Online Desk
ನವದೆಹಲಿ:ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜ್ಯೋತಿ ಜವಾನ್ ನಲ್ಲಿನ ಉರಿಯುವ ದೀಪವನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ದೀಪ ಜೊತೆ ಸೇರಿಸಿ ಉರಿಸುವ ಕಾರ್ಯ ನಡೆದಿದೆ. ಈ ಭಾವನಾತ್ಮಕ ಕ್ಷಣಕ್ಕೆ ದೇಶದ ನಾಗರಿಕರು ಮತ್ತು ಹುತಾತ್ಮ ಯೋಧರ ಕುಟುಂಬಸ್ಥರು ಕಣ್ಣೀರು ಹಾಕಿದ್ದನ್ನು ಕಂಡಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
2022ರ ಆರಂಭದ ತಿಂಗಳು ತಮ್ಮ ಆಕಾಶವಾಣಿಯ ಮನದ ಮಾತು ಸರಣಿ ಭಾಷಣ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಧಾನ ಮಂತ್ರಿಗಳು, ರಾಷ್ಟ್ರೀಯ ಯುದ್ಧ ಸ್ಮಾರಕ ಬಳಿ ಇರುವ ಅಮರ್ ಜವಾನ್ ಜ್ಯೋತಿ ಹುತಾತ್ಮ ಯೋಧರಿಗೆ ಸಲ್ಲಿಸಬಹುದಾದ ಅತಿದೊಡ್ಡ ಗೌರವ. ನಾಗರಿಕರು ತಮ್ಮ ಕುಟುಂಬಸ್ಥರೊಂದಿಗೆ ಈ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಎಂದು ನಾನು ಈ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನ ಮಂತ್ರಿ ಬಾಲ ಪುರಸ್ಕಾರ, ಪದ್ಮ ಪುರಸ್ಕಾರಗಳನ್ನು ಘೋಷಿಸಲಾಗುತ್ತದೆ ಎಂದು ಹೇಳಿದರು.
ದೇಶದ ಒಂದು ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಮನದ ಮಾತುಗಳನ್ನು ಪೋಸ್ಟ್ ಕಾರ್ಡ್ ಮೂಲಕ ನನಗೆ ಕಳುಹಿಸಿದ್ದಾರೆ. ಈ ಪೋಸ್ಟ್‌ಕಾರ್ಡ್‌ಗಳು ದೇಶದ ಹಲವು ಭಾಗಗಳಿಂದ ಮತ್ತು ವಿದೇಶಗಳಿಂದಲೂ ಬಂದಿವೆ. ಈ ಪೋಸ್ಟ್‌ಕಾರ್ಡ್‌ಗಳು ನಮ್ಮ ದೇಶದ ಭವಿಷ್ಯವಾಗಿರುವ ಮಕ್ಕಳ ವಿಶಾಲ ಮತ್ತು ಸಮಗ್ರ ದೃಷ್ಟಿಕೋನವನ್ನು ನೀಡುತ್ತವೆ ಎಂದರು.
ಇಂದು ದೇಶದ ಪಿತಾಮಹ ಬಾಪು ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿ. ಬಾಪು ಅವರ ಜೀವನ, ಬೋಧನೆಗಳನ್ನು ಜನವರಿ 30 ನಮಗೆ ಸ್ಮರಿಸುವಂತೆ ಮಾಡುತ್ತದೆ. ಕೆಲ ದಿನಗಳ ಹಿಂದೆ ಗಣರಾಜ್ಯೋತ್ಸವ, ಹಾಗೂ ಜ.23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮಜಯಂತಿಯನ್ನು ಆಚರಿಸಿದ್ದೇವೆ ಎಂದರು.
