Karnataka news paper

ಕಿಡ್ನ್ಯಾಪ್ ಆಗಿದೆ ಎಂದು ತಂದೆಯ ದೂರು: ಮದುವೆಯಾಯ್ತು ತೊಂದರೆ ಕೊಡಬೇಡಿ ಎಂದು ಫೇಸ್‌ಬುಕ್‌ನಲ್ಲಿ ಮಗಳ ಮನವಿ!



ಪಟ್ನಾ: ತನ್ನ ಮಗಳನ್ನು ಮಾಡಲಾಗಿದೆ ಎಂದು ತಂದೆ ಪೊಲೀಸರಿಗೆ ದೂರು ನೀಡಿದ್ದ. ಆತನ ದೂರಿನ ಅನ್ವಯ ಪೊಲೀಸರು ಕಿಡ್ನ್ಯಾಪ್ ಕೇಸ್ ಎಫ್‌ಐಆರ್ ದಾಖಲಿಸಿದ್ದರು. ಅತ್ತ ಪೊಲೀಸರು ಯುವತಿಗಾಗಿ ಹುಡುಕಾಟ ನಡೆಸಿದ್ದರೆ, ಇತ್ತ ಯುವತಿ ತನಗೆ ಮದುವೆಯಾಯ್ತು ಎಂದು ಫೇಸ್‌ಬುಕ್‌ನ ಖಾತೆಯಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾಳೆ. ಇದನ್ನು ಕಂಡು ಆಕೆಯ ಕುಟುಂಬದವರು ಕಂಗಾಲಾಗಿದ್ದಾರೆ.

ಬಿಹಾರದ ಹಾಜಿಪುರದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಯುವತಿ, ತಾನು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ಅಷ್ಟೇ ಅಲ್ಲ, ‘ನಮಗೆ ತೊಂದರೆ ಕೊಡಬೇಡಿ ಅಪ್ಪ’ ಎಂದು ಮನವಿಯನ್ನೂ ಮಾಡಿದ್ದಾಳೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಕೆಯ ವಿಡಿಯೋ ವ್ಯಾಪಕವಾಗಿ ಹಂಚಿಕೆಯಾಗಿದೆ. ತಂದೆ ನೀಡಿರುವ ಅಪಹರಣದ ದೂರನ್ನು ಆಕೆ ನಿರಾಕರಿಸಿದ್ದಾಳೆ. ಹಾಗೆಯೇ, ತನಗೆ ಸಹಾಯ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಯುವತಿ ಮಾಲಿಕ್‌ಪುರದಿಂದ ಬಂದವಳಾಗಿದ್ದು, ತನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಆಕೆಯ ತಂದೆ ಗೊರೌಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು ಎನ್ನುವುದು ವೈರಲ್ ವಿಡಿಯೋ ಕುರಿತು ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ಯುವತಿಯು ಯುವಕನೊಬ್ಬನ ಜತೆಗೆ ಕಾಣಿಸಿಕೊಂಡಿದ್ದು, ತನ್ನ ಇಚ್ಛೆಯಂತೆ ಮದುವೆಯಾಗಿದ್ದು, ಖುಷಿಯಾಗಿರುವುದಾಗಿ ತಿಳಿಸಿದ್ದಾಳೆ. ತಮ್ಮಿಬ್ಬರಿಗೆ ಯಾವುದೇ ತೊಂದರೆ ಕೊಡದಂತೆ ಆಕೆ ಕುಟುಂಬದವರಿಗೆ ಮನವಿ ಮಾಡಿದ್ದಾಳೆ.

ತಾನು ಸ್ವ ಇಚ್ಛೆಯಂತೆ ಮಾಡಿಕೊಂಡಿದ್ದು, ಅದಕ್ಕೆ ಅರ್ಹ ವಯಸ್ಕಳಾಗಿರುವುದಾಗಿ ತಿಳಿಸಿದ್ದಾಳೆ. ತನ್ನ ತಂದೆ ತನಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದಾಳೆ. ಯುವತಿಯ ತಂದೆ ನೀಡಿರುವ ಅಪಹರಣ ದೂರು ಮತ್ತು ಯುವತಿಯ ವಿಡಿಯೋ ಆಧಾರದಲ್ಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಹೀಗಾಗಿ ಎರಡೂ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.



Read more

[wpas_products keywords=”deal of the day sale today offer all”]