. 

ಭಾರತೀಯ ದಂಡ ಸಂಹಿತೆ ಸೆಕ್ಷನ್ 279 ಮತ್ತು 337ರಡಿಯಲ್ಲಿ ಜೆಎಂಎಫ್ ಸಿ ನ್ಯಾಯಾಲಯ ಅಪರಾಧಿ ಎಂದು ತೀರ್ಪು ನೀಡಿ ಎರಡು ತಿಂಗಳು ಜೈಲು ಶಿಕ್ಷೆ ಸಾವಿರ ರೂಪಾಯಿ ದಂಡ ವಿಧಿಸುವಂತೆ ದೇವೇಂದ್ರಪ್ಪ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಜೆಎಂಎಫ್ ಸಿ ನ್ಯಾಯಾಲಯ ಆದೇಶ ಪ್ರಶ್ನಿಸಿ ದಕ್ಷಿಣ ಕನ್ನಡದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ದೇವೇಂದ್ರಪ್ಪ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅದು ವಜಾಗೊಂಡಿತ್ತು. 

ಹೀಗಾಗಿ ದೇವೇಂದ್ರಪ್ಪ ಹೈಕೋರ್ಟ್ ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ದೇವೇಂದ್ರಪ್ಪ ಪರ ವಕೀಲರು ಚಾರ್ಮಾಡಿ ಘಾಟ್ ಭಾಗದಲ್ಲಿ ತಿರುವಿನಲ್ಲಿ ಕೇವಲ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು ಎಂದು ಪರಿಗಣಿಸುವಂತೆ ವಾದಿಸಿದ್ದರು.



Read more

[wpas_products keywords=”deal of the day”]