ಬೆಂಗಳೂರು: ಆಹಾರ ಕರ್ನಾಟಕ ನಿಯಮಿತವು ಬಾಗಲಕೋಟೆ, ಹಿರಿಯೂರು, ಮಾಲೂರು ಮತ್ತು ಜೇವರ್ಗಿಯಲ್ಲಿ ಸ್ಥಾಪಿಸಿರುವ ಆಹಾರ ಪಾರ್ಕ್‌ಗಳನ್ನು ಯಶಸ್ವಿಗೊಳಿಸುವುದಕ್ಕಾಗಿ ‘ಪರಿಣಾಮ ಮೌಲ್ಯಮಾಪನ’ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಶನಿವಾರ ಆಹಾರ ಕರ್ನಾಟಕ ನಿಯಮಿತದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ನಾಲ್ಕು ಆಹಾರ ಪಾರ್ಕ್‌ಗಳು ರಾಜ್ಯ ಸರ್ಕಾರದ ಪ್ರಾಯೋಜನೆಯಲ್ಲಿ ಆರಂಭವಾಗಿವೆ. ಅವುಗಳು ಪೂರ್ಣವಾಗಿ ಯಶಸ್ವಿಯಾಗಬೇಕು. ಅದಕ್ಕೆ ಪೂರಕವಾಗಿ ಜಮೀನು, ಬಂಡವಾಳ ಮತ್ತು ಮೂಲಸೌಕರ್ಯದ ಕುರಿತು ಪರಿಶೀಲನೆ ನಡೆಸಬೇಕು. ಪರಿಣಾಮ ಮೌಲ್ಯಮಾಪನ ನಡೆಸಿ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.
ಹೊಸದಾಗಿ ಆಹಾರ ಪಾರ್ಕ್‌ಗಳನ್ನು ಆರಂಭಿಸಲು ₹ 26 ಕೋಟಿ ಅನುದಾನ ನೀಡುವಂತೆ ಸಂಸ್ಥೆಯ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದರು. ಹಣಕಾಸು ಇಲಾಖೆಯ ಪರಿಶೀಲನೆ ಬಳಿಕ ತೀರ್ಮಾನಕ್ಕೆ ಬರುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಕೃಷಿ ಸಚಿವ ಬಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತು ಆಹಾರ ಕರ್ನಾಟಕ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಡಾ.ಐ.ಎಸ್. ಪ್ರಸಾದ್ ಉಪಸ್ಥಿತರಿದ್ದರು.
Read more from source
[wpas_products keywords=”deal of the day sale today kitchen”]