ರಾಜ್ಯದಲ್ಲಿ ದಾಖಲಾದ ಹೊಸ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಎರಡು ಪಟ್ಟು ಇರುವುದು ಸಂತಸದ ಸುದ್ದಿಯಾಗಿದೆ. ಕಳೆದ 24 ಗಂಟೆಯಲ್ಲಿ 69,902 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದ ಒಟ್ಟು 37,57,031 ಮಂದಿ ಸೋಂಕಿತರಲ್ಲಿ 34,65,995 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,52,132ಕ್ಕೆ ಇಳಿಕೆಯಾಗಿದೆ. ಶನಿವಾರ 70 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಮರಣ ಸಂಖ್ಯೆ 38,874ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
ರಾಜ್ಯದಲ್ಲಿ ಒಟ್ಟು 1,72,062 ಕೋವಿಡ್ ಪರೀಕ್ಷೆಗಳನ್ನು ಶನಿವಾರ ನಡೆಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಶನಿವಾರ 16,586 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 13 ಮಂದಿ ಮೃತಪಟ್ಟಿದ್ದಾರೆ. 46,050 ಮಂದಿ ಸೋಂಕಿತರು ಡಿಸ್ಚಾರ್ಜ್ ಆಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳು 1,30,701 ಇದೆ.
ಇತರೆ ಜಿಲ್ಲೆಗಳಲ್ಲಿ ಕೋವಿಡ್ ಸೋಂಕು
ಮೈಸೂರು 2,431, ಧಾರವಾಡ 1,278, ತುಮಕೂರು 1,192, ಹಾಸನ 1039 ಪ್ರಕರಣಗಳೊಂದಿಗೆ ಸಾವಿರಕ್ಕೂ ಅಧಿಕ ಕೇಸ್‌ಗಳನ್ನು ಕಂಡ ಜಿಲ್ಲೆಗಳಾಗಿವೆ. ಮಂಡ್ಯ 986, ಬೆಳಗಾವಿ 798, ಬಾಗಲಕೋಟೆ 394, ಬೆಂಗಳೂರು ಗ್ರಾಮಾಂತರ 367, ಬೀದರ್ 209, ಚಾಮರಾಜ ನಗರ 573, ಚಿಕ್ಕಬಳ್ಳಾಪುರ 307, ಚಿಕ್ಕಮಗಳೂರು 292, ಚಿತ್ರದುರ್ಗ 309, ದಕ್ಷಿಣ ಕನ್ನಡ 627, ದಾವಣಗೆರೆ 216, ಗದಗ 171, ಹಾವೇರಿ 460, ಕಲಬುರಗಿ 577 ಕೊಡಗು 540, ಕೋಲಾರ 567, ಕೊಪ್ಪಳ 269, ರಾಯಚೂರು 137, ರಾಮನಗರ 237, ಶಿವಮೊಗ್ಗ 674, ಉಡುಪಿ 579, ಉತ್ತರ ಕನ್ನಡ 665, ವಿಜಯಪುರ 139 ಹಾಗೂ ಯಾದಗಿರಿಯಲ್ಲಿ 116 ಪ್ರಕರಣಗಳು ಶನಿವಾರ ದೃಢಪಟ್ಟಿವೆ.
ರಾಜ್ಯದಲ್ಲಿ ನೈಟ್ ಕರ್ಫ್ಯೂ ರದ್ದು
ಜನವರಿ 31 ರಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂವನ್ನು ರದ್ದುಗೊಳಿಸಲಾಗಿದ್ದು, 50-50 ರೂಲ್ಸ್ ರದ್ದು ಮಾಡಲಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ 100 ಶೇ ಸೀಟಿಂಗ್‌ಗೆ ಅವಕಾಶ ನೀಡಲಾಗಿದೆ. ಪಬ್, ರೆಸ್ಟೋರೆಂಟ್, ಹೋಟೆಲ್ ನಲ್ಲಿ 100 ಶೇ ಗ್ರಾಹಕರಿಗೆ ಅನುಮತಿ ನೀಡಲಾಗಿದೆ. ಸಿನಿಮಾ, ಮಲ್ಟಿಫ್ಲಕ್ಸ್ ಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಡಲಾಗಿದೆ.
ಮದುವೆ (ಹೊರಾಂಗಣ) 300 ಜನರಿಗೆ, ಮದುವೆ (ಒಳಾಂಗಣ) 200 ಮಂದಿಗೆ ಅವಕಾಶ ನೀಡಲಾಗಿದೆ. ಸರ್ಕಾರಿ ಕಚೇರಿಗಳು 100 ಶೇ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಣೆ ಮಾಡಬಹುದು. ಆದರೆ ಜಾತ್ರೆ, ಪ್ರತಿಭಟನೆ, ಸಾಮಾಜಿಕ ಕಾರ್ಯಕ್ರಮ, ಧಾರ್ಮಿಕ ಸಮಾವೇಶಕ್ಕೆ ನಿರ್ಬಂಧ ಮುಂದುವರಿಯಲಿದೆ. ಸ್ವಿಮ್ಮಿಂಗ್ ಪೂಲ್, ಜಿಮ್ ಗಳಲ್ಲಿ ಶೇ 50ರಷ್ಟು ಅವಕಾಶ ನೀಡಲಾಗಿದೆ.
Read more
[wpas_products keywords=”deal of the day sale today offer all”]