Karnataka news paper

‘ಕೆಜಿಎಫ್’ ಮಾದರಿಯಲ್ಲೇ ತೆರೆಗೆ ಬರಲಿದೆ ‘ಸಲಾರ್’; ಪ್ರಭಾಸ್ ಸಿನಿಮಾದ ಬಗ್ಗೆ ಅಚ್ಚರಿಯ ಸುದ್ದಿ!


‘ಕೆಜಿಎಫ್’ ಹಿಟ್ ಆಗುತ್ತಿದ್ದಂತೆಯೇ ನಿರ್ದೇಶಕ ಪ್ರಶಾಂತ್ ನೀಲ್‌ಗೆ ಪರಭಾಷೆಯಿಂದ ಸಾಕಷ್ಟು ಆಫರ್ಸ್ ಬರೋದಕ್ಕೆ ಆರಂಭವಾಯ್ತು. ಯಶ್‌ ನಂತರ ಅವರಿಗೆ ಪ್ರಭಾಸ್ ಕಾಲ್‌ಶೀಟ್ ಸಿಕ್ತು. ‘ಕೆಜಿಎಫ್’ ನಿರ್ಮಾಪಕ ವಿಜಯ್ ಕಿರಗಂದೂರು ಜೊತೆ ‘ಸಲಾರ್‌’ ಸಿನಿಮಾ ಘೋಷಣೆ ಮಾಡಿಯೇ ಬಿಟ್ಟರು ಪ್ರಶಾಂತ್ ನೀಲ್. ಇದೀಗ ಆ ಸಿನಿಮಾದ ಬಹುತೇಕ ಕೆಲಸಗಳು ಮುಕ್ತಾಯಗೊಂಡಿದ್ದು, ಕೊನೇ ಹಂತದ ಕೆಲಸಗಳು ಚಾಲ್ತಿಯಲ್ಲಿವೆ. ಈ ಮಧ್ಯೆ ‘ಸಲಾರ್‌’ ಬಗ್ಗೆ ಒಂದು ಮಾತು ಕೇಳಿಬಂದಿದೆ. ಅದೇನೆಂದರೆ, ಆ ಸಿನಿಮಾ ಕೂಡ ‘ಕೆಜಿಎಫ್’ ಮಾದರಿಯಲ್ಲೇ ತೆರೆಗೆ ಬರಲಿದೆಯಂತೆ!

ಎರಡು ಭಾಗಗಳಲ್ಲಿ ‘ಸಲಾರ್
ಸದ್ಯ ಕೇಳಿಬಂದಿರುವ ಮಾಹಿತಿ ಪ್ರಕಾರ, ‘ಸಲಾರ್’ ಎರಡು ಪಾರ್ಟ್‌ಗಳಲ್ಲಿ ತೆರೆಗೆ ಬರಲಿದೆಯಂತೆ. ಅಷ್ಟಕ್ಕೂ ಈ ನಿರ್ಧಾರ ಯಾಕೆ? ಆ ಕುರಿತು ಯಾವುದೇ ಮಾಹಿತಿ ಇಲ್ಲ. ಅಲ್ಲದೆ, 2 ಪಾರ್ಟ್ ಮಾಡುವ ಕುರಿತು ಚಿತ್ರತಂಡ ಕೂಡ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಸದ್ಯಕ್ಕಂತೂ ಈ ಪಾರ್ಟ್ 2 ಟ್ರೆಂಡ್ ಹೆಚ್ಚಾಗಿದೆ. ಆ ಸಾಲಿಗೆ ಈಗ ‘ಸಲಾರ್’ ಕೂಡ ಸೇರಲಿದೆಯೇ? ಕಾದು ನೋಡಬೇಕು.