ಪ್ರಧಾನಿಯವರು ಇಂದು ಮನ್ ಕಿ ಬಾತ್ ನಲ್ಲಿ ಹೇಳಿರುವ ಅಂಶಗಳು:
-‘ಅಮರ ಜವಾನ್ ಜ್ಯೋತಿ’ಯಂತೆ ಹುತಾತ್ಮರ ತ್ಯಾಗ ಮತ್ತು ಬಲಿದಾನವೂ ಅಮರವಾಗಿದೆ, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಜನತೆ ತಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ತಪ್ಪದೆ ಭೇಟಿ ನೀಡುವಂತೆ ಪ್ರಧಾನಿ ಕೋರಿದರು; ಅಲ್ಲಿ ತಮಗೆ ಒಂದು ಅನನ್ಯ ಚೈತನ್ಯ ಮತ್ತು ಪ್ರೇರಣೆಯ ಅನುಭವವಾಗುತ್ತದೆ.
-ಇಂಡಿಯಾ ಗೇಟ್ ಬಳಿಯ ‘ಅಮರ ಜವಾನ್ ಜ್ಯೋತಿ’ ಯನ್ನು ‘ರಾಷ್ಟ್ರೀಯ ಯುದ್ಧ ಸ್ಮಾರಕ’ದ ಜ್ಯೋತಿಗಳಲ್ಲಿ ಲೀನಗೊಳಿಸಲಾಗಿದ್ದು, ಸ್ವಾತಂತ್ರ್ಯಾ ನಂತರ ಹುತಾತ್ಮರಾದ ಎಲ್ಲ ಯೋಧರ ಹೆಸರುಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಬರೆಯಲಾಗಿದೆ – ಪ್ರಧಾನಮಂತ್ರಿ
-#AzadiKaAmritMahotsav ಈ ಆಯೋಜನೆಗಳ ಮಧ್ಯೆ ದೇಶದಲ್ಲಿ ಅನೇಕ ರಾಷ್ಟ್ರೀಯ ಪುರಸ್ಕಾರಗಳನ್ನೂ ನೀಡಲಾಯಿತು. ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಇದರಲ್ಲೊಂದಾಗಿದೆ. ಸಣ್ಣ ವಯಸ್ಸಿನಲ್ಲೇ ಸಾಹಸ ಮತ್ತು ಪ್ರೇರಣಾದಾಯಕ ಕೆಲಸ ಮಾಡಿದಂತಹ ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗುವುದು.
-ನಾವೆಲ್ಲರೂ ಮನೆಯಲ್ಲಿ ಈ ಮಕ್ಕಳ ಬಗ್ಗೆ ಖಂಡಿತ ಹೇಳಬೇಕು; ಇದರಿಂದ ನಮ್ಮ ಮಕ್ಕಳಿಗೂ ಪ್ರೇರಣೆ ದೊರೆಯುವುದು ಮತ್ತು ಅವರ ಮನದಲ್ಲಿ ದೇಶದ ಹೆಸರನ್ನು ಉಜ್ವಲಗೊಳಿಸುವ ಉತ್ಸಾಹ ಮೂಡುವುದು
-ಇದೇ ರೀತಿ ಮಣಿಪುರದ 77 ರ ವಯೋಮಾನದ ಲೌರೆಂಬಮ್ ಬಿನೊದೇವಿ ದಶಕಗಳಿಂದ ಮಣಿಪುರದ ಲಿಬಾ ಟೆಕ್ಸಟೈಲ್ ಕಲೆಯನ್ನು ಸಂರಕ್ಷಿಸುತ್ತಿದ್ದಾರೆ. ಅವರನ್ನೂ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ಮಧ್ಯಪ್ರದೇಶದ ಅರ್ಜುನ್ ಸಿಂಗ್ ಅವರಿಗೆ ಬೈಗಾ ಬುಡಕಟ್ಟು ನೃತ್ಯಕ್ಕೆ ಮನ್ನಣೆ ದೊರೆಯುವಂತೆ ಮಾಡಿರುವುದಕ್ಕಾಗಿ ಪದ್ಮಶ್ರೀ ದೊರೆತಿದೆ.
