ಉಗರಗೋಳ (ಬೆಳಗಾವಿ ಜಿಲ್ಲೆ): ‘ಸವದತ್ತಿಯ ಯಲ್ಲಮ್ಮ ದೇವಸ್ಥಾನ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಭಕ್ತರು ಕಿವಿಕೊಡಬಾರದು’ ಎಂದು ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ತಿಳಿಸಿದ್ದಾರೆ.
ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಮಾತನಾಡಿದ ಅವರು, ‘ಕೋವಿಡ್-19 ಹರಡುವಿಕೆ ನಿಯಂತ್ರಣ ಸಲುವಾಗಿ ಜ.6ರಿಂದ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಆದರೆ, ಈ ನಿರ್ಬಂಧ ತೆಗೆದು ಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರುತ್ತಿದೆ ಎಂದು ಭಕ್ತರು ತಿಳಿಸುತ್ತಿದ್ದಾರೆ, ವಿಚಾರಿಸುತ್ತಿದ್ದಾರೆ’ ಎಂದರು.
‘ವದಂತಿ ನಂಬಿ ಭಕ್ತರು ಗುಡ್ಡಕ್ಕೆ ಬಂದು ತೊಂದರೆ ಅನುಭವಿಸಬಾರದು. ಭಕ್ತರಿಗೆ ದರ್ಶನ ಮುಕ್ತವಾದಾಗ ಅಧಿಕೃತವಾಗಿ ಪ್ರಕಟಣೆ ಕೊಡಲಾಗುವುದು’ ಎಂದು ಸ್ಪಷ್ಟಪಡಿಸಿದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವೈ.ವೈ. ಕಾಳಪ್ಪನವರ, ಯಲ್ಲಪ್ಪ ಕಬ್ಬೇರ, ಪ್ರಕಾಶ ಪ್ರಭುನವರ, ಅಲ್ಲಮಪ್ರಭು ಪ್ರಭುನವರ, ಅರ್ಚಕ ನಿಂಗನಗೌಡ ಸಾವಕ್ಕನವರ ಇದ್ದರು.
Read more from source
[wpas_products keywords=”deal of the day sale today kitchen”]