ANI
ನವದೆಹಲಿ: ಭ್ರಷ್ಟಾಚಾರ ಗೆದ್ದಲಿನಂತಿದೆ, ಅದನ್ನು ಹೋಗಲಾಡಿಸಲು ಜನರು ಕರ್ತವ್ಯಗಳಿಗೆ ಆದ್ಯತೆ ನೀಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಭ್ರಷ್ಟಾಚಾರವನ್ನು ನಿಯಂತ್ರಿಸಲು ಕರ್ತವ್ಯಗಳಿಗೆ ಆದ್ಯತೆ ನೀಡಬೇಕಾದ ಜನರು ಆದಷ್ಟು ಬೇಗ ಅದನ್ನು ತೊಡೆದುಹಾಕುವ ಅವಶ್ಯಕತೆಯಿದೆ ಎಂದು 2022ರ ವರ್ಷದ ಮೊದಲ ಮನ್ ಕಿ ಬಾತ್ ಸರಣಿಯ 85ನೇ ಆವೃತ್ತಿಯಲ್ಲಿ ಹೇಳಿದ್ದಾರೆ.
#MannKiBaat January 2022. Hear LIVE https://t.co/oRsE5HbJog
— Narendra Modi (@narendramodi) January 30, 2022
ದೇಶದ ಒಂದು ಕೋಟಿ ಮಕ್ಕಳು ಪೋಸ್ಟ್ ಕಾರ್ಡ್ ಕಳುಹಿಸಿದ್ದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ವಿದ್ಯಾರ್ಥಿನಿ ನವ್ಯ ವರ್ಮ ಕಳುಹಿಸಿದ ಪೋಸ್ಟ್ ಕಾರ್ಡನ್ನು ಓದಿದರು. ಅದರಲ್ಲಿ ವಿದ್ಯಾರ್ಥಿನಿ, 2047 ರಲ್ಲಿ ಭಾರತೀಯರೆಲ್ಲರೂ ಗೌರವಯುತ ಜೀವನ ನಡೆಸುವ ಅವರ ಕನಸಿನ ಭಾರತ, ರೈತರು ಸಮೃದ್ಧವಾಗಿರುವ ಮತ್ತು ಭ್ರಷ್ಟಾಚಾರ ಇಲ್ಲದಿರುವ ಭಾರತವನ್ನು ನೋಡಬೇಕೆನ್ನುವುದು ತನ್ನ ಕನಸು ಎಂದು ಹೇಳಿಕೊಂಡಿದ್ದಾಳೆ. ಈ ವಿದ್ಯಾರ್ಥಿನಿಯ “ರಾಷ್ಟ್ರದ ಕನಸು ಶ್ಲಾಘನೀಯವಾಗಿದೆ. ದೇಶವು ಈ ದಿಸೆಯಲ್ಲಿ ಕ್ಷಿಪ್ರ ದಾಪುಗಾಲು ಹಾಕುತ್ತಿದೆ” ಎಂದು ಹೇಳಿದರು.
ಭ್ರಷ್ಟಾಚಾರ ಎಂಬುದು ಗೆದ್ದಲು ಇದ್ದಂತೆ. ಅದು ದೇಶವನ್ನು ಕೊರೆಯುತ್ತಾ ಹೋಗುತ್ತದೆ. 2047ರವರೆಗೆ ಏಕೆ ಕಾಯಬೇಕು.ಇದು ಎಲ್ಲಾ ದೇಶವಾಸಿಗಳು, ಇಂದಿನ ಯುವಕರು ಒಟ್ಟಾಗಿ ಮಾಡಬೇಕಾದ ಕೆಲಸ, ನಾವು ಅದನ್ನು ಆದಷ್ಟು ಬೇಗ ಮಾಡಬೇಕು. ಆದ್ದರಿಂದ, ನಾವು ನಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡುವುದು ಬಹಳ ಮುಖ್ಯ. ಕರ್ತವ್ಯದ ಪ್ರಜ್ಞೆ ನಮ್ಮಲ್ಲಿದ್ದಾಗ, ಕರ್ತವ್ಯ-ಕೆಲಸವೇ ಮುಖ್ಯವಾದಾಗ ಅಲ್ಲಿ ಭ್ರಷ್ಟಾಚಾರ ಇರುವುದಿಲ್ಲ ಎಂದು ಹೇಳಿದರು.
Read more
[wpas_products keywords=”deal of the day”]