-ಉತ್ತರಾಖಂಡದ ಬಸಂತಿದೇವಿ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ಬಸಂತಿದೇವಿ ತಮ್ಮ ಜೀವನವನ್ನು ಸಂಘರ್ಷದಲ್ಲೇ ಸವೆಸಿದವರು. ಚಿಕ್ಕ ವಯಸ್ಸಿನಲ್ಲಿಯೇ ಪತಿ ವಿಯೋಗ ಕಾಡಿತ್ತು. ಆಶ್ರಮದಲ್ಲಿರಬೇಕಾಗಿ ಬಂದಿತು. ಇಲ್ಲಿದ್ದು ಅವರು ನದಿ ಸಂರಕ್ಷಣೆಗಾಗಿ ಸಂಘರ್ಷಗೈದರು &ಪರಿಸರ ಸಂರಕ್ಷಣೆಗೆ ಅಸಾಧಾರಣ ಕೊಡುಗೆ ನೀಡಿದ್ದಾರೆ.
-ದೇಶದಲ್ಲಿ ಇದೀಗ #PadmaAwards ಘೋಷಿಸಲಾಗಿದೆ; ಪದ್ಮ ಪ್ರಶಸ್ತಿಯನ್ನು ಪಡೆದವರಲ್ಲಿ ಕೆಲವರ ಬಗ್ಗೆ ಜನರಿಗೆ ಅಷ್ಟೇನೂ ತಿಳಿದಿರದಂತಹ ಹೆಸರುಗಳೂ ಇವೆ. ಇವರೆಲ್ಲ ನಮ್ಮ ದೇಶದ ತೆರೆಮರೆಯ ಸಾಧಕರಾಗಿದ್ದಾರೆ. ಇವರು ಸಾಧಾರಣ ಪರಿಸ್ಥಿತಿಗಳಲ್ಲೂ ಅಸಾಧಾರಣ ಕೆಲಸವನ್ನು ಮಾಡಿದ್ದಾರೆ – ಪ್ರಧಾನಮಂತ್ರಿ
-ಪದ್ಮಶ್ರೀ ಪ್ರಶಸ್ತಿ ಪಡೆದ ಕರ್ನಾಟಕದ ಅಮಾಯಿ ಮಹಾಲಿಂಗ ನಾಯಕ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು; ಈ ಬಾರಿಯ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಹಲವು ಮಂದಿ ತೆರೆಮರೆಯ ಸಾಧಕರು ಸೇರಿದ್ದಾರೆ. ಈ ಸಾಧಕರು ಸಾಧಾರಣ ಪರಿಸ್ಥಿತಿಗಳಲ್ಲೂ ಅಸಾಧಾರಣ ಕೆಲಸ ಮಾಡಿದ್ದಾರೆ.
-ಕರ್ನಾಟಕದ ಮಹಾಲಿಂಗ ನಾಯಕ್ ಅವರು ಕೃಷಿಕರಾಗಿದ್ದು, ‘ಟನಲ್ ಮ್ಯಾನ್’ ಎಂದೇ ಹೆಸರಾಗಿದ್ದಾರೆ; ಇವರು ಕೃಷಿಯಲ್ಲಿ ಎಂಥೆಂಥ ಆವಿಷ್ಕಾರಗಳನ್ನು ಮಾಡಿದ್ದಾರೆಂದರೆ ಅಚ್ಚರಿಯಾಗುತ್ತದೆ. ಇವರ ಪ್ರಯತ್ನದ ಫಲ ಸಣ್ಣ ಹಿಡುವಳಿದಾರರಿಗೆ ದೊರಕುತ್ತಿದೆ. ಇಂಥ ಅನೇಕ ತೆರೆಮರೆಯ ಸಾಧಕರನ್ನು ದೇಶ ಸನ್ಮಾನಿಸಿದೆ – ಪ್ರಧಾನಮಂತ್ರಿ
-ಈ ಪೋಸ್ಟ್ ಕಾರ್ಡಗಳನ್ನು ಗಮನಿಸಿದಾಗ ದೇಶದ ಭವಿಷ್ಯಕ್ಕಾಗಿ ನಮ್ಮ ಹೊಸ ಪೀಳಿಗೆಯ ವಿಚಾರಗಳು ಎಷ್ಟೊಂದು ವ್ಯಾಪಕವಾಗಿವೆ ಮತ್ತು ಎಷ್ಟು ಬೃಹತ್ ಆಗಿದೆ ಎಂಬುದರ ಅರಿವಾಗುತ್ತದೆ.
