Karnataka news paper

ನಾಯಕತ್ವದಲ್ಲಿ ಅಲ್ಪಸಂಖ್ಯಾತರ ಕಡಗಣನೆ; ಕೈ ಪಾಳಯದಲ್ಲಿ ಆಂತರಿಕ ಚರ್ಚೆ


ಬೆಂಗಳೂರು: ವಿಧಾನಪರಿಷತ್‌ ಪ್ರತಿಪಕ್ಷದ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಅವರಿಗೆ ಸ್ಥಾನ ಕೈತಪ್ಪಿರುವುದು ಕಾಂಗ್ರೆಸ್‌ ಪಾಳಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಪಕ್ಷದ ಪ್ರಮುಖ ಓಟ್ ಬ್ಯಾಂಕ್ ಆಗಿರುವ ಮುಸ್ಲಿಂ ಸಮುದಾಯಕ್ಕೆ ನಾಯಕತ್ವ ವಿಚಾರ ಬಂದಾಗ ಪದೇ ಪದೇ ಹಿನ್ನಡೆಯಾಗುತ್ತಿದೆ ಎಂಬ ಆರೋಪಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬರುತ್ತಿದೆ.

ಕಾಂಗ್ರೆಸ್ ಪಕ್ಷದ ಪ್ರಮುಖ ಓಟ್ ಬ್ಯಾಂಕ್‌ ಮುಸ್ಲಿಂ ಸಮುದಾಯವಾಗಿದೆ. ಮುಸ್ಲಿಂ ಸಮುದಾಯದ ಮತಗಳನ್ನು ಪಡೆಯಲು ಜೆಡಿಎಸ್‌ ಹಾಗೂ ಇತರ ಪಕ್ಷಗಳು ಪ್ರಯತ್ನ ಪಟ್ಟರೂ ಅದರಲ್ಲಿ ಯಶಸ್ವಿಯಾಗಿಲ್ಲ. ಇತ್ತೀಚೆಗೆ ಹುಟ್ಟುಕೊಂಡಿರುವ ಎಸ್‌ಡಿಪಿಐ ಎಂಬ ಪಕ್ಷವೂ ಸ್ಥಳೀಯ ಮಟ್ಟದಲ್ಲಿ ಮುಸ್ಲಿಂ ಮತಗಳನ್ನು ಪಡೆದುಕೊಳ್ಳುವಲ್ಲಿ ಕೆಲವು ಜಿಲ್ಲೆಗಳಲ್ಲಿ ಯಶಸ್ವಿಯಾಗುತ್ತಿದ್ದರೂ ದೊಡ್ಡ ಮಟ್ಟದಲ್ಲಿ ಮುಸ್ಲಿಮರು ಕಾಂಗ್ರೆಸ್ ಕೈಹಿಡಿಯುತ್ತಾ ಬಂದಿದ್ದಾರೆ.

ಬಿಜೆಪಿಯಲ್ಲಿ ಮೂಲ v/s ವಲಸೆ: ರಮೇಶ್ ಜಾರಕಿಹೊಳಿಗೆ ಟಕ್ಕರ್ ಕೊಡಲು ಪ್ಲ್ಯಾನ್!

ಆದರೆ ಕಾಂಗ್ರೆಸ್ ಪಕ್ಷದಲ್ಲಿ ಯ.ಟಿ ಖಾದರ್, ರಿಜ್ವಾನ್ ಅರ್ಷದ್, ತನ್ವೀರ್ ಸೇಠ್, ಜಮೀರ್ ಅಹ್ಮದ್ ಖಾನ್, ರಹೀಂ ಖಾನ್ , ಖನಿಝಾ ಫಾತಿಮಾ, ಎನ್. ಎ ಹ್ಯಾರಿಸ್‌ ಸೇರಿ 7 ಮಂದಿ ಮುಸ್ಲಿಂ ಶಾಸಕರು ಇದ್ದಾರೆ. ಈ ಪೈಕಿ ಖಾದರ್, ಜಮೀರ್‌, ತನ್ವೀರ್‌ ಸಚಿವರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದಾರೆ.

ಹೀಗಿದ್ದರೂ ನಾಯಕತ್ವ ವಿಚಾರ ಬಂದಾಗ ಅಲ್ಪಸಂಖ್ಯಾತ ಮುಖಂಡರಿಗೆ ಪಕ್ಷದಲ್ಲಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಸೂಕ್ತ ಸ್ಥಾನಮಾನ ಸಿಕ್ಕಿರುವುದು ಕಡಿಮೆ. ಇದೀಗ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಿಎಂ ಇಬ್ರಾಹಿಂ ಅವರ ಹೆಸರು ಕೇಳಿಬಂದಿತ್ತಾದರೂ ಅವರಿಗೆ ನೀಡಿಲ್ಲ. ಬದಲಾಗಿ ಅದು ಬಿ.ಕೆ ಹರಿಪ್ರಸಾದ್ ಪಾಲಾಗಿದೆ. ಸಹಜವಾಗಿ ಇದು ಪಕ್ಷದ ಅಲ್ಪಸಂಖ್ಯಾತ ವಲಯದಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಪ್ರಮುಖ ಓಟ್ ಬ್ಯಾಂಕ್ ಅಲ್ಪಸಂಖ್ಯಾತರು ಆದರೆ ನಾಯಕತ್ವ ವಿಚಾರ ಬಂದಾಗ ಸೂಕ್ತ ಸ್ಥಾನ ಮಾನ ಸಿಗುತ್ತಿಲ್ಲ ಎಂಬ ಆರೋಪ ಇದೆ. ಈ ನಿಟ್ಟಿನಲ್ಲಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂಬ ಒತ್ತಾಯ ಇದೀಗ ಕೇಳಿಬರುತ್ತಿದೆ. ಕೈ ಹೈಕಮಾಂಡ್ ಇದಕ್ಕೆ ಯಾವ ರೀತಿ ಸ್ಪಂದಿಸುತ್ತದೆ ಎಂಬುವುದು ಸದ್ಯದ ಕುತೂಹಲ.



Read more

[wpas_products keywords=”deal of the day sale today offer all”]