ಬೆಂಗಳೂರು: ಭಾನುವಾರ ಸಂಜೆ (ಜ.30) ಕೊನೆಗೊಂಡಂತೆ ಕಳೆದ 24 ತಾಸಿನ ಅವಧಿಯಲ್ಲಿ ರಾಜ್ಯದಲ್ಲಿ ಹೊಸದಾಗಿ 28,264 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯು ತಿಳಿಸಿದೆ.
ಇದರೊಂದಿಗೆ ಕೊರೊನಾ ಸೋಂಕಿನ ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 37.85 ಲಕ್ಷ ದಾಟಿದೆ.
ಇದೇ ಅವಧಿಯಲ್ಲಿ 68 ಸೋಂಕಿತರು ಮೃತರಾಗಿದ್ದು, ಇದುವರೆಗೆ ಒಟ್ಟು 38,942 ಮಂದಿ ಮೃತಪಟ್ಟಿದ್ದಾರೆ.
ಇಂದಿನ 30/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/WvFZ40fdlp@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/Ie6uAwYQeO
— K’taka Health Dept (@DHFWKA) January 30, 2022
ಭಾನುವಾರ 29,244 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಒಟ್ಟು ಬಿಡುಗಡೆ ಹೊಂದಿರುವವರ ಸಂಖ್ಯೆ 34.95 ಲಕ್ಷ ದಾಟಿದೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,51,084ಕ್ಕೆ ತಲುಪಿದೆ. ದೈನಂದಿನ ಕೋವಿಡ್ ದೃಢ ಪ್ರಮಾಣ ಶೇ 16.38 ಆಗಿದೆ.
ಬೆಂಗಳೂರಿನಲ್ಲಿ ಹೊಸದಾಗಿ 11,938 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 14 ಮಂದಿ ಮೃತಪಟ್ಟಿದ್ದಾರೆ.
ಇನ್ನುಳಿದಂತೆ ಮೈಸೂರಿನಲ್ಲಿ (2322), ಧಾರವಾಡದಲ್ಲಿ (1356) ಹಾಗೂ ತುಮಕೂರಿನಲ್ಲಿ (1165) ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ.
Daily cases continue to fall in Karnataka:
◾New cases in State: 28,264
◾New cases in B’lore: 11,938
◾Positivity rate in State: 16.38%
◾Discharges: 29,244
◾Active cases State: 2,51,084 (B’lore- 132k)
◾Deaths:68 (B’lore- 14)
◾Tests: 1,72,483#COVID19 #Omicron— Dr Sudhakar K (@mla_sudhakar) January 30, 2022
Read more from source
[wpas_products keywords=”deal of the day sale today kitchen”]