-ಕ್ರೊಯೇಷಿಯಾದ ಜಾಗ್ರೇಬ್ ನಲ್ಲಿ School of Applied Arts and Designನ ವಿದ್ಯಾರ್ಥಿಗಳು ಭಾರತದ ಜನರಿಗಾಗಿ 75 ಕಾರ್ಡ್ ಗಳನ್ನು ಕಳುಹಿಸಿಕೊಟ್ಟಿದ್ದಾರೆ ಮತ್ತು ಅಮೃತ ಮಹೋತ್ಸವದ ಅಂಗವಾಗಿ ಶುಭ ಕೋರಿದ್ದಾರೆ. ನಾನು ನಮ್ಮ ದೇಶವಾಸಿಗಳ ಪರವಾಗಿ ಕ್ರೋಯೇಷಿಯಾ ಮತ್ತು ಅಲ್ಲಿನ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ
-ಗುರುದೇವ ರವೀಂದ್ರನಾಥ್ ಠಾಗೂರ್ ಅವರು, ಶಾಂತಿ ನಿಕೇತನ್ ಸ್ಥಾಪಿಸಿದರು. ಮಹಾರಾಜಾ ಗಾಯಕ್ವಾಡ್ ಅವರು ಕೂಡಾ ಶಿಕ್ಷಣದ ಕಟ್ಟಾ ಬೆಂಬಲಿಗರಲ್ಲಿ ಒಬ್ಬರಾಗಿದ್ದರು. ಅವರು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು ಮತ್ತು ಡಾ. ಅಂಬೇಡ್ಕರ್ ಮತ್ತು ಶ್ರೀ ಅರಬಿಂದೋ ಸೇರಿದಂತೆ ಅನೇಕ ಮಹನೀಯರನ್ನು ಉನ್ನತ ಶಿಕ್ಷಣಕ್ಕಾಗಿ ಪ್ರೇರೇಪಿಸಿದರು.
-ಗುಜರಾತ್ ನ ಆನಂದ್ ನಲ್ಲಿ ಒಂದು ಬಹಳ ಸುಂದರವಾದ ಸ್ಥಳವಿದೆ ಅದೆಂದರೆ ವಲ್ಲಭ್ ವಿದ್ಯಾನಗರ್. ಸರ್ದಾರ್ ಪಟೇಲ್ ಅವರ ಒತ್ತಾಯದ ಮೇರೆಗೆ, ಅವರ ಇಬ್ಬರು ಸಹವರ್ತಿಗಳಾದ, ಭಾಯಿ ಕಾಕಾ ಮತ್ತು ಭೀಖಾ ಭಾಯಿ ಅವರು, ಅಲ್ಲಿನ ಯುವಕರಿಗಾಗಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದರು.
