‘ಸೂರರೈ ಪೊಟ್ರು‘ ರಿಮೇಕ್‌ನಲ್ಲಿ ಅಕ್ಷಯ್ ಕುಮಾರ್
ನಟ ಸೂರ್ಯ ಅಭಿನಯಿಸಿ, ನಿರ್ಮಿಸಿದ್ದ ಸಿನಿಮಾ ‘ಸೂರರೈ ಪೊಟ್ರು’. ಈ ಸಿನಿಮಾ 2020ರ ನವೆಂಬರ್‌ನಲ್ಲಿ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಮೂಲ ತಮಿಳು ಭಾಷೆಯಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾವು ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೆ ಡಬ್ ಆಗಿತ್ತು. ಸಿನಿಮಾ ನೋಡಿದ ಎಲ್ಲರೂ ಕೂಡ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸೂರ್ಯ ನಟನೆಗೆ ಪುಲ್ ಮಾರ್ಕ್ಸ್ ಸಿಕ್ಕಿತ್ತು. ಇದೀಗ ಅದೇ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದ್ದು, ಸೂರ್ಯ ನಿಭಾಯಿಸಿದ್ದ ಪಾತ್ರವನ್ನು ಅಲ್ಲಿ ಅಕ್ಷಯ್ ಕುಮಾರ್ ಮಾಡಲಿದ್ದಾರೆ. ಮೂಲ ಸಿನಿಮಾ ನಿರ್ದೇಶನ ಮಾಡಿದ್ದ ಸುಧಾ ಕೊಂಗರಾ ಅವರೇ ಹಿಂದಿ ವರ್ಷನ್‌ಗೂ ಡೈರೆಕ್ಷನ್ ಮಾಡಲಿದ್ದಾರೆ.
ಆರಂಭದಲ್ಲಿ ‘ಸೂರರೈ ಪೊಟ್ರು’ ರಿಮೇಕ್‌ನಲ್ಲಿ ಅಜಯ್ ದೇವಗನ್, ಹೃತಿಕ್ ರೋಷನ್, ಜಾನ್ ಅಬ್ರಾಹಂ ಇವರಲ್ಲಿ ಯಾರಾದ್ರೂ ಒಬ್ಬರು ನಟಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ಆ ಜಾಗಕ್ಕೆ ಅಕ್ಕಿ ಹೆಸರು ಅಂತಿಮಗೊಂಡಿದೆ. ಈ ಬಾರಿ ಉತ್ತರ ಭಾರತವನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಸಿನಿಮಾವನ್ನು ಮಾಡುವುದಕ್ಕೆ ಸುಧಾ ನಿರ್ಧಾರ ಮಾಡಿದ್ದಾರಂತೆ. ಈಚೆಗಷ್ಟೇ ನಟ ಇಮ್ರಾನ್ ಹಷ್ಮೀ ಜೊತೆಗೆ ‘ಸೆಲ್ಪೀ’ ಅನ್ನೋ ಸಿನಿಮಾವನ್ನು ಅಕ್ಷಯ್ ಕುಮಾರ್ ಶುರು ಮಾಡಿದ್ದಾರೆ. ಅದರ ಶೂಟಿಂಗ್ ಮುಗಿಯುತ್ತಿದ್ದಂತೆಯೇ, ‘ಸೂರರೈ ಪೊಟ್ರು’ ಸಿನಿಮಾದ ರಿಮೇಕ್ ಕೆಲಸಗಳಿಗೆ ಚಾಲನೆ ನೀಡಲಿದ್ದಾರೆ ಅಕ್ಕಿ.
ಆಸ್ಕರ್ ರೇಸ್‌ಗೆ ಕಾಲಿಟ್ಟ ಕನ್ನಡಿಗ ಜಿ ಆರ್ ಗೋಪಿನಾಥ್ ಜೀವನ ಕಥೆ ಆಧಾರಿತ ‘ಸೂರರೈ ಪೋಟ್ರು’ ಸಿನಿಮಾ!
ಅಂದಹಾಗೆ, ‘ಸೂರರೈ ಪೊಟ್ರು’ ಸಿನಿಮಾವನ್ನು ಕನ್ನಡಿಗ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ಬದುಕನ್ನು ಆಧಾರಿಸಿ ನಿರ್ಮಿಸಲಾಗಿದೆ. ಜನಸಾಮಾನ್ಯರು ಕೂಡ ವಿಮಾನದಲ್ಲಿ ಓಡಾಡುವಂತೆ ಮಾಡುವುದು ಈ ಸಿನಿಮಾದ ಕಥಾನಾಯಕನ ಕನಸಾಗಿರುತ್ತದೆ. ಆ ಕನಸನ್ನು ನನಸು ಮಾಡುವಲ್ಲಿ ಆತನ ಹೋರಾಟ ಹೇಗಿರುತ್ತದೆ ಎಂಬುದೇ ಇಡೀ ಸಿನಿಮಾದ ಕಥೆಯಾಗಿದೆ.
ತನ್ನ ಜೀವನ ಕಥೆಯನ್ನಿಟ್ಟುಕೊಂಡು ಮಾಡಿದ ‘ಸೂರರೈ ಪೊಟ್ರು’ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿ ಆರ್ ಗೋಪಿನಾಥ್!

‘ಸೂರರೈ ಪೋಟ್ರು’ ಖ್ಯಾತಿಯ ಸುಧಾ ನಿರ್ದೇಶನದ ಮುಂದಿನ ಸಿನಿಮಾಕ್ಕೆ ಹೀರೋ ಯಾರು? ಶುರುವಾಗಿದೆ ಚರ್ಚೆ
Read more
[wpas_products keywords=”deal of the day party wear dress for women stylish indian”]