Karnataka news paper

ಕೆಪಿಸಿಸಿಗೆ ಅರ್ಜಿ ಹಾಕಿದ್ದು ಸಾಬೀತಾದರೆ ವಾಚ್‌ಮನ್‌ ಕೆಲಸ ಮಾಡುವೆ : ಶಾಸಕ ಪ್ರೀತಂ ಗೌಡ


ಹಾಸನ : ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗ್ತಿನಿ ಅಂಥಾ ಯೋಚನೆ ಮಾಡಿದ್ರೆ ಅವತ್ತೆ ನನ್ನ ರಾಜಕಾರಣದ ಅಂತಿಮ ದಿನ ಆಗಿರುತ್ತೆ ಎಂದು ಶಾಸಕ ಪ್ರೀತಂ ಜೆ.ಗೌಡ ಕಾಂಗ್ರೆಸ್‌ ಮುಖಂಡರ ಆರೋಪದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ ಸೇರ್ಪಡೆಯಾಗಲು ಶಾಸಕ ಪ್ರೀತಂ ಜೆ.ಗೌಡ ಹೆಸರಿನಿಂದ ಕೆಪಿಸಿಸಿಗೆ ಅರ್ಜಿ ಬಂದಿದೆ ಎಂಬ ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಮಹೇಶ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ”ನಾನು ಕಾಂಗ್ರೆಸ್‌ಗೆ ಅರ್ಜಿ ಹಾಕಿರು ವುದನ್ನು ತೋರಿಸಿದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಆಗುತ್ತೇನೆ”, ಎಂದರು.

”ಆರೋಪ ಮಾಡಿದ ಮಹೇಶ್‌ ಮೊದಲು ನಾನು ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲ್ಲಎಂದು ಹೇಳಲಿ, ಜೆಡಿಎಸ್‌ ಪಕ್ಷದ ಏಜೆಂಟ್‌ ಆಗಿ ಮಹೇಶ್‌ ಕಾಂಗ್ರೆಸ್‌ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆ ಪಕ್ಷದ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಇಂತಹವರು ನಮ್ಮಂತ ಪಕ್ಷ ನಿಷ್ಠೆ, ಜನರ ಪ್ರೀತಿ ಗಳಿಸಿದವರ ವಿರುದ್ಧ ಅಪಪ್ರಚಾರ ಮಾಡಿದರೆ ಜನರೇ ತಕ್ಕ ಉತ್ತರ ನೀಡುತ್ತಾರೆ”, ಎಂದು ಆಕ್ರೋಶ ಹೊರಹಾಕಿದರು

”ಕಾಂಗ್ರೆಸ್‌ಗೆ ಅರ್ಜಿ ಹಾಕಿರುವುದನ್ನು ಸಾಬೀತು ಮಾಡಿದರೆ ನಾನು ಪ್ರಾಮಾಣಿಕವಾಗಿ ಅವರ ಮನೆಯಲ್ಲಿ, ಅವರು ಕೆಲಸ ಕೊಡ್ತರೋ ಇಲ್ಲವೋ ಗೊತ್ತಿಲ್ಲ, ಕೆಲಸ ಕೊಡದಿದ್ದರೂ ಅವರ ಮನೆಯಲ್ಲಿ ವಾಚ್‌ಮೆನ್‌ ಆಗಿ ಕೆಲಸ ಮಾಡ್ತಿನಿ”, ಎಂದರು.

ಉಸಿರಿರುವವರಗೆ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ: ಪ್ರೀತಮ್‌ ಗೌಡ

ಪ್ರೀತಂ ಗೌಡ ಕಾಂಗ್ರೆಸ್ ಸೇರಲಿದ್ದಾರೆ. ಈ ಹಿನ್ನೆಲೆ ಕೆಪಿಸಿಸಿಗೆ ಪತ್ರ ಬರೆದಿದ್ದಾರೆ ಎನ್ನುವ ಪತ್ರವೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದಕ್ಕೆ ಇದೀಗ ಪ್ರೀತಂ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.



Read more

[wpas_products keywords=”deal of the day sale today offer all”]