Karnataka news paper

ವಿಂಡೀಸ್‌ ವಿರುದ್ಧದ ಸರಣಿಗೆ ಭಾರತದ ಬ್ಯಾಕ್‌ ಅಪ್‌ ಆಟಗಾರರ ಆಯ್ಕೆ!


ಹೊಸದಿಲ್ಲಿ: ಟೀಮ್ ಇಂಡಿಯಾ ತಾಯ್ನಾಡಿನಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ತಲಾ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಮತ್ತು ಟಿ20 ಕ್ರಿಕೆಟ್‌ ಸರಣಿಗಳಲ್ಲಿ ಪೈಪೋಟಿ ನಡೆಸಿದ್ದು, ಈ ಸಲುವಾಗಿ ಬಿಸಿಸಿಐ ಪ್ರಕಟ ಮಾಡಿದ್ದ ಭಾರತ ತಂಡಕ್ಕೆ ಬ್ಯಾಕ್‌ ಅಪ್‌ ಆಟಗಾರರಾಗಿ ತಮಿಳುನಾಡಿನ ಯುವ ಆಲ್‌ರೌಂಡರ್‌ಗಳಾದ ಶಾರುಖ್‌ ಖಾನ್‌ ಮತ್ತು ಆರ್‌ ಸಾಯ್‌ ಕಿಶೋರ್‌ ಸ್ಥಾನ ಗಿಟ್ಟಿಸಿದ್ದಾರೆ.

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಮತ್ತು ವಿಜಯ್‌ ಹಝಾರೆ ಟ್ರೋಫಿ ಟೂರ್ನಿಗಳಲ್ಲಿ ತಮಿಳುನಾಡು ತಂಡ ಕ್ರಮವಾಗಿ ಚಾಂಪಿಯನ್ಸ್‌ ಮತ್ತು ರನ್ನರ್ಸ್‌ಅಪ್‌ ಸ್ಥಾನ ಪಡೆದಿತ್ತು. ತಂಡದ ಯಶಸ್ಸಿಗೆ ಅದ್ಭುತ ಕೊಡುಗೆ ಕೊಟ್ಟಿದ್ದ ಆಲ್‌ರೌಂಡರ್‌ಗಳಾದ ಶಾರುಖ್‌ ಖಾನ್‌ ಮತ್ತು ಆರ್‌ ಸಾಯ್‌ ಕಿಶೋರ್‌ಗೆ ಈಗ ಟೀಮ್ ಇಂಡಿಯಾ ಟಿಕೆಟ್‌ ಸಿಕ್ಕಿದೆ.

ವಿಂಡೀಸ್‌ ವಿರುದ್ಧದ ಒಡಿಐ ಸರಣಿ ಫೆಬ್ರವರಿ 6ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುರುವಾಗಲಿದೆ. ಕೋವಿಡ್‌-19 ಸೋಂಕಿನ ಸರಣಿಯ ಎಲ್ಲಾ ಪಂದ್ಯಗಳು ಅಹ್ಮದಾಬಾದ್‌ನಲ್ಲೇ ನಡೆಯಲಿದೆ. ಬಳಿಕ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಆಯೋಜನೆ ಆಗಲಿದೆ.

ಭಾರತ ವಿರುದ್ಧದ ಟಿ20 ಸರಣಿಗೆ ವೆಸ್ಟ್‌ ಇಂಡೀಸ್‌ ತಂಡ ಪ್ರಕಟ!

