Karnataka news paper

ಪ್ರೇಕ್ಷಕರ ಮನಗೆದ್ದ ‘ಅಮೃತ ವರ್ಷಿಣಿ’ಗೆ 25 ವರ್ಷ, ಸಂತಸ ಹಂಚಿಕೊಂಡ ರಮೇಶ್ ಅರವಿಂದ್


Online Desk

ಬೆಂಗಳೂರು: ಹಾಡು, ಅದ್ಭುತ ನಟನೆಯ ಮೂಲಕ ಪ್ರೇಕ್ಷಕರ ಮನಗೆದ್ದ ನಟ ರಮೇಶ್ ಅರವಿಂದ್ ಹಾಗೂ ಸುಹಾಸಿನಿ ಅಭಿನಯದ ಅಮೃತ ವರ್ಷಿಣಿ ಸಿನಿಮಾಗೆ ಇಂದಿಗೆ 25 ವರ್ಷ. ಈ ಸಂತಸವನ್ನು ರಮೇಶ್ ಅರವಿಂದ್ ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ಓದಿ: ಪ್ರಜ್ವಲ್ ದೇವರಾಜ್- ರಚಿತಾ ರಾಮ್ ಜೋಡಿಯ ‘ವೀರಂ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಅಮೃತ ವರ್ಷಿಣಿಗೆ ಇಂದು 25 ವರ್ಷ! ಜಯಶ್ರೀ ದೇವಿ, ದಿನೇಶ್ ಬಾಬು, ಸುಹಾಸಿನಿ, ಶರತ್ ಬಾಬು, ನಿವೇದಿತಾ, ದೇವಾ, ಕಲ್ಯಾಣ್, ಚಿತ್ರ ಮತ್ತು ನನ್ನ ಪ್ರೀತಿಯ ಎಸ್ ಪಿ ಬಾಲಸುಬ್ರಮಣ್ಯ ಸರ್ ಅವರಿಗೆ ನಾನು ಋಣಿ. ಇಷ್ಟು ವರ್ಷಗಳ ಕಾಲ ಪ್ರಿತಿ ತೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿ ಕಪ್ಪು ಬಿಳುಪು ಫೋಟೋ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಈ ಸಿನಿಮಾದ ಪ್ರತಿಯೊಂದು ಹಾಡುಗಳು ಜನರ ಮನಸೂರೆಗೊಳಿಸಿದೆ. ೧೯೯೭ರಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ದಿನೇಶ್ ಬಾಬು ಆಕ್ಷನ್ ಕಟ್ ಹೇಳಿದ್ದಾರೆ. ಶರತ್ ಬಾಬು, ನಿವೇದಿತಾ ಜೈನ್, ಸುಹಾಸಿನಿ, ರಮೇಶ್ ಅರವಿಂದ್ ಅವರ ನಡುವೆ ಸುತ್ತುವ ಸಿನಿಮಾವು ಎಲ್ಲ ನಟರ ಸಹಜ ಅಭಿನಯದ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು.





Read more…

[wpas_products keywords=”party wear dress for women stylish indian”]