Karnataka news paper

ಸಿದ್ದರಾಮಯ್ಯ, ಡಿಕೆಶಿ ಎಣ್ಣೆ, ನೀರು ಇದ್ದಂತೆ ಅವರಿಬ್ಬರು ಎಂದಿಗೂ ಸೇರುವುದಿಲ್ಲ: ಸಚಿವ ಕಾರಜೋಳ


ಬಾಗಲಕೋಟೆ : ಬಿಜೆಪಿಯಿಂದ ಒಬ್ಬ ಶಾಸಕರು ಸಹ ಕಾಂಗ್ರೆಸ್ ಗೆ ಹೋಗಲ್ಲ, ಕಾಂಗ್ರೆಸ್ ಈಗ ಮುಳುಗುವ ಹಡಗು ಎಂದು ಜಲ ಸಂಪನ್ಮೂಲಗಳ ಸಚಿವರಾದ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಅವರು ಬಾಗಲಕೋಟೆ ನಗರದಲ್ಲಿ ಮಾತನಾಡುತ್ತಾ, ದೇಶದ 27 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ.

ಅಂತಹ ಪಕ್ಷಕ್ಕೆ ಯಾರೂ ಕೂಡ ಹೋಗೋದಿಲ್ಲ.ಅವರು ಬತಾ೯ರೆ ಬತಾ೯ರೆ ಅಂತ ಕಾಂಗ್ರೆಸ್ ನವರು ಭ್ರಮೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿ,ವಲಸೆ ಬಂದಿದ್ದಾರೆ ಎನ್ನುವುದರಲ್ಲಿ ಅಥ೯ವಿಲ್ಲ.ಅವರು ಪಕ್ಷಕ್ಕೂ ಮತ್ತು ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಬಂದು ಬಿಜೆಪಿ ಸದಸ್ಯರಾಗಿದ್ದಾರೆ. ಇಲ್ಲಿ ಎಲೆಕ್ಷನ್ ನಲ್ಲಿ ನಿಂತು ಗೆದ್ದು ಬಂದಿದ್ದಾರೆ. ಅವರು ಬಿಜೆಪಿ ಸದಸ್ಯರು ಬಿಟ್ಟು ಹೋಗುವ ಪ್ರಶ್ನೆನೇ ಇಲ್ಲ.ಅವರೇ ಹೇಳಿದ್ದಾರೆ ನಮ್ಮ ಜೀವ ಇರೋವರೆಗೂ ಇಲ್ಲೇ ಇತಿ೯ವಿ ಅಂತ. ಪಕ್ಷದಲ್ಲಿ ವಲಸಿಗರು ಅನ್ನೋ ಭಾವನೆ ಇಲ್ಲ ಎಲ್ಲರೂ ಬಿಜೆಪಿಗರೇ ಎಂದರು.

ಬಿಜೆಪಿ ಸಕಾ೯ರದಲ್ಲಿ ಏನು ಕೆಲಸವಾಗಿಲ್ಲವೆಂದ ಸಿದ್ದರಾಮಯ್ಯಗೆ ಹೇಳಿಕೆಗೆ ಕಾರಜೋಳ ತಿರುಗೇಟು ‌ನೀಡಿ,ಸಿದ್ದರಾಮಯ್ಯ ಏನು ಮಾಡಿಲ್ಲವೆಂದು ಹೇಳಿ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ ನ್ನ ಹೀನಾಯವಾಗಿ ಸೋಲಿಸಿದರು.ಅದನ್ನ ಅವರು ಅಥ೯ಮಾಡಿಕೊಳ್ಳಬೇಕು.ನಾವು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿದ್ದೇವೆ. 2013ರಿಂದ 18ರವರೆಗೆ ಕೊರೋನಾ, ಪ್ರವಾಹ ಇರಲಿಲ್ಲ. ಆದ್ರೂ ಸಿದ್ದು ಕಾಲದಲ್ಲಿ ಅಭಿವೃದ್ಧಿ ಆಗಲಿಲ್ಲ ಅಂತ ಜನ ತಿರಸ್ಕಾರ ಮಾಡಿದರು ಎಂದ ಅವರು, ಮುಂದೆಯೂ ಆ ಪಕ್ಷವನ್ನು ತಿರಸ್ಕಾರ ಮಾಡ್ತಾರೆ ಎಂದು ಟಾಂಗ್ ನೀಡಿದರು.

ಬೆಳಗಾವಿ ಬಿಜೆಪಿ ಭಿನ್ನಾಭಿಪ್ರಾಯ ವಿಚಾರವಾಗಿ ಮಾತನಾಡಿ, ಬೆಳಗಾವಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಎಲ್ಲರೂ ಟೀ ಕುಡಿಯೋಕೆ ಕೂಡಿದ್ರು , ಮೀಡಿಯಾದವರು ಭಿನ್ನಾಭಿಪ್ರಾಯ ಸ್ಪೋಟ ಅಂತ ತೋರಿಸ್ತಿರಿ. ಇದು ಮಾಧ್ಯಮದ ಸೃಷ್ಟಿ ಎಂದರು.

ಪಿಸುಮಾತಿನ ವಿಡಿಯೋದಿಂದ ಕಾಂಗ್ರೆಸ್ ನ ಒಳಗುದ್ದಾಟ ರಟ್ಟು : ಈಗಲೇ ಟಿಕೆಟ್‌ ಲಾಬಿಗೆ ಸಿದ್ದರಾಮಯ್ಯ ಸಿಟ್ಟು

ಪಿಸುಮಾತು ಬಗ್ಗೆ ಹೇಳಿಕೆ!
ಇನ್ನು ಸಿದ್ದರಾಮಯ್ಯ, ಅಶೋಕ್ ಪಟ್ಟಣ್ ಗುಸುಗುಸು ಚರ್ಚೆ ವಿಚಾರವಾಗಿ ಹೇಳಿಕೆ ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮೂರು ಗುಂಪುಗಳಿವೆ. ಖರ್ಗೆ, ಪರಮೇಶ್ವರ್ ಹಾಗೂ ಶಾಮನೂರು ಶಿವಶಂಕರಪ್ಪ ಅವರದೊಂದ್ದು ಗುಂಪು ಸೇರಿ ಒಟ್ಟಾರೆ ಮೂರು ಗುಂಪು ಇದೆ. ಇನ್ನೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಬ್ಬರು ಎಣ್ಣೆ, ನೀರು ಇದ್ದಂತೆ ಎಂದಿಗೂ ಸೇರುವುದಿಲ್ಲ. ಅವರಲ್ಲಿಯೇ ಒಡಕುಗಳಿವೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.



Read more

[wpas_products keywords=”deal of the day sale today offer all”]