-ಭಾರತ ಜ್ಞಾನ ಮತ್ತು ಶಿಕ್ಷಣದ ತಪೋಭೂಮಿಯಾಗಿದೆ; ನಾವು ಶಿಕ್ಷಣವನ್ನು ಕೇವಲ ಪುಸ್ತಕ ಜ್ಞಾನಕ್ಕೆ ಮಾತ್ರಾ ಸೀಮಿತ ಮಾಡಿಲ್ಲ, ಶಿಕ್ಷಣವನ್ನು ಜೀವನದ ಸಮಗ್ರ ಅನುಭವದ ರೀತಿಯಲ್ಲಿ ನೋಡಿದ್ದೇವೆ. ನಮ್ಮ ದೇಶದ ಮಹಾನ್ ವ್ಯಕ್ತಿಗಳು ಕೂಡಾ ಶಿಕ್ಷಣ ಕ್ಷೇತ್ರದೊಂದಿಗೆ ಆಳವಾದ ಸಂಬಂಧ ಹೊಂದಿದ್ದಾರೆ –
-ಶಿಕ್ಷಣದ ಬಗ್ಗೆ ಅರಿವು ಸಮಾಜದ ಪ್ರತಿಯೊಂದು ಹಂತದಲ್ಲೂ ಕಂಡುಬರುತ್ತಿದೆ. ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಉಡುಮಲ್ ಪೇಟ್ ನಿವಾಸಿ ತಾಯಮ್ಮಾಳ್ ಅವರ ಉದಾಹರಣೆ ಬಹಳ ಪ್ರೇರಣಾದಾಯಕವಾಗಿದೆ.
ಈಗ ಚರ್ಚೆ ಮಾಡುತ್ತಿದ್ದುದು ನಮ್ಮ ದೇಶದಲ್ಲಿ ಶಿಕ್ಷಣದ ಬಗ್ಗೆ ಇರುವ ಇದೇ ಭಾವನೆಯ ಕುರಿತಾಗಿ. IIT BHUನ ಒಂದು Alumnusನ ಇದೇ ರೀತಿಯ ದಾನದ ಬಗ್ಗೆ ಕೂಡಾ ತಿಳಿದುಬಂದಿದೆ; BHUದ ಹಳೆಯ ವಿದ್ಯಾರ್ಥಿ ಜೈ ಚೌಧರಿ, IIT BHUFoundationಗೆ 1 ಮಿಲಿಯನ್ ಡಾಲರ್ ಅಂದರೆ ಸುಮಾರು ಏಳೂವರೆ ಕೋಟಿ ರೂ.ಕೊಡುಗೆ ನೀಡಿದ್ದಾರೆ.
-ನಮ್ಮ ದೇಶದಲ್ಲಿ ವಿವಿಧ ಕ್ಷೇತ್ರಗಳಿಗೆ ಸೇರಿದ ಅನೇಕ ಜನರಿದ್ದಾರೆ, ಇತರರಿಗೆ ಸಹಾಯ ಮಾಡುವ ಮೂಲಕ ಸಮಾಜದ ಕುರಿತಾದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಉನ್ನತಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ನಮ್ಮವಿವಿಧ ಐಐಟಿಗಳಲ್ಲಿ ಇಂತಹ ಪ್ರಯತ್ನ ನಿರಂತರವಾಗಿ ಕಂಡುಬರುತ್ತಿರುವುದು ಬಹಳ ಸಂತೋಷವೆನಿಸುತ್ತದೆ.
-ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅಧ್ಯಕ್ಷರ ಅಂಗರಕ್ಷಕ ಚಾರ್ಜರ್ ಕುದುರೆ ವಿರಾಟ್ ತನ್ನ ಕೊನೆಯ ಪರೇಡ್‌ನಲ್ಲಿ ಭಾಗವಹಿಸಿತು. ವಿರಾಟ್ ಹೆಸರಿನ ಕುದುರೆ 2003ರಲ್ಲಿ ರಾಷ್ಟ್ರಪತಿ ಭವನಕ್ಕೆ ಬಂದಿತು & ಪ್ರತಿ ಬಾರಿ ಗಣರಾಜ್ಯೋತ್ಸವದಂದು Commandant charger ರೂಪದಲ್ಲಿ ಪರೇಡ್ಅನ್ನು ಮುನ್ನಡೆಸುತ್ತಿತ್ತು.
Read more
[wpas_products keywords=”deal of the day”]