ಬೆಂಗಳೂರು: ವಾಹನಗಳ ಟೋಯಿಂಗ್ ಮಾಡುತ್ತಿದ್ದ ಪೊಲೀಸ್‌ಗೆ ಕಲ್ಲಿನಿಂದ ಹೊಡೆದರೆಂಬ ಕಾರಣಕ್ಕೆ, ಅಂಗವಿಕಲ ಮಹಿಳೆಗೆ ಬೂಟುಗಾಲಿನಿಂದ ಎಎಸ್ಐ ಒದ್ದಿರುವ ಪ್ರಕರಣದ ತನಿಖೆ ನಡೆಸಲು ಗೃಹ ಸಚಿವ ಸೂಚನೆ ನೀಡಿದ್ದಾರೆ.
ಘಟನೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಒಬ್ಬ ಅಮಾಯಕ ಮಹಿಳೆಯ ಮೇಲೆಪೊಲೀಸ್ ಅಧಿಕಾರಿಯೊಬ್ಬರು ಅವಾಚ್ಯ ಮಾತುಗಳನ್ನು ಬಳಸಿದ್ದಲ್ಲದೆ, ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಸೂಚಿಸಿರುವೆ’ ಎಂದಿದ್ದಾರೆ.
‘ಯಾರೇ ಆದರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು, ಇದಕ್ಕೆ ಪೊಲೀಸರೂ ಹೊರತಾಗಿಲ್ಲ’ ಎಂದೂ ತಿಳಿಸಿದ್ದಾರೆ.
Read more from source
[wpas_products keywords=”deal of the day sale today kitchen”]