70 ರೂ. ಇದ್ದ ಅವರೆಕಾಯಿ ಇದೀಗ ಕೆ.ಜಿ.ಗೆ 55-60 ರೂ. ಇದೆ. ನೂರು ರೂ. ಇದ್ದ ಬೆಂಡೆಕಾಯಿ 45 ರೂ.ಗೆ ಇಳಿದಿದೆ. ದುಬಾರಿಯಾಗಿದ್ದ ಕೊತ್ತಂಬರಿ ಸೊಪ್ಪು ಒಂದು ಕಂತೆಗೆ 20-25 ರೂ.ಗೆ ಇಳಿಕೆಯಾಗಿದೆ. ಆದರೆ ಕ್ಯಾರೆಟ್ ದರ ತುಸು ಹೆಚ್ಚಾಗಿಯೇ ಇದೆ. ಕಳೆದ ಕೆಲ ತಿಂಗಳ ಹಿಂದೆ ನಿರಂತರವಾಗಿ ಸುರಿದ ಮಳೆಯಿಂದಾಗಿ ತರಕಾರಿ ಬೆಳೆಗಳು ಹಾಳಾಗಿದ್ದವು. ಹೀಗಾಗಿ ಪೂರೈಕೆ ಕೊರತೆಯಿಂದ ಟೊಮೇಟೊ, ಬೀನ್ಸ್, ಬದನೆಕಾಯಿ, ಕ್ಯಾಪ್ಸಿಕಂ ಸೇರಿದಂತೆ ಹಲವು ತರಕಾರಿಗಳ ದರ ಕೆಜಿಗೆ ನೂರರ ಗಡಿ ತಲುಪಿದ್ದವು.
ಆದರೆ, ಈ ದರಗಳು ಇದೀಗ ಅರ್ಧದಷ್ಟು ಕುಸಿದಿವೆ. ”ನವೆಂಬರ್‌ನಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಇದೀಗ ತರಕಾರಿ ಇಳುವರಿ ಉತ್ತಮವಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿವೆ. ಹೀಗಾಗಿ ಸ್ವಲ್ಪ ಇಳಿಕೆಯಾಗಿದೆ” ಎನ್ನುತ್ತಾರೆ ಎಪಿಎಂಸಿ ತರಕಾರಿ ಸಗಟು ಮಾರಾಟಗಾರ ಕೇಶವಮೂರ್ತಿ.
ಕೊರೊನಾ ನಂತರ ಉದ್ಯೋಗ ಕಳೆದುಕೊಂಡಿದ್ದ ಯುವಜನತೆ ಸಹ ಕೃಷಿಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಇದರಿಂದಾಗಿ ಮಾರುಕಟ್ಟೆಗಳಲ್ಲಿ ನಾನಾ ತರಕಾರಿಗಳ ಸರಬರಾಜು ಹೆಚ್ಚಾಗಿದೆ. ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರ, ಗುಜರಾತ್‌ನಲ್ಲಿ ಈರುಳ್ಳಿ ಹೊಸ ಬೆಳೆ ಬಂದಿದೆ. ಹೀಗಾಗಿ ಈರುಳ್ಳಿ ದರವೂ ಕುಸಿದಿದ್ದು, ಗುಣಮಟ್ಟದ ಈರುಳ್ಳಿಗೆ 40-50 ರೂ.ಗೆ ಸಿಗುತ್ತಿದೆ.
ಟೊಮೇಟೊ ಬೆಲೆ ತೀವ್ರ ಕುಸಿತ; ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಕೈ ಸುಟ್ಟುಕೊಳ್ಳುವ ಆತಂಕ!
