Karnataka news paper

ಪಿಆರ್ ಆರ್ ಕುರಿತ ಸುಪ್ರೀಂ ತೀರ್ಪಿನ ನಂತರ ಬಿಡಿಎಗೆ ಸುಮಾರು 3000 ಕೋಟಿ ರೂ. ಉಳಿತಾಯ ಸಾಧ್ಯತೆ


The New Indian Express

ಬೆಂಗಳೂರು:  ಪೆರಿಫೆರಲ್ ರಿಂಗ್ ರಸ್ತೆ (ಪಿಆರ್ ಆರ್) ಯೋಜನೆಯ ಭೂಸ್ವಾಧೀನಕ್ಕೆ ಸುಪ್ರೀಂಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ವಿನಾಯಿತಿ ನೀಡಿದ್ದು,  ಬಿಡಿಎ ಒಟ್ಟಾರೆ ಯೋಜನಾ ವೆಚ್ಚ  ಕಡಿತ ಮೂಲಕ ಭೂ ಸ್ವಾಧೀನಕ್ಕೆ ಪಾವತಿಸಬೇಕಾದ ಸುಮಾರು 3,000 ಕೋಟಿ ರೂ. ಉಳಿಸುವ ಸಾಧ್ಯತೆಯಿದೆ.

ಬೆಂಗಳೂರು ನಗರದಲ್ಲಿನ ಸಂಚಾರ ದಟ್ಟಣೆ ತಗ್ಗಿಸಲು 17 ವರ್ಷಗಳ ಹಿಂದೆ ಪ್ರಸ್ತಾಪಿಸಲಾದ ರೂ 21,091-ಕೋಟಿ ಯೋಜನೆಯಲ್ಲಿ ಭೂ ಸ್ವಾಧೀನಕ್ಕಾಗಿ  ರೂ. 15,475 ಕೋಟಿ ಅಗತ್ಯವಿದೆ. ಎಂಟು ಪಥಗಳು ಮತ್ತು ನಾಲ್ಕು ಸರ್ವೀಸ್ ರಸ್ತೆಗಳೊಂದಿಗೆ  73 ಕಿ. ಮೀ ಯೋಜನೆಯು ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಮತ್ತು ಆನೇಕಲ್ ಮೂರು ತಾಲ್ಲೂಕುಗಳಲ್ಲಿ 1810 ಎಕರೆ ಪ್ರದೇಶದಲ್ಲಿ ಬರಲಿದೆ. 

ಇದು ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿನ ನೈಸ್ ಜಂಕ್ಷನ್ ನಿಂದ ಆರಂಭವಾಗುವ ಮೂಲಕ ನಗರವನ್ನು ಸುತ್ತುವರೆಯುವ ಈ ಯೋಜನೆಯು ಹೊಸೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ -44ರ ನೈಸ್ ರಸ್ತೆ ಆರಂಭದ ಸ್ಥಳದಲ್ಲಿ ಇದು ಅಂತ್ಯವಾಗಲಿದೆ. 

ಇದನ್ನೂ ಓದಿ: ಆನ್‌ಲೈನ್ ಪ್ಲಾಟ್ ಮಾರಾಟದಲ್ಲಿ ವಂಚನೆ: ಬಿಡಿಎ ಸಿಬ್ಬಂದಿ, ಮಧ್ಯವರ್ತಿಗಳ ವಿರುದ್ಧ 14 ಎಫ್ ಐಆರ್ ದಾಖಲು

ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರ ಪೀಠವು ಜನವರಿ 20 ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಮತ್ತು ಇತರರ ನಡುವಿನ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ  ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿತು. ಹೈಕೋರ್ಟ್ ನಿರ್ದೇಶನ ಯೋಜನೆಯ ಬಜೆಟ್ ಲೆಕ್ಕಾಚಾರವನ್ನು ಸಂಪೂರ್ಣವಾಗಿ ಅಸಮಾಧಾನಗೊಳಿಸಿದೆ ಎಂದು ಬಿಡಿಎ ತನ್ನ ಅರ್ಜಿಯಲ್ಲಿ ಹೇಳಿದೆ.

ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಬೇಕಾದ ಭೂಮಿಗೆ 2007ರಲ್ಲಿಯೇ ಅಧಿಸೂಚನೆ ಮಾಡಲಾಗಿದೆ ಎಂದು ಬಿಡಿಎ ಉನ್ನತ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 2013ರಲ್ಲಿ ಈ ಕಾಯ್ದೆ ಅಸ್ತಿತ್ವಕ್ಕೆ ಬಂದಿದ್ದು, ಸುಪ್ರೀಂಕೋರ್ಟ್ ತೀರ್ಪಿನಿಂದ  ಯೋಜನಾ ವೆಚ್ಚ ತಗ್ಗಲಿದೆ. ಇದು ನಮಗೆ ದೊಡ್ಡ ಸಮಾಧಾನ ತಂದಿದೆ ಎಂದು ಅವರು ಹೇಳಿದರು. 

ಭೂಸ್ವಾಧೀನಪಡಿಸಿಕೊಂಡವರ ಬೇಡಿಕೆಯಂತೆ 15,000 ಕೋಟಿ ರೂ. ಭೂ ಸ್ವಾಧೀನಕ್ಕೆ ಅಗತ್ಯವಿದ್ದರೆ. 
ಸುಮಾರು 3,000 ಕೋಟಿ ರೂಪಾಯಿಗಳನ್ನು ಉಳಿಸಲು ನೆರವಾಗುತ್ತದೆ ಎಂದರು.

ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಆಧಾರದ ಮೇಲೆ ಯೋಜನೆಯನ್ನು ಕಾರ್ಯಗತಗೊಳಿಸಲು ಬಿಡಿಎ ಯೋಜಿಸಿದೆ. ಯೋಜನೆ ಅನುಷ್ಠಾನಕ್ಕೆ  ಮುಂದಾಗುವ ಮುನ್ನ ಈ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕಿದೆ ಎಂದು ಅವರು ತಿಳಿಸಿದರು.



Read more

[wpas_products keywords=”deal of the day”]