Karnataka news paper

ಕಳೆದ ವಾರದ ಟಾಪ್ 10 ಮೌಲ್ಯ: 3 ಟ್ರಿಲಿಯನ್ ರು ನಷ್ಟ


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 18,340.07 ಕೋಟಿ ರು ಏರಿಸಿಕೊಂಡು 4,67,069.54 ಕೋಟಿ ರು ಮೌಲ್ಯಕ್ಕೆ ಏರಿದೆ. ಅದಕ್ಕೂ ಹಿಂದಿನ ವಾರದಲ್ಲಿ 4,863.91 ಕೋಟಿ ರು ಏರಿಸಿಕೊಂಡು 4,48,729.47 ಕೋಟಿ ರು ಮೌಲ್ಯ ಗಳಿಸಿತ್ತು.

ಮಿಕ್ಕಂತೆ ನಷ್ಟ ಅನುಭವಿಸಿದ ಕಂಪನಿಗಳು: ರಿಲಯನ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್, ಐಸಿಐಸಿಐ, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಚ್ ಡಿಎಫ್ ಸಿ, ಬಜಾಜ್ ಫೈನಾನ್ಸ್, ಭಾರ್ತಿ ಏರ್ ಟೆಲ್.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ 96,512.22 ಕೋಟಿ ರು ಇಳಿಕೆ ಕಂಡು 15,79,779.47 ಆಗಿದೆ. ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 53,488.29 ಕೋಟಿ ರು ಕಳೆದುಕೊಂಡು 13,65,042.43 ಕೋಟಿ ರು ಮೌಲ್ಯಕ್ಕೆ ಕುಸಿದಿದೆ.

ಇನ್ಫೋಸಿಸ್ ಮೌಲ್ಯ ಸತತ ಕುಸಿತ

ಇನ್ಫೋಸಿಸ್ ಮೌಲ್ಯ ಸತತ ಕುಸಿತ

ದೇಶದ ಎರಡನೇ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಭಾರಿ ಕುಸಿತ ಕಂಡು 42,392.63 ಕೋಟಿ ರು ಇಳಿಸಿಕೊಂಡಿದೆ. ಇನ್ಫೋಸಿಸ್ ಕಳೆದ ಎರಡು ವಾರದಲ್ಲಿ ಮೌಲ್ಯ ಇಳಿಸಿಕೊಂಡು 7,08,751.77 ಕೋಟಿ ರು ಮೌಲ್ಯ ಹೊಂದಿದೆ.

ಪ್ರಮುಖ ಬ್ಯಾಂಕುಗಳ ಮೌಲ್ಯ

ಪ್ರಮುಖ ಬ್ಯಾಂಕುಗಳ ಮೌಲ್ಯ

ಎಚ್‌ಡಿಎಫ್‌ಸಿ ಬ್ಯಾಂಕ್ 31,815.01 ಕೋಟಿ ರು ಇಳಿಕೆ ಕಂಡು 8,11,061.12 ಕೋಟಿ ರು ತಲುಪಿದೆ. ಬಜಾಜ್ ಫೈನಾನ್ಸ್ 30,333.64ಕೋಟಿ ರು ಏರಿಸಿಕೊಂಡು 4,14,699.49 ಕೋಟಿ ರುಗೆ ಇಳಿಕೆ ಕಂಡಿದೆ. ಐಸಿಐಸಿಐ ಬ್ಯಾಂಕ್ 16,291.53 ಕೋಟಿ ರು ಇಳಿಕೆ ಕಂಡು 5,42,407.86 ಕೋಟಿ ರು ತಲುಪಿದೆ.

ಭಾರ್ತಿ ಏರ್ ಟೆಲ್

ಭಾರ್ತಿ ಏರ್ ಟೆಲ್

ಭಾರ್ತಿ ಏರ್ ಟೆಲ್ ಸಂಸ್ಥೆ ಮೌಲ್ಯಗಳು 15,814.77 ಕೋಟಿ ರು ಇಳಿಸಿಕೊಂಡು 3,93,174.23 ಕೋಟಿ ರುಗೆ ಇಳಿಕೆ ಕಂಡಿದೆ. ಇದೇ ವೇಳೆ ಎಚ್‌ಡಿಎಫ್‌ಸಿ 13,319.96 ಕೋಟಿ ರು ಮೌಲ್ಯ ಇಳಿಕೆ ಕಂಡು 4,56,102.42 ಕೋಟಿ ರು ತಲುಪಿದೆ. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 9,210.39 ಕೋಟಿ ರು ಇಳಿಕೆ ಕಂಡು 5,36,411.69 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್,ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್ ಹಾಗೂ ಭಾರ್ತಿ ಏರ್ ಟೆಲ್.



Read more…

[wpas_products keywords=”deal of the day”]