Karnataka news paper

ಪಿಸುಮಾತಿನ ವಿಡಿಯೋದಿಂದ ಕಾಂಗ್ರೆಸ್ ನ ಒಳಗುದ್ದಾಟ ರಟ್ಟು : ಈಗಲೇ ಟಿಕೆಟ್‌ ಲಾಬಿಗೆ ಸಿದ್ದರಾಮಯ್ಯ ಸಿಟ್ಟು


ಬೆಂಗಳೂರು : ವಿಧಾನಸಭೆ ಚುನಾವಣೆಗೆ ಇನ್ನೂ 14 ತಿಂಗಳಿರುವ ಹೊತ್ತಿನಲ್ಲೇ ಟಿಕೆಟ್‌ ಹಂಚಿಕೆ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಪೈಪೋಟಿ ಶುರುವಾಗಿರುವ ಲಕ್ಷಣ ಕಾಣುತ್ತಿದೆ. ಶನಿವಾರ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಅಶೋಕ್‌ ಪಟ್ಟಣ ನಡುವೆ ಪಿಸುಮಾತಿನ ವಿಡಿಯೋ ವೈರಲ್‌ ಆಗಿದ್ದು, ಇದಕ್ಕೆ ಪುಷ್ಠಿ ನೀಡುವಂತಿದೆ.

ಪುಲಕೇಶಿನಗರ ಕ್ಷೇತ್ರದ ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಮುಂದಿನ ಚುನಾವಣೆಗೆ ಟಿಕೆಟ್‌ ತಪ್ಪಿಸುವ ಷಡ್ಯಂತ್ರ ನಡೆ-ದಿದ್ದು, ಯಾವುದೇ ಕಾರಣಕ್ಕೂ ಟಿಕೆಟ್‌ ತಪ್ಪಬಾರದು ಎಂದು ಒತ್ತಾಯಿಸಿ ಅಖಂಡ ಶ್ರೀನಿವಾಸ ಮೂರ್ತಿ ಬೆಂಬಲಿಗರು ಸಿದ್ದರಾಮಯ್ಯನವರ ಸರಕಾರಿ ನಿವಾಸದ ಮುಂದೆ ಜಮಾಯಿಸಿದ್ದರು.

ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೆಟ್‌ ತಪ್ಪಿಸುವ ಪ್ರಯತ್ನ ನಡೆದಿರುವುದು ಸರಿಯಲ್ಲ ಎಂದು ನಿಯೋಗ ಮನವಿ ಮಾಡಿತು. ಅದಕ್ಕೆ ಸಿದ್ದರಾಮಯ್ಯ,”ಅಖಂಡ ದೊಡ್ಡ ಅಂತರದಿಂದ ಗೆಲುವು ಸಾಧಿಸಿದವರು. ಅವರಿಗೆ ಟಿಕೆಟ್‌ ಕೈತಪ್ಪುವುದಿಲ್ಲ. ಈ ಬಗ್ಗೆ ಯಾವುದೇ ಆತಂಕ ಬೇಡ,” ಎಂದು ಹೇಳಿ ಕಳುಹಿಸಿದರು.

ಬಿಜೆಪಿ ಸರ್ಕಾರದ ಸಾಧನೆ ಎಂದರೆ ಭ್ರಷ್ಟಾಚಾರ ಮಾತ್ರ! ಸಿದ್ದರಾಮಯ್ಯ ವಾಗ್ದಾಳಿ

ಬಳಿಕ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ಆರಂಭಕ್ಕೂ ಮೊದಲು ಅಶೋಕ್‌ ಪಟ್ಟಣ, ಮಾಜಿ ಮೇಯರ್‌ ಸಂಪತ್‌ರಾಜ್‌ ಪುಲಕೇಶಿನಗರದಲ್ಲಿ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಅನೌಪಚಾರಿಕವಾಗಿ ಹೇಳುತ್ತಾರೆ. ಅದಕ್ಕೆ ಸಿದ್ದರಾಮಯ್ಯ, ‘ಅಯ್ಯೋ ಮಾಡಿದರೆ ಮಾಡಲಿ ಬಿಡಪ್ಪ… ಸಿಟ್ಟಿಂಗ್‌ ಮೆಂಬರ್‌ ಅಲ್ವಾ ಅವನು ಸೋಲುತ್ತಾನೆ ಅಂದಾಗ ತಾನೆ ಟಿಕೆಟ್‌ ತಪ್ಪೋದು’ ಎಂದು ಹೇಳುತ್ತಾರೆ.

ಅದಕ್ಕೆ ಅಶೋಕ್‌ ಪಟ್ಟಣ, ‘ನಾನು ಹೇಳಿದೆ. ಸಿಟ್ಟಿಂಗ್‌ ಎಂಎಲ್‌ಎಗಳನ್ನೆಲ್ಲಾ ಕಂಟಿನ್ಯೂ ಮಾಡ್ತಾರೆ. ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ ಹೋಗಿ ಎಂದರೆ. ಅವರು ಐಸಾ ಕರ್ತಾ ಹೈ, ವೈಸಾ ಕರ್ತಾ ಹೈ ಅಂತಿದ್ದಾರೆ’ ಎಂದು ಉತ್ತರಿಸುತ್ತಾರೆ. ಅದಕ್ಕೆ ಸಿದ್ದರಾಮಯ್ಯ, ”ಎಲ್ಲಾ ಹಾಳು ಮಾಡ್ತಾರೆ ಅಷ್ಟೇ,” ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಅಶೋಕ್‌ ಪಟ್ಟಣ, ಎಲ್ಲ ಕ್ಷೇತ್ರದಲ್ಲೂಹೀಗೆ ಆಗುತ್ತಿದೆ ಎಂದು ದನಿಗೂಡಿಸುತ್ತಾರೆ. ಆಗ ಸಿಟ್ಟಾಗುವ ಸಿದ್ದರಾಮಯ್ಯ, ಸರಿಯಪ್ಪ ಅಲ್ಟಿಮೇಟ್ಲಿ ವಾಟ್‌ ಈಸ್‌ ದಿ ಔಟ್‌ ಕಮ್‌? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಅಶೋಕ್‌ ಪಟ್ಟಣ, ಎಲ್ಲ ನನಗೆ ಸರೆಂಡರ್‌ ಆಗಲಿ ಅಂತ ಹೀಗೆ ಮಾಡ್ತಿದ್ದಾರೆ.

ಎಲ್ಲರೂ ಏನ್‌ ಸರೆಂಡರ್‌ ಆಗೋದು’ ಎಂದು ಬೇಸರದಿಂದ ನುಡಿಯುತ್ತಾರೆ. ಅವರು ಹೇಳುವುದು ಡಿ.ಕೆ.ಶಿವಕುಮಾರ್‌ ಬಗ್ಗೆ ಎನ್ನಲಾಗಿದೆ. ಆಗ ಸಿದ್ದರಾಮಯ್ಯ, ಪ್ರೆಸ್‌ನವರು ಕೇಳ್ತಾರೆ ಬಿಡಪ್ಪ ಎನ್ನುತ್ತಾ ಪಿಸುಮಾತಿಗೆ ಅಂತ್ಯ ಹಾಡುತ್ತಾರೆ. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ. ಇದೀಗ ಇದು ಬಿಜೆಪಿಗೆ ಬ್ರಹ್ಮಾಸ್ತ್ರವಾಗಿದೆ.



Read more

[wpas_products keywords=”deal of the day sale today offer all”]