Karnataka news paper

ವಿಕಲಚೇತನ ಮಹಿಳೆಗೆ ಹಲ್ಲೆ; ಎಎಸ್‌ಐ ಅಮಾನತು, ಆರಗ ಜ್ಞಾನೇಂದ್ರ ಆದೇಶ


ಬೆಂಗಳೂರು:ಟೋಯಿಂಗ್ ವಿಚಾರವಾಗಿ ವಿಕಲಚೇತನ ಮಹಿಳೆಯ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಟ್ರಾಫಿಕ್ ಎಎಸ್ಐ ಅಮಾನತು ಮಾಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಆದೇಶ ಹೊರಡಿಸಿದ್ದಾರೆ.

ಈ ಕುರಿತಾಗಿ ಹೇಳಿಕೆ ನೀಡಿದರುವ ಅವರು, ಒಬ್ಬ ಅಸಹಾಯಕ ಮಹಿಳೆಯ ಮೇಲೆ, ಪೊಲೀಸ್ ಅಧಿಕಾರಿಯೊಬ್ಬರು, ಅವಾಚ್ಯ ಮಾತುಗಳನ್ನು ಬಳಸಿದ್ದಲ್ಲದೆ, ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ, ತನಿಖೆಗೆ ಆದೇಶಿಸಲಾಗಿದೆ. ಅಲ್ಲದೆ ಆಪಾದಿತ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಶೇಷ ಚೇತನ ಮಹಿಳೆಗೆ ಟ್ರಾಫಿಕ್ ಎಎಸ್‌ಐ ಹಲ್ಲೆ; ತನಿಖೆಗೆ ಸೂಚಿಸಿದ ಆರಗ ಜ್ಞಾನೇಂದ್ರ

ಯಾರೇ ಆದರೂ ಕಾನೂನನ್ನು ಕೈಗೆ ತೆಗೆದುಕೊಳ್ಳ ಬಾರದು, ಇದಕ್ಕೆ ಪೊಲೀಸರೂ ಹೊರತಾಗಿಲ್ಲ ಎಂದು ತಿಳಿಸಿರುವ ಸಚಿವರು, ಘಟನೆಯ ಬಗ್ಗೆ ತಕ್ಷಣ ತನಿಖೆ ನಡೆಸಿ ವರದಿ ನೀಡುವಂತೆ ನಿರ್ದೇಶಿಸಿದ್ದಾರೆ.

ಬೆಂಗಳೂರಿನ ಟ್ರಾಫಿಕ್ ಎಎಸ್‌ಐ ಒಬ್ಬರು ವಿಶೇಷ ಚೇತನ ಮಹಿಳೆಗೆ ಬೂಟು ಕಾಲಿನಿಂದ ಥಳಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅಷ್ಟೇ ಅಲ್ಲದೆ ಮಹಿಳೆಯ ತಲೆಕೂದಲು ಎಳೆದು ಮಹಿಳೆಯ ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ನಡೆದುಕೊಂಡಿದ್ದರು.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಗೃಹ ಸಚಿವರು ಇದೀಗ ಅಮಾನತು ಕ್ರಮ ಕೈಗೊಂಡಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಆರ್‌. ಅಶೋಕ್, ಟೋಯಿಂಗ್ ವಿಚಾರದಲ್ಲಿ ಪೊಲೀಸರು ಮತ್ತು ಜನಸಾಮಾನ್ಯರ ನಡುವೆ ಘರ್ಷಣೆ ವಿಚಾರವಾಗಿ ಮಾಧ್ಯಮಗಳಲ್ಲಿ ಹಲವು ಪ್ರಕರಣಗಳನ್ನು ನೋಡಿದ್ದೇವೆ. ಕೆಲವೆಡೆ ಟೋಯಿಂಗ್ ಮಾಡುವ ವಿಚಾರದಲ್ಲಿ ಬೇಕಾಬಿಟ್ಟಿ ಮಾಡ್ತಿದ್ದಾರೆ. ಈಗಾಗಲೇ ರವಿಕಾಂತೇಗೌಡ ಅವರ ಜೊತೆ ಮಾತುಕತೆ ನಡೆಸಿದ್ದೇವೆ. ಸೋಮವಾರ ಟ್ರಾಫಿಕ್ ಪೊಲೀಸ್‌ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ ಎಂದಿದ್ದಾರೆ.



Read more

[wpas_products keywords=”deal of the day sale today offer all”]