”ಬೇಹುಗಾರಿಕೆಗಾಗಿ ಬಳಸುವ ಪೆಗಾಸಸ್ ತಂತ್ರಾಂಶವನ್ನು ಭಾರತ ಖರೀದಿಸಿರುವ ಕುರಿತು ಜನವರಿ 28ರಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ‘ಸ್ಫೋಟಕ ಅಂಶಗಳುಳ್ಳ ವರದಿ’ ಪ್ರಕಟಿಸಿದೆ. ಹಾಗಾಗಿ, ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸಮಿತಿಯು ವರದಿಯ ಅಂಶಗಳನ್ನು ಪರಿಗಣಿಸಬೇಕು,” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
”ಪತ್ರಿಕೆಯಲ್ಲಿ ವರದಿ ಆಗಿರುವ ಕುರಿತು ಸಮಿತಿಯು ಕೇಂದ್ರ ಸರಕಾರದ ಪ್ರತಿಕ್ರಿಯೆ ಪಡೆಯಬೇಕು. ಇದರ ಕುರಿತು ಹಣಕಾಸು ಸಚಿವಾಲಯ, ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಸಚಿವಾಲಯಗಳು ಸಹ ಸ್ಪಷ್ಟನೆ ನೀಡಬೇಕು. ಇದರಿಂದ ಸಮಿತಿಯ ತನಿಖೆಗೂ ಅನುಕೂಲವಾಗಲಿದೆ,” ಎಂದು ತಿಳಿಸಿದೆ.
ಭಾರತದಲ್ಲಿ ಪತ್ರಕರ್ತರು, ಗಣ್ಯರು, ರಾಜಕಾರಣಿಗಳು ಸೇರಿ ಹಲವರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಕುರಿತು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ಪ್ರಕರಣದ ಕುರಿತು ತನಿಖೆ ನಡೆಸಲು ಕಳೆದ ವರ್ಷ ಸುಪ್ರೀಂ ಕೋರ್ಟ್ ನ್ಯಾ.ಆರ್.ವಿ. ರವೀಂದ್ರನ್ ಸಮಿತಿ ರಚಿಸಿದೆ. ಈ ನಡುವೆ, ಪೆಗಾಸಸ್ ಕುರಿತು ಸದನಕ್ಕೆ ತಪ್ಪು ಮಾಹಿತಿ ನೀಡಿರುವ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಮಂಡನೆ ಅವಕಾಶ ನೀಡುವಂತೆ ಕೋರಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಅಧೀರ್ ರಂಜನ್ ಚೌಧರಿ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಸೋಮವಾರದಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಪೆಗಾಸಸ್ ಸ್ಪೈವೇರ್ ವಿವಾದವನ್ನು ವಿರೋಧ ಪಕ್ಷಗಳು ಮತ್ತೆ ಪ್ರಸ್ತಾಪಿಸುವ ಮೂಲಕ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸುವ ನಿರೀಕ್ಷೆ ಇದೆ. 2017ರಲ್ಲಿ ಭಾರತ-ಇಸ್ರೇಲ್ ನಡುವೆ ಬೃಹತ್ 200 ಕೋಟಿ ಡಾಲರ್ ಮೊತ್ತದ ಒಪ್ಪಂದ ಕುದುರಿದ್ದು, ಅದರ ಕೇಂದ್ರ ಬಿಂದು ಪೆಗಾಸಸ್ ಸ್ಪೈವೇರ್ ಮತ್ತು ಕ್ಷಿಪಣಿ ವ್ಯವಸ್ಥೆ ಖರೀದಿ ಒಡಂಬಡಿಕೆ’ ಎಂದು ಅಮೆರಿಕದ ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿತ್ತು.
ಪ್ಯಾಲೆಸ್ತೀನ್ ವಿಚಾರದಲ್ಲಿ ಇಸ್ರೇಲ್ ಪರ ಒಲವು ಹೊಂದಿರುವ ಭಾರತ, ಸದಾ ಸಮತೋಲನ ಕಾಯ್ದುಕೊಳ್ಳುವ ಸರ್ಕಸ್ ಮಾಡುತ್ತ ಬಂದಿದೆ. 2017ರಲ್ಲಿ ಇದೇ ವಿಷಯವನ್ನು ಮುನ್ನೆಲೆಯಲ್ಲಿ ತೋರಿಸಿ ಪ್ರಧಾನಿ ಮೋದಿ ಇಸ್ರೇಲಿಗೆ ಭೇಟಿ ನೀಡಿದ್ದರು. ಅಂದಿನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಮೋದಿ ಬೀಚ್‌ನಲ್ಲಿ ಬರಿಗಾಲಿನಿಂದ ನಡೆದ್ದು ಸುದ್ದಿಯಾಗಿತ್ತು. ‘ಅದೆಲ್ಲವೂ ಒಪ್ಪಂದದ ಮುಸುಕಿನಲ್ಲಿ ನಡೆದ ವ್ಯವಸ್ಥಿತ ತಂತ್ರಗಾರಿಕೆಯಾಗಿತ್ತು’ ಎಂದು ವರದಿ ತಿಳಿಸಿದೆ.
‘200 ಕೋಟಿ ಡಾಲರ್ ಮೊತ್ತದ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದವೇ ಅಂದು ಇಬ್ಬರು ಗಣ್ಯರ ಭೇಟಿಯ ಒಳಮರ್ಮವಾಗಿತ್ತು. ಈ ಒಪ್ಪಂದದ ನಂತರ 2019ರಲ್ಲಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಭಾರತಕ್ಕೆ ಅಪರೂಪದ ಭೇಟಿ ನೀಡಿದ್ದರು. ಇವರ ಕೊಡುಕೊಳ್ಳುವ ವ್ಯವಹಾರದ ಭಾಗವಾಗಿಯೇ ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಭೆಯಲ್ಲಿ ಪ್ಯಾಲೆಸ್ತೇನ್ ವಿಷಯ ಪ್ರಸ್ತಾಪವಾದಾಗ ಭಾರತವು ಇಸ್ರೇಲ್ ಪರ ಮತ ಹಾಕಿತ್ತು ಎಂದು ವರದಿ ಉಲ್ಲೇಖ ಮಾಡಿತ್ತು.
Read more
[wpas_products keywords=”deal of the day sale today offer all”]