ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸುದ್ದಿಸಂಸ್ಥೆ ಎಎನ್ಐ ಜತೆ ಮಾತನಾಡಿದ ಡಾ.ಪ್ರತೀತ್ ಸಮ್ದಾನಿ ಅವರು, ‘ಲತಾ ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆಯಾಗಿದೆ. ಎರಡು ದಿನಗಳ ಹಿಂದೆ ಅವರ ವೆಂಟಿಲೇಟರ್ ಸಂಪರ್ಕ ತೆಗೆಯಲಾಗಿದೆ. ಆದರೆ, ಲತಾ ಅವರಿಗೆ ಇನ್ನು ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ’ ಎಂದು ತಿಳಿಸಿದ್ದಾರೆ.
Mumbai | Veteran singer Lata Mangeshkar’s health condition has marginally improved. Her ventilator support was removed two days ago. She will continue to be under observation in ICU: Dr Pratit Samdani, Breach Candy Hospital
(file photo) pic.twitter.com/HPjbdoOHZQ
— ANI (@ANI) January 29, 2022
ಎರಡು ವಾರಗಳ ಹಿಂದೆ ಲತಾ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಕೂಡಲೇ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು.
ಲತಾ ಮಂಗೇಶ್ಕರ್ ಅವರ ಆರೋಗ್ಯ ಕುರಿತಾದ ವದಂತಿಗಳಿಗೆ ಕಿವಿಗೊಡದಂತೆ ಅವರ ವಕ್ತಾರರು ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಆರೋಗ್ಯ ಕುರಿತು ಗಾಳಿ ಸುದ್ದಿಗಳು ಹರಡಿದ್ದವು. ಈ ಹಿನ್ನೆಲೆಯಲ್ಲಿ ಲತಾ ಮಂಗೇಶ್ಕರ್ ವಕ್ತಾರರು ಮನವಿ ಮಾಡಿದ್ದರು.
ಓದಿ… ಯುವ ನಟಿಯೊಂದಿಗೆ ಹೃತಿಕ್ ರೋಷನ್ ಡೇಟಿಂಗ್? ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್
Read More…Source link
[wpas_products keywords=”deal of the day party wear for men wedding shirt”]