“ಹೌದು ಶಾರುಖ್‌ ಖಾನ್‌ ಮತ್ತು ಸಾಯ್‌ ಕಿಶೋರ್‌ ಅವರನ್ನು ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗಳಿಗೆ ಕಾಯ್ದಿರಿಸಿದ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಆಟಗಾರರು ಬಯೋ ಬಬಲ್‌ ಪ್ರವೇಶ ಮಾಡಲಿದ್ದಾರೆ,” ಎಂದು ತಮಿಳುನಾಡು ಕ್ರಿಕೆಟ್‌ ಸಂಸ್ಥೆ (ಟಿಎನ್‌ಸಿಎ)ಬ ಅಧಿಕಾರಿ ಒಬ್ಬರು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಶಾರುಖ್ ಮತ್ತು ಸಾಯ್‌ ಕಿಶೋರ್‌ ಇದೇ ಕಾರಣಕ್ಕೆ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪ್ರಾಥಮಿಕ ಹಂತದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

“ಭಾರತ ತಂಡದ ಕಾಯ್ದಿರಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆ ಆದ ಕಾರಣ ಮುಂಬರುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪ್ರಾಥಮಿಕ ಹಂತದ ಪಂದ್ಯಗಳಿಗೆ ತಮಿಳು ನಾಡು ತಂಡದ ಪರ ಈ ಇಬ್ಬರೂ ಆಡುವುದಿಲ್ಲ,” ಎಂದು ಮೂಲಗಳು ಹೇಳಿವೆ. ಎರಡು ವರ್ಷಗಳ ವಿರಾಮದ ಬಳಿಕ ರಣಜಿ ಟ್ರೋಫಿ ಆಯೋಜನೆ ಆಗುತ್ತಿದೆ. 2022ರ ಸಾಲಿನ ಟೂರ್ನಿಯನ್ನು ಎರಡು ಹಂತಗಳಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದ್ದು, ಫೆಬ್ರವರಿ-ಮಾರ್ಚ್‌ನಲ್ಲಿ ಲೀಗ್‌ ಹಂತದ ಪಂದ್ಯಗಳು ಮತ್ತು ಜುಲೈನಲ್ಲಿ ನಾಕ್‌ಔಟ್‌ ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಹೇಳಿದ್ದರು.

ಮಾಂಜ್ರೇಕರ್‌ ಆರಿಸಿದ ಭಾರತದ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಕೊಹ್ಲಿ ಇಲ್ಲ!

“ಶಾರುಖ್‌ ಖಾನ್‌ ಟೀಮ್ ಇಂಡಿಯಾದ ಕದ ತಟ್ಟುತ್ತಿದ್ದಾರೆ. ಶೀಘ್ರವೇ ಅವರಿಗೆ ಅವಕಾಶ ಸಿಗಲಿದೆ. ಈ ಅವಕಾಶವನ್ನು ಅವರು ಅದ್ಭುತವಾಗಿ ಬಳಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಖಂಡಿತಾ ಭಾರತ ತಂಡದ ಪರ ಅದ್ಭುತ ಆಟವಾಡಲಿದ್ದಾರೆ,” ಎಂದು ತಮಿಳುನಾಡು ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ ಹೇಳಿದ್ದಾರೆ.

ವಿಂಡೀಸ್‌ ವಿರುದ್ಧದ ಒಡಿಐ ಸರಣಿಗೆ ಭಾರತ ತಂಡ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಕೆಎಲ್‌ ರಾಹುಲ್‌ (ಉಪನಾಯಕ), ಋತುರಾಜ್‌ ಗಾಯಕ್ವಾಡ್‌, ಶಿಖರ್‌ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್‌ ಅಯ್ಯರ್‌, ದೀಪಕ್‌ ಹೂಡ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ದೀಪಕ್‌ ಚಹರ್‌, ಶಾರ್ದುಲ್‌ ಠಾಕೂರ್‌, ಯುಜ್ವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯ್, ಮೊಹಮ್ಮದ್‌ ಸಿರಾಜ್, ಪ್ರಸಿಧ್‌ ಕೃಷ್ಣಾ, ಅವೇಶ್‌ ಖಾನ್‌.
ಕಾಯ್ದಿರಿಸಲ್ಪಟ್ಟ ಆಟಗಾರರು: ಶಾರುಖ್‌ ಖಾನ್‌ ಮತ್ತು ಆರ್‌ ಸಾಯ್ ಕಿಶೋರ್‌



Read more

[wpas_products keywords=”deal of the day sale today offer all”]