ಟಿಗ್ರೆಯ್ ಪ್ರಾಂತ್ಯದ ಮೂಲ ನಿವಾಸಿಗರಾದ ‘ಟಿಗ್ರಾಯನ್’ ಬಂಡುಕೋರರನ್ನು (ಟಿಗ್ರೆಯ್ ಪೀಪಲ್ಸ್ ಲಿಬರೇಷನ್ ಫ್ರಂಟ್ – ಟಿಪಿಎಲ್‌ಎಫ್) ನಿಗ್ರಹಿಸಲು ಕಳೆದ ವರ್ಷ ನವೆಂಬರ್‌ನಲ್ಲಿ ಇಥಿಯೊಪಿಯಾ ಪ್ರಧಾನಿ ಹಾಗೂ ನೊಬೆಲ್ ಶಾಂತಿ ಪುರಸ್ಕೃತ ಅಬಿ ಅಹ್ಮದ್ ಅವರು ಸೇನಾ ಪಡೆಗಳನ್ನು ಮುಂದೆ ಬಿಟ್ಟಿರುವುದು ಸದ್ಯ ತಲೆದೋರಿರುವ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ.
ವಿಶ್ವ ಸಂಸ್ಥೆ ಹಾಗೂ ವಿಶ್ವ ಆಹಾರ ಯೋಜನೆಯ ಸಮೀಕ್ಷೆ ಪ್ರಕಾರ ಸದ್ಯ ಇಥಿಯೋಪಿಯಾದಲ್ಲಿ ಟಿಗ್ರೆಯ್ ಪ್ರಾಂತ್ಯದಲ್ಲಿ ಶೇ. 40 ರಷ್ಟು ಜನರು ಕಿಂಚಿತ್ತೂ ಆಹಾರ ಸಿಗದೆಯೇ ಹಸಿವಿನಿಂದ ಸಾಯುವ ಸ್ಥಿತಿಗೆ ತಲುಪಿದ್ದಾರೆ. ಒಟ್ಟಾರೆಯಾಗಿ ರಾಷ್ಟ್ರದಲ್ಲಿ 46 ಲಕ್ಷ ಮಂದಿಗೆ ಒಂದು ಹೊತ್ತು ಆಹಾರ ಸಿಕ್ಕರೆ ಸಾಕಾಗಿದೆ. ಬಹುತೇಕರು ಮಕ್ಕಳಿಗೆ ಆಹಾರ ತಿನ್ನಿಸಿ, ದಿನಗಟ್ಟಲೆ ಉಪವಾಸದಿಂದ ನರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಇಥಿಯೋಪಿಯಾ ರಾಷ್ಟ್ರದಲ್ಲಿ ಸಂಗ್ರಹಿಸಲಾದ ಆಹಾರ ಪದಾರ್ಥಗಳು, ಬೇಳೆ – ಕಾಳುಗಳ ಸಂಗ್ರಹ ಪೂರ್ಣ ಖಾಲಿಯಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ವಿದೇಶಿ ರಾಷ್ಟ್ರಗಳು ನೆರವಿಗೆ ಬಂದು ದೊಡ್ಡ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ರಫ್ತು ಮಾಡಿದರೆ ಮಾತ್ರವೇ ಇಥಿಯೋಪಿಯಾದ ಜನರು ಬದುಕುಳಿಯಲಿದ್ದಾರೆ ಎಂದು ವಿಶ್ವ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಭಿಕ್ಷೆ ಬೇಡುವ ದುಸ್ಥಿತಿ: ಜನರು ಹಸಿವಿನಿಂದ ನಿಶಕ್ತಿಗೆ ಒಳಪಟ್ಟು ವೈದ್ಯರಲ್ಲಿಗೆ ನೆರವಿಗಾಗಿ ಬಂದರೆ, ಖುದ್ದು ವೈದ್ಯರೇ ಸ್ವಲ್ಪ ಆಹಾರವಿದ್ದರೆ ಕೊಡಿ ಎಂದು ಬೇಡುವ ದಯನೀಯ ಸ್ಥಿತಿಯು ರಾಷ್ಟ್ರದಲ್ಲಿದೆ. ಶ್ರೀಮಂತರ ಮನೆಗಳ ಎದುರು ವೈದ್ಯರು ಭಿಕ್ಷೆ ಬೇಡುತ್ತಿರುವ ವರದಿಗಳು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇಥಿಯೋಪಿಯಾದ 10 ಪ್ರಮುಖ ಪ್ರಾಂತ್ಯಗಳಲ್ಲಿ ವಿವಿಧ ಬುಡಕಟ್ಟು ಸಮುದಾಯಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿವೆ. ಆ ಪೈಕಿ ಅಫಾರ್ ಮತ್ತು ಅಮ್ಹಾರ ಪ್ರಾಂತ್ಯಗಳಲ್ಲಿ ಬಂಡುಕೋರರು (ಟಿಪಿಎಲ್‌ಎಫ್) ಸರಕಾರದ ವಿರುದ್ಧ ಸುದೀರ್ಘ ಹೋರಾಟ ನಡೆಸಿಕೊಂಡು ಬಂದಿದ್ದಾರೆ.
ತಮ್ಮ ಪ್ರಾಂತ್ಯದಲ್ಲಿ ತಾವೇ ಚುನಾವಣೆ ನಡೆಸಿ, ಪ್ರಾದೇಶಿಕ ಸರಕಾರ ಸ್ಥಾಪಿಸಲು ಕೂಡ ಮುಂದಾಗಿದ್ದಾರೆ. ಆ ಮೂಲಕ ಅಬಿ ಅಹ್ಮದ್ ಸರಕಾರದ ಹಿಡಿತದಿಂದ ಹೊರ ಬರಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ, ಶಸ್ತ್ರಾಸ್ತ್ರಗಳನ್ನು ಕಳವು ಮಾಡಿಕೊಂಡು ತಮ್ಮದೇ ಸಾಮ್ರಾಜ್ಯ ಸ್ಥಾಪಿಸುತ್ತಿದ್ದಾರೆ.
Read more
[wpas_products keywords=”deal of the day sale today offer all”]