ಲಾಹೋರ್‌ನ ಕಹ್ನಾ ಪ್ರದೇಶದಲ್ಲಿ 45 ವರ್ಷದ ಆರೋಗ್ಯ ಕಾರ್ಯಕರ್ತೆ ನಹೀದ್ ಮುಬಾರಕ್, ಅವರ 22 ವರ್ಷದ ಮಗ ತೈಮೂರ್ ಮತ್ತು 17 ಮತ್ತು 11 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ಶವವಾಗಿ ಪತ್ತೆಯಾಗಿದ್ದರು. ನಹೀದ್ ಅವರ 14 ವರ್ಷದ ಪುತ್ರ ಮಾತ್ರ ಬದುಕಿದ್ದ. ಘಟನೆ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಆತನೇ ಕೊಲೆಗಾರ ಎನ್ನುವುದು ಖಚಿತಪಟ್ಟಿದೆ.
1 ಕೋಟಿಗೂ ಹೆಚ್ಚು ಡೌನ್‌ಲೋಡ್ ಆಯ್ತು ‘PUBG ನ್ಯೂ ಸ್ಟೇಟ್’!
‘ಪಬ್‌ಜಿ’ ವ್ಯಸನಿಯಾಗಿದ್ದ ಬಾಲಕನನ್ನು ಅನೇಕ ಬಾರಿ ತಾಯಿ ಬೈಯ್ದಿದ್ದರು. ಆದರೂ ಗೇಮ್ ಹುಚ್ಚು ಮಾತ್ರ ಕಡಿಮೆಯಾಗಿರಲಿಲ್ಲ. ಗೇಮ್ ಆಡಲು ವಿರೋಧಿಸುವ ತಾಯಿ ಮೇಲೆ ಆತ ಸಿಟ್ಟನ್ನೂ ಬೆಳೆಸಿಕೊಂಡಿದ್ದ. ಕಳೆದ ವಾರ ಆಟದಲ್ಲಿ ಬರುವ ‘ಚಾಲೆಂಜ್’ ಸ್ವೀಕರಿಸಿ ತನ್ನ ತಾಯಿ ಮತ್ತು ಸಹೋದರ, ಸಹೋದರಿಯರನ್ನು ಹತ್ಯೆ ಮಾಡಿದ್ದಾನೆ. ಈ ವಿಷಯವನ್ನು ವಿಚಾರಣೆ ವೇಳೆ ಬಾಲಕನೇ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮೊದಲು ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಬಳಿಕ ನಿದ್ರೆಯಲ್ಲಿದ್ದ ಸಹೋದರ, ಸಹೋದರಿಯರನ್ನು ಕೊಲೆ ಮಾಡಿದ್ದಾನೆ.
ಕೃತ್ಯದ ಬಳಿಕ ಬಂದೂಕನ್ನು ಮನೆಯ ಬಳಿಯ ಚರಂಡಿಗೆ ಎಸೆದಿದ್ದ ಬಾಲಕ, ಮತ್ತೆ ಎಂದಿನಂತೆ ‘ಪಬ್‌ಜಿ’ ಆಟದಲ್ಲಿ ಮುಳುಗಿದ್ದ. ಈ ಮನೆಯಲ್ಲಿ ಬಾಲಕನ ಹೊರತು ಬೇರೆ ಯಾರೂ ಕಾಣಿಸದೆ ಇದ್ದಾಗ, ಸಂಶಯಗೊಂಡ ಅಕ್ಕಪಕ್ಕದ ಮನೆಯವರು ಮರುದಿನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ ಮನೆಯಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದವು. ಆದರೆ ಬಾಲಕ ಈ ಘಟನೆಯ ಬಗ್ಗೆ ತನಗೇನೂ ತಿಳಿದೇ ಇಲ್ಲ ಎಂದು ಅಮಾಯಕನಂತೆ ವರ್ತಿಸಿದ್ದ.
”ನಾನು ಮನೆಯ ಮೇಲಿನ ಮಹಡಿಯಲ್ಲಿದ್ದೆ. ಕುಟುಂಬದವರನ್ನು ಯಾರು ಕೊಂದಿದ್ದಾರೆಂದು ನನಗೆ ಗೊತ್ತಿಲ್ಲ,” ಎಂದು ಹೇಳಿದ್ದ. ಬಾಲಕನ ಅನುಮಾನಾಸ್ಪದ ವರ್ತನೆ ನೋಡಿ ವಿಚಾರಣೆ ತೀವ್ರಗೊಳಿಸಿದ ಬಳಿಕ ತಾನೇ ಗುಂಡು ಹಾರಿಸಿ ಕೊಂದಿರುವುದಾಗಿ ತಿಳಿಸಿದ್ದಾನೆ. ದಿನದ ಬಹುತೇಕ ಸಮಯ ಪಬ್‌ಜಿ ಆಡುತ್ತಿದ್ದ ಬಾಲಕನ ಮಾನಸಿಕ ಸ್ಥಿಮಿತವೂ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿಯಿಂದ ವಿಚ್ಛೇದನ ಪಡೆದು ಮಕ್ಕಳೊಂದಿಗೆ ವಾಸವಿದ್ದ ನಹೀದ್ ಕುಟುಂಬದ ರಕ್ಷಣೆಗಾಗಿ ಪರವಾನಗಿ ಪಡೆದು ಪಿಸ್ತೂಲ್ ಖರೀದಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಲಾಹೋರ್‌ನಲ್ಲಿ ಆನ್‌ಲೈನ್ ಗೇಮಿಗೆ ಸಂಬಂಧಿಸಿದ ನಾಲ್ಕನೇ ಅಪರಾಧ ಇದಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
Read more
[wpas_products keywords=”deal of the day sale today offer all”]