Karnataka news paper

ಕಾಶ್ಮೀರದಲ್ಲಿ ಭಾರತೀಯ ಸೇನೆಯ ಭರ್ಜರಿ ಕಾರ್ಯಾಚರಣೆ: JEM ಕಮಾಂಡರ್ ವಾನಿ ಸೇರಿ ಐವರು ಉಡೀಸ್


ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತಿರುವ ಭಾರತೀಯ ಸೇನೆ ಇದೀಗ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆ ನಡೆಸಿದ ಯೋಧರು ಐವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬದ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಐವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿರುವ ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್, ಎನ್‌ಕೌಂಟರ್‌ಗಳಲ್ಲಿ ಹತರಾದ ಉಗ್ರರು ಪಾಕಿಸ್ತಾನ ಮೂಲದ ಭಯೋತ್ಪಾದಕರಾಗಿದ್ದು, ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್‌ಗೆ ಸಂಘಟನೆಗೆ ಸೇರಿದ್ದವರಾಗಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಜೆಇಎಂ ಕಮಾಂಡರ್ ಜಾಹಿದ್ ವಾನಿ ಕೂಡ ಯೋಧರ ಗುಂಡೇಟಿಗೆ ಬಲಿಯಾಗಿದ್ದು, ಇದು ಭದ್ರತಾ ಪಡೆಗಳಿಗೆ ದೊರೆತ ದೊಡ್ಡ ಯಶಸ್ಸು ಎಂದು ವಿಜಯ್ ಕುಮಾರ್ ಬಣ್ಣಿಸಿದ್ದಾರೆ.

ಯುಪಿ, ಪಂಜಾಬ್ ಚುನಾವಣೆ ವೇಳೆ ಹಿಂಸಾಚಾರಕ್ಕೆ ಷಡ್ಯಂತ್ರ..! ಖಲಿಸ್ತಾನ್ ಉಗ್ರರಿಗೆ ಐಎಸ್‌ಐ ಬೆಂಬಲ..!

ಜನವರಿ ತಿಂಗಳಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಒಟ್ಟು 11 ಎನ್‌ಕೌಂಟರ್‌ ನಡೆದಿದ್ದು, ಪಾಕಿಸ್ತಾನದ ಎಂಟು ಸೇರಿದಂತೆ ಒಟ್ಟು 21 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಕೂಡ ವಿಜಯ್ ಕುಮಾರ್ ಈ ವೇಳೆ ಮಾಹಿತಿ ನೀಡಿದರು. ಕಣಿವೆ ರಾಜ್ಯದಲ್ಲಿ ಅರಾಜಕತೆ ಉಂಟು ಮಾಡಲು ಪಾಕಿಸ್ತಾನ ಪ್ರಯತ್ನಿಸುತ್ತಲೇ ಇದೆ. ಇದಕ್ಕಾಗಿ ಉಗ್ರರನ್ನು ಭಾರತದ ಗಡಿಯೊಳಗೆ ಕಳುಹಿಸಿಕೊಡುತ್ತಿದೆ. ಆದರೆ ಇದಕ್ಕೆ ಭಾರತೀಯ ಯೋಧರು ತಕ್ಕ ಪಾಠ ಕಲಿಸುತ್ತಿದ್ದಾರೆ.



Read more

[wpas_products keywords=”deal of the day sale today offer all”]