ಪ್ರಭಾಸ್‌ಗೆ ಈ ಟ್ರೆಂಡ್ ಹೊಸದಲ್ಲ
ಹಾಗೇ ನೋಡಿದ್ರೆ, ಈಚೆಗೆ ಪಾರ್ಟ್ 2 ಟ್ರೆಂಡ್ ಹೆಚ್ಚಾಗಿದ್ದೇ ‘ಬಾಹುಬಲಿ’ಯಿಂದ. ಪ್ರಭಾಸ್ ನಟನೆಯ ‘ಬಾಹುಬಲಿ 1’ ದೊಡ್ಡ ಹಿಟ್ ಆಗಿತ್ತು. ಪಾರ್ಟ್ 2 ಅದಕ್ಕಿಂತಲೂ ದೊಡ್ಡ ಹಿಟ್ ಆಗಿತ್ತು. ಆನಂತರ ಯಶ್ ನಾಯಕತ್ವದ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್‌’ ಪಾರ್ಟ್ 1 ಕೂಡ ಹಿಟ್ ಆಗಿತ್ತು. ಈಗ ಪಾರ್ಟ್ 2ಗಾಗಿ ಎಲ್ಲರೂ ಕಾದಿದ್ದಾರೆ. ಹಾಗಾಗಿ, ಪ್ರಶಾಂತ್ ನೀಲ್ ಮತ್ತು ಪ್ರಭಾಸ್‌ಗೆ ಈ ಸೀಕ್ವೆಲ್ ಸಿನಿಮಾಗಳನ್ನು ಮಾಡುವುದು ಹೊಸದೇನಲ್ಲ ಎಂಬುದು ಸಾಬೀತಾಗಿದೆ. ಇದೀಗ ‘ಸಲಾರ್‌’ ಮೂಲಕ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಯಾವ ರೀತಿಯ ಮೋಡಿ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕು.

ಮತ್ತೆ ತೆರೆಮೇಲೆ ಶಿವಗಾಮಿ & ಬಾಹುಬಲಿ; ಪ್ರಭಾಸ್ ಚಿತ್ರದಲ್ಲಿ ರಮ್ಯಾ ಕೃಷ್ಣಗೆ ಡಿಫರೆಂಟ್ ರೋಲ್!

‘ಸಲಾರ್‌’ ರಿಲೀಸ್ ಯಾವಾಗ?
‘ಕೆಜಿಎಫ್‌’ ಸರಣಿ ನಂತರ ವಿಜಯ್ ಕಿರಗಂದೂರು ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಸಿದ್ಧಗೊಳ್ಳುತ್ತಿರುವ, ಪ್ರಭಾಸ್ ಅಭಿನಯದ ‘ಸಲಾರ್‌’ ಸಿನಿಮಾವನ್ನು 2022ರ ಏಪ್ರಿಲ್ 14ರಂದೇ ರಿಲೀಸ್ ಮಾಡುವುದಾಗಿ 2021ರ ಫೆಬ್ರವರಿಯಲ್ಲೇ ಹೊಂಬಾಳೆ ಸಂಸ್ಥೆ ಹೇಳಿಕೊಂಡಿತ್ತು. ಇದೀಗ ಅದೇ ದಿನ ‘ಕೆಜಿಎಫ್: ಚಾಪ್ಟರ್ 2’ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿರುವುದರಿಂದ ಗೊಂದಲ ಉಂಟಾಗಿದೆ. ಹೌದು, 2022ರ ಏಪ್ರಿಲ್ 14 ರಂದು ‘ಕೆಜಿಎಫ್: ಚಾಪ್ಟರ್ 2’ ಚಿತ್ರವನ್ನು ರಿಲೀಸ್ ಮಾಡುವುದಾಗಿ ಹೊಂಬಾಳೆ ಫಿಲ್ಸ್ಮ್‌ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿದೆ! ಹಾಗಂತ, ಒಬ್ಬರೇ ನಿರ್ಮಾಣ ಮಾಡಿರುವ ಎರಡು ಬಿಗ್ ಬಜೆಟ್ ಪ್ಯಾನ್‌ ಇಂಡಿಯಾ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಲಿವೆಯೇ? ಖಂಡಿತ ಇಲ್ಲ ಎನ್ನುವುದು ಕೇಳಿಬಂದಿರುವ ಮಾಹಿತಿ. ಸದ್ಯ ‘ಕೆಜಿಎಫ್ 2’ ಸಿದ್ಧವಾಗಿದ್ದು, ಅದು ಏಪ್ರಿಲ್‌ 14ರಂದು ರಿಲೀಸ್ ಆಗಲಿದೆ. ‘ಸಲಾರ್‌’ಗೆ ಹೊಸ ರಿಲೀಸ್ ಡೇಟ್ ಘೋಷಣೆ ಆಗಬಹುದು ಎನ್ನಲಾಗಿದೆ.

ಕೊರೊನಾ ಎಫೆಕ್ಟ್: ‘RRR’ ಬಿಡುಗಡೆ ಪೋಸ್ಟ್‌ಪೋನ್‌ ಆಯ್ತು; ಹಾಗಾದ್ರೆ, ‘ರಾಧೆ ಶ್ಯಾಮ್’ ಕಥೆ ಏನು?



Read more

[wpas_products keywords=”deal of the day party wear dress for women stylish indian”]