ಅರಸಿಕೆರೆ ಬಳಿ ಬೆಟ್ಟಗುಡ್ಡಗಳ ನಡುವೆಯಿರುವ ಸುಂದರ ಊರು ‘ಜಾಡಘಟ್ಟ’. ಚಿತ್ರೀಕರಣ ನಡೆಸುವ ಸ್ಥಳ ಹುಡುಕುತ್ತಾ ಈ ಊರಿಗೆ ಹೋಗಿದ್ದೆವು. ಕೊನೆಗೆ ಆ ಊರಿನ ಸೊಬಗನ್ನು ನೋಡಿ ಊರಿನ ಹೆಸರನ್ನೇ ಶೀರ್ಷಿಕೆಯಾಗಿಸಿದ್ದೆವು. ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಿದು. ನಾನೇ ಕಥೆ, ಚಿತ್ರಕಥೆ, ನಿರ್ದೇಶನ ಮಾಡಿದ್ದೇನೆ. ನಾಯಕನಾಗೂ ನಟಿಸಿದ್ದೇನೆ. ನಿರ್ಮಾಪಕರ, ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇದೇ ಫೆಬ್ರವರಿ 4ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದರು ರಘು .ಎಸ್.
“ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಮ್ಮ ಚಿತ್ರದಲ್ಲಿ ನುರಿತ ತಂತ್ರಜ್ಞರಿದ್ದಾರೆ. ಆದರೆ ರಂಗಭೂಮಿಯಲ್ಲಿ ಅನುಭವವಿರುವ ಹೊಸ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ನೂತನ ಪ್ರತಿಭೆಗಳಿನ್ನು ಉತ್ತೇಜಿಸುವ ಸಲುವಾಗಿ ಚಿತ್ರ ನಿರ್ಮಾಣ ಮಾಡಿದ್ದೇವೆ” ಎನ್ನುತ್ತಾರೆ ನಿರ್ಮಾಪಕಿ ಶಶಿಮಣಿ.
ಅಜಯ್ ರಾವ್-ಸಂಜನಾ ಜೋಡಿಯ ‘ಶೋಕಿವಾಲ’ ಚಿತ್ರದ ಹಾಡಿಗೆ ಧ್ವನಿಯಾದ ಶ್ರಿಧರ್ ವಿ. ಸಂಭ್ರಮ್
ನಾಲ್ಕು ಹಾಡುಗಳಿವೆ. ಉತ್ತಮ ಗಾಯಕರು ಹಾಡಿರುವ ಹಾಡುಗಳು ಸುಮಧುರವಾಗಿದೆ ಎಂದು ಹಾಡುಗಳ ಬಗ್ಗೆ ಮಾಹಿತಿ ನೀಡಿದರು ಸಂಗೀತ ನಿರ್ದೇಶಕ ಅಭಿಷೇಕ್ ಜಿ ರಾಯ್. ಚಿತ್ರತಂಡದ ಬಹುತೇಕ ಕಲಾವಿದರು ಹಾಗೂ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು, ತಮ್ಮ ಅನುಭವ ಹಂಚಿಕೊಂಡರು. ತಂದೆ ಇದ್ದಾಗ, ತಂದೆ ಹೋದ ನಂತರದಲ್ಲಿ ಮಗನ ಪರಿಸ್ಥಿತಿ ಹೇಗಾಗುತ್ತದೆ ಎಂಬುದೇ ಈ ಸಿನಿಮಾದ ಕಥೆ.
ಚಿತ್ರಮಂದಿರದಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ ಕೋರಿ ಸಿಎಂ ಭೇಟಿ ಮಾಡಲಿರುವ ನಟ ಶಿವಣ್ಣ
ರಘು ಎಸ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿಯರು ಸುಹಾನಾ ಎಸ್ ಗೌಡ, ಹರ್ಷಿತಾ ಹಾಗೂ ಪ್ರೇರಣಾ ರಾಜು. ವೇಣು, ಲೋಹಿತ್, ಧನುಷ್, ಎಂ.ಜಿ.ಶ್ರೀನಿವಾಸ್, ಅನು, ಮೇಘನ, ಮಂಜಮ್ಮ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Read more
[wpas_products keywords=”deal of the day sale today offer all”]