ಅಧಿಕ ಪೋಷಕಾಂಶಗಳುಳ್ಳ ನುಗ್ಗೆಕಾಯಿ ಕೂಡ ಕೆ.ಜಿ. 400 ರೂ. ದಾಟಿತ್ತು. ಇದೀಗ 250 ರೂ.ಗೆ ದೊರೆಯುತ್ತಿದ್ದು, ಚಿಲ್ಲರೆ ದರದಲ್ಲಿ 20 ರೂ.ಗೆ 3 ಕಾಯಿ ಸಿಗುತ್ತಿವೆ. ತೆಂಗಿನಕಾಯಿ ಸಾಧಾರಣ ಗಾತ್ರದ್ದು 25ರಿಂದ 30, ದೊಡ್ಡ ಗಾತ್ರದ್ದು 35 ರೂ. ರೂ.ನಂತೆ ಮಾರಾಟ ಮಾಡಲಾಗುತ್ತಿದೆ.
ಸೊಪ್ಪುಗಳ ಬೆಲೆಯೂ ಇಳಿದಿದೆ
ನವೆಂಬರ್- ಡಿಸೆಂಬರ್‌ನಲ್ಲಿ ಎಲ್ಲಾ ಬಗೆಯ ಸೊಪ್ಪಿನ ದರಗಳು ಗಗನಕ್ಕೇರಿದ್ದವು. ಮೆಂತ್ಯ, ಸಬ್ಬಸಿಗೆ, ಪಾಲಕ್, ದಂಟು ಹೀಗೆ ಎಲ್ಲಾ ಸೊಪ್ಪುಗಳು ಕಂತೆಗೆ 30-40 ರೂ.ಗೆ ಏರಿಕೆಯಾಗಿದ್ದವು. ಇದೀಗ ಎಲ್ಲವೂ 20ರ ಆಸುಪಾಸಿನಲ್ಲಿವೆ. ಆದರೆ ಚಳಿಗಾಲದ ಹಿನ್ನೆಲೆಯಲ್ಲಿ ಕರಿಬೇವಿನ ಎಲೆಗಳು ಉದುರುತ್ತಿರುವುದರಿಂದ ಇದರ ದರ ಕೆ.ಜಿ.ಗೆ 110 ರೂ. ಇದೆ. 10 ರೂ.ಗೆ ಒಂದು ಕಂತೆಯಂತೆ ಮಾರಾಟ ಮಾಡಲಾಗುತ್ತಿದೆ.
ಹಾಪ್‌ಕಾಮ್ಸ ನಲ್ಲಿತರಕಾರಿ ದರ!
ಬೀನ್ಸ… 50 ರೂ.
ಬಿಳಿ ಬದನೆಕಾಯಿ 50 ರೂ.
ಗುಂಡು ಬದನೆ 45 ರೂ.
ಬೀಟ್‌ರೂಟ್ 66 ರೂ.
ಹಾಗಲಕಾಯಿ 44 ರೂ.
ಸೌತೆಕಾಯಿ 20 ರೂ.
ಕ್ಯಾಪ್ಸಿಕಾಂ 60 ರೂ.
ಕ್ಯಾರಟ್ ಡೆಲ್ಲಿ60 ರೂ.
ನಾಟಿ ಕ್ಯಾರಟ್ 92 ರೂ.
ಎಲೆಕೋಸು 62 ರೂ.
ನುಗ್ಗೆಕಾಯಿ 255 ರೂ.
ಬೆಂಡೆಕಾಯಿ 56 ರೂ.
ಈರುಳ್ಳಿ ಮಧ್ಯಮ 32 ರೂ.
ಮೂಲಂಗಿ 20 ರೂ.
ಹೀರೇಕಾಯಿ 63 ರೂ.
ಟೊಮೇಟೊ 35 ರೂ.
ಕೊತ್ತಂಬರಿ ಸೊಪ್ಪು 36 ರೂ.
ದಂಟಿನ ಸೊಪ್ಪು 42 ರೂ.
ಮೆಂತ್ಯ ಸೊಪ್ಪು 38 ರೂ.
ಸಬ್ಬಕ್ಕಿ ಸೊಪ್ಪು 42 ರೂ.
ಸಪೋಟ 44 ರೂ.
ಏಲಕ್ಕಿ ಬಾಳೆ 44 ರೂ.
Read more
[wpas_products keywords=”deal of the day sale today offer all”]