Karnataka news paper

ಆಸ್ಟ್ರೇಲಿಯನ್ ಓಪನ್: ಟೆನಿಸ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಆಶ್ ಬಾರ್ಟಿ


Online Desk

ಮೆಲ್ಬೋರ್ನ್: ಟೆನಿಸ್ ಆಟಗಾರ್ತಿ ಆಶ್ ಬಾರ್ಟಿ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಫೈನಲ್‌ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಆಶ್ ಬಾರ್ಟಿ ಅವರು ತನ್ನ ತವರಿಗೆ ೪೪ ವರ್ಷಗಳ ಬಳಿಕ ಮಹಿಳಾ ವಿಭಾಗದಲ್ಲಿ ಗ್ರ್ಯಾಂಡ್ ಸ್ಲಮ್ ಪ್ರಶಸ್ತಿ ತಂದುಕೊಟ್ಟು ಇತಿಹಾಸ ನಿರ್ಮಿಸಿದ್ದಾರೆ.

ಎರಡನೇ ಸೆಟ್‌ನಲ್ಲಿ 5-1 ರಿಂದ ಚೇತರಿಸಿಕೊಂಡ ಆಶ್ ಬಾರ್ಟಿ ಶನಿವಾರದಂದು ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ 6-3, 7-6 (2) ರಿಂದ ಡೇನಿಯಲ್ ಕಾಲಿನ್ಸ್ ವಿರುದ್ಧ ಗೆದ್ದರು. ಅಗ್ರ ಶ್ರೇಯಾಂಕದ ಬಾರ್ಟಿ 27ನೇ ಶ್ರೇಯಾಂಕದ ಕಾಲಿನ್ಸ್ ವಿರುದ್ಧ ಒಂದು ಸರ್ವಿಸ್ ಬ್ರೇಕ್‌ನೊಂದಿಗೆ ಮೊದಲ ಸೆಟ್ ಅನ್ನು ಗೆದ್ದರು. ತದನಂತರ ಎರಡು ಮತ್ತು ಆರನೇ ಗೇಮ್‌ಗಳಲ್ಲಿ ಅಮೆರಿಕದ ಡೇನಿಯಲ್ ಕಾಲಿನ್ಸ್ ವಿರುದ್ಧದ ಸರ್ವ್ ಮುರಿದು 5-1 ಮುನ್ನಡೆ ಸಾಧಿಸಿದರು.

ಬಾರ್ಟಿ 1980 ರಲ್ಲಿ ವೆಂಡಿ ಟರ್ನ್‌ಬುಲ್ ನಂತರ ಆಸ್ಟ್ರೇಲಿಯನ್ ಓಪನ್‌ನ ಸಿಂಗಲ್ಸ್ ಫೈನಲ್‌ಗೆ ಪ್ರವೇಶಿಸಿದ ಮೊದಲ ಆಸ್ಟ್ರೇಲಿಯನ್ ಮಹಿಳೆ ಎನಿಸಿಕೊಂಡಿದ್ದಾರೆ ಮತ್ತು ಈಗ 1978ರಲ್ಲಿ ಕ್ರಿಸ್ ಓ’ನೀಲ್ ನಂತರ ಮೊದಲ ಆಸ್ಟ್ರೇಲಿಯನ್ ಚಾಂಪಿಯನ್ ಆಗಿದ್ದಾರೆ.

25 ವರ್ಷದ ಬಾರ್ಟಿ ಗ್ರ್ಯಾಂಡ್ ಸ್ಲ್ಯಾಮ್ ಜೊತೆಗೆ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಂತಾಗಿದೆ. ೨೦೨೧ರಲ್ಲಿ ವಿಂಬಲ್ಡನ್ ಮತ್ತು 2019ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಪ್ರಶಸ್ತಿ ಹಿಡಿದು ಗೆಲುವಿನ ನಗೆ ಬೀರಿದ್ದರು.



Read more…

[wpas_products keywords=”deal of the day sports items”]