Karnataka news paper

ಉತ್ತರ ಪ್ರದೇಶ ಚುನಾವಣೆ: ಪಿಪಿಇ ಕಿಟ್‌ನಲ್ಲಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಯ ಉಮೇದುವಾರಿಕೆ ತಿರಸ್ಕೃತ


PTI

ಶಹಜಹಾನ್‌ಪುರ: ಉತ್ತರ ಪ್ರದೇಶ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದ್ದು, ಶಹಜಹಾನ್‌ಪುರ ವಿಧಾನಸಭಾ ಕ್ಷೇತ್ರದ ಸಂಯುಕ್ತ ವಿಕಾಸ ಪಕ್ಷದ ಅಭ್ಯರ್ಥಿ ವೈದ್ಯರಾಜ್‌ ಕಿಶನ್‌ ಅವರು ಪಿಪಿಇ ಕಿಟ್‌ ಧರಿಸಿ ಬಂದು ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದರು. ಆದರೆ ಅವರ ನಾಮಪತ್ರವನ್ನು ಭಾನುವಾರ ತಿರಸ್ಕರಿಸಲಾಗಿದೆ.

ತಮ್ಮ ನಾಮಪತ್ರ ತಿರಸ್ಕರಿಸಿದ್ದಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಿಶನ್‌ ಅವರು, ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಸಂಪುಟ ಸಚಿವ ಸುರೇಶ್‌ ಖನ್ನಾ ಜತೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಇದನ್ನು ಓದಿ: ಉತ್ತರ ಪ್ರದೇಶದಲ್ಲಿ ಚುನಾವಣೋತ್ತರ ಸಮೀಕ್ಷೆ ನಿಷೇಧಿಸಿದ ಚುನಾವಣಾ ಆಯೋಗ

ಆದರೆ, ಅಪೂರ್ಣ ದಾಖಲೆಗಳಿಂದಾಗಿ ಕಿಶನ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಅವರು ಪಿಪಿಇ ಕಿಟ್ ಧರಿಸಿದ್ದಕ್ಕೆ ಅಲ್ಲ ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಜನವರಿ 25 ರಂದು ಕಿಶನ್ ಅವರು ಪಿಪಿಇ ಕಿಟ್, ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನರ್ ಹಿಡಿದುಕೊಂಡು ಬಂದು ನಾಮಪತ್ರ ಸಲ್ಲಿಸಿದ್ದರು.

ಇನ್ನೂ ಕಿಶನ್ ಅವರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುರೇಶ್ ಖನ್ನಾ ಅವರು, “ನನಗೆ ಕ್ಷೇತ್ರದ ಇತರ ಅಭ್ಯರ್ಥಿಗಳ ಬಗ್ಗೆ ಗೊತ್ತೆ ಇಲ್ಲ ಮತ್ತು ಯಾರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ತಮಗೆ ಗೊತ್ತಿಲ್ಲ. ನನ್ನ ವಿರುದ್ಧದ ಆರೋಪಗಳು ಸಂಪೂರ್ಣ ಆಧಾರರಹಿತ” ಎಂದಿದ್ದಾರೆ.



Read more

[wpas_products keywords=”deal of the day”]