PTI
ಮುಂಬೈ: ಸ್ವಂತ ವಾಹನದಲ್ಲೇ ವೆಸ್ಟ್‌ಇಂಡೀಸ್ ವಿರುದ್ಧ ನಡೆಯಲಿರುವ ಸರಣಿಗೆ ಆಗಮಿಸುವಂತೆ ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ಶಾಕ್ ನೀಡಿದೆ.
ದಕ್ಷಿಣ ಆಫ್ರಿಕಾ ಪ್ರವಾಸ ಪೂರ್ಣಗೊಳಿಸಿ ಸ್ವದೇಶಕ್ಕೆ ವಾಪಸ್ಸಾಗಿ ಆಟಗಾರರು ವಿಶ್ರಾಂತಿ ಪಡೆಯುತ್ತಿದ್ದಾರೆ. ಫೆ. ೬ ರಿಂದ ವೆಸ್ಟ್‌ಇಂಡೀಸ್ ವಿರುದ್ಧ ಸರಣಿ ಆರಂಭವಾಗಲಿದೆ. ಅಹ್ಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಈ ಪಂದ್ಯ ಆಡಲು ಭಾರತ ತಂಡ ಫೆ. ೧ ರಂದೇ ಅಹ್ಮದಾಬಾದ್‌ಗೆ ತೆರಳಬೇಕಿದೆ.
ಇದೇ ಮೊದಲ ಬಾರಿಗೆ ಕೋವಿಡ್ ಹಿನ್ನೆಲೆಯಲ್ಲಿ ರೋಹಿತ್‌ಶರ್ಮಾ ಪಡೆ ಚಾರ್ಟರ್ ಫ್ಲೈಟ್ ಇಲ್ಲದೆ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಏಕದಿನ ಸರಣಿಗಾಗಿ ತಮ್ಮ ಮನೆಯಿಂದ ಆಹ್ಮದಾಬಾದ್‌ಗೆ ಸ್ವಂತ ವಾಹನದಲ್ಲಿ ಬರುವಂತೆ ಬಿಸಿಸಿಐ ಆಟಗಾರರಿಗೆ ಸೂಚಿಸಿದೆ. ಆಟಗಾರರು ಫೆ. ೧ ರಂದು ೨ ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದು, ಬಳಿಕ ಅಭ್ಯಾಸ ನಡೆಸಲಿದೆ. ವೆಸ್ಟ್‌ಇಂಡೀಸ್ ತಂಡವು ಫೆ. ೨ ರಂದು ಇಂಗ್ಲೆಂಡ್ ವಿರುದ್ಧ ಟಿ-೨೦ ಸರಣಿ ಮುಗಿಸಿ ಭಾರತಕ್ಕೆ ಆಗಮಿಸಲಿದೆ.
ಭಾರತ-ವೆಸ್ಟ್‌ಇಂಡೀಸ್ ಏಕದಿನ ಸರಣಿ ಅಂತ್ಯಗೊಂಡ ಬಳಿಕ ಕೊಲ್ಕತ್ತದಲ್ಲಿ ನಡೆಯಲಿರುವ ಟಿ-೨೦ ಸರಣಿಗೆ ಬಿಸಿಸಿಐ ಚಾರ್ಟರ್ ವಿಮಾನ ಆಯೋಜಿಸುವ ಸಾಧ್ಯತೆ ಇದೆ ಎಂದು ಖಾಸಗಿ ಕ್ರೀಡಾವಾಹಿನಿ ವರದಿ ಮಾಡಿದೆ.
Read more…
[wpas_products keywords=”deal of the day sports items”]