Karnataka news paper

ಮೋದಿಗೆ ತಿರುಗುಬಾಣವಾದ ‘ಕೆಂಪು ಟೋಪಿ’ ಟೀಕೆ; ಪ್ರಧಾನಿ ಹೇಳಿಕೆಯನ್ನೇ ಪ್ರತ್ಯಸ್ತ್ರವನ್ನಾಗಿಸಿದ ಅಖಿಲೇಶ್‌ ಟೀಂ


ಲಖನೌ: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾತಿ ಲೆಕ್ಕಾಚಾರ ಮಾತ್ರವಲ್ಲ, ವಿರೋಧಿಗಳ ಹೇಳಿಕೆ, ಟೀಕೆಗಳು ಸಹ ಚುನಾವಣೆ ಪ್ರಚಾರದ ವಿಷಯಗಳಾಗಿ ಮಾರ್ಪಾಡಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜವಾದಿ ಪಕ್ಷದ ವಿರುದ್ಧ ಬಳಸಿದ್ದ ‘ಕೆಂಪು ಟೋಪಿ ಧರಿಸಿದವರು ಉತ್ತರ ಪ್ರದೇಶಕ್ಕೆ ರೆಡ್‌ ಅಲರ್ಟ್‌’ ಎಂಬ ಅಸ್ತ್ರವನ್ನೇ ಸಮಾಜವಾದಿ ಪಕ್ಷವು ಪ್ರತ್ಯಸ್ತ್ರವನ್ನಾಗಿ ಬಳಸುತ್ತಿದೆ.

ಸಮಾಜವಾದಿ ಪಕ್ಷದ ಹಿರಿಯ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಚುನಾವಣೆ ಪ್ರಚಾರದ ಪ್ರತಿಯೊಂದು ಘಳಿಗೆಯಲ್ಲೂ ಕೆಂಪು ಟೋಪಿಗಳನ್ನು ಧರಿಸುತ್ತಿದ್ದಾರೆ. ಕೆಂಪು ಟೋಪಿ ಎಂಬುದು ಬದಲಾವಣೆ ಹಾಗೂ ಕ್ರಾಂತಿಯ ಸಂಕೇತ ಎಂದು ಜನರಿಗೆ ಬಿಂಬಿಸುತ್ತಿದ್ದಾರೆ. ಪ್ರತಿಯೊಬ್ಬರೂ ಕೆಂಪು ಟೋಪಿ ಖರೀದಿಸಿ, ಧರಿಸಿ, ಮನೆ-ಮನೆ ಪ್ರಚಾರ ಕೈಗೊಳ್ಳುವ ಮೂಲಕ ಮೋದಿ ಅವರ ಟೀಕೆಯನ್ನೇ ಪ್ರಚಾರದ ದಾಳವನ್ನಾಗಿ ಬಳಸುತ್ತಿದ್ದಾರೆ. ‘ಸಮಾಜವಾದಿ ಪಕ್ಷದ ಪ್ರತಿಯೊಬ್ಬರೂ ಹಳ್ಳಿ ಹಳ್ಳಿಗಳಿಗೆ, ಮನೆ ಮನೆಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಕೆಂಪು ಟೋಪಿ ಧರಿಸಿಯೇ ಎಲ್ಲರೂ ಪ್ರಚಾರದಲ್ಲಿ ತೊಡಗಿದ್ದೇವೆ. ಇದು ಬದಲಾವಣೆ ಹಾಗೂ ಕ್ರಾಂತಿಯ ಸಂಕೇತವಾಗಿದೆ’ ಎಂದು ಪಕ್ಷದ ವಕ್ತಾರ ಸುನಿಲ್‌ ಸಿಂಗ್‌ ಸಜನ್‌ ತಿಳಿಸಿದ್ದಾರೆ.
ಮೋದಿಗಿಂತಲೂ ದೊಡ್ಡ ಹಿಂದೂ ಆಗಲು ಯೋಗಿ ಮತ್ತು ಅಖಿಲೇಶ್ ನಡುವೆ ಪೈಪೋಟಿ: ಓವೈಸಿ ಟೀಕೆ
ಕಳೆದ ಡಿಸೆಂಬರ್‌ನಲ್ಲಿ ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ಸಂಕೇತವಾಗಿ ಧರಿಸುವ ಕೆಂಪು ಟೋಪಿ ಬಗ್ಗೆ ನರೇಂದ್ರ ಮೋದಿ ಅವರು ಟೀಕಿಸಿದ್ದರು. ‘ಕೆಂಪು ಟೋಪಿ ಧರಿಸಿದವರು ಉತ್ತರ ಪ್ರದೇಶಕ್ಕೆ ರೆಡ್‌ ಅಲರ್ಟ್‌’ ಎಂದಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸಹ ಕೆಂಪು ಟೋಪಿ ಧರಿಸಿದವರು ಗೂಂಡಾಗಳು ಎಂದು ಜರಿದಿದ್ದರು. ಆದರೆ, ಇದೇ ಟೀಕೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, ಟೋಪಿ ಧರಿಸಿಯೇ ಬಿಜೆಪಿಗೆ ಟಾಂಗ್‌ ನೀಡುತ್ತಿದೆ.

ಚುನಾವಣೆ ಉಪಕರಣಗಳನ್ನು ಉತ್ಪಾದಿಸುವ ಶೀಲಾ ಎಂಟರ್‌ಪ್ರೈಸಸ್‌ ಕಂಪನಿಯು ಸಮಾಜವಾದಿ ಪಕ್ಷದ ಟೋಪಿಗಳನ್ನು ತಯಾರಿಸುತ್ತದೆ. ಇದರಲ್ಲಿ ಎರಡು ಗುಣಮಟ್ಟದ ಕ್ಯಾಪ್‌ಗಳು ಸಿಗುತ್ತಿವೆ. ಬ್ರ್ಯಾಂಡೆಡ್‌ ಟೋಪಿಗಳಿಗೆ 100 ಕ್ಯಾಪ್‌ಗಳಿಗೆ 2,500 ರೂ. ದರ ಇದ್ದರೆ, ಅಷ್ಟೇನೂ ಗುಣಮಟ್ಟದಲ್ಲದ ಮತ್ತೊಂದು ದರ್ಜೆಯ 100 ಟೋಪಿಗಳಿಗೆ 150 ರೂ. ಆಗಲಿದೆ. ಆಯಾ ಕ್ಷೇತ್ರಗಳ ನಾಯಕರು ಕಾರ್ಯಕರ್ತರಿಗೆ ಟೋಪಿ ವಿತರಿಸುತ್ತಿದ್ದಾರೆ.



Read more

[wpas_products keywords=”deal of the day sale today offer all”]