The New Indian Express
ನವದೆಹಲಿ: ಪೆಗಾಸಸ್ ಸಾಫ್ಟ್ ವೇರ್ ಹಗರಣಕ್ಕೆ ಸಂಬಂಧಿಸಿದ ತನಿಖೆಯನ್ನು ಸುಪ್ರೀಂ ಕೋರ್ಟ್ ನ ಸಮಿತಿ ನಡೆಸುತ್ತಿದ್ದು, ವರದಿ ನಿರೀಕ್ಷಣೆಯಲ್ಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ಅವರ ನೇತೃತ್ವದ ತನಿಖಾ ಸಮಿತಿ, ಯಾರು ತಮ್ಮ ಫೋನ್ ಗಳು ಪೆಗಾಸಸ್ ಗೆ ತುತ್ತಾಗಿದೆ ಎಂದು ಹೇಳುತ್ತಿದ್ದಾರೋ ಅವರು ಫೋನ್ ಗಳನ್ನು ತನಿಖಾ ಸಮಿತಿ ಎದುರು ಒಪ್ಪಿಸಬೇಕೆಂದು ಜ.2 ರಂದು ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟಿಸಿತ್ತು.
ಪೆಗಾಸಸ್ ಗೆ ಸಂಬಂಧಿಸಿದ ವಿಷಯ ಸುಪ್ರೀಂ ಕೋರ್ಟ್ ನಲ್ಲಿದೆ. ಈ ವಿಷಯವಾಗಿ ವರದಿಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Pegasus row: 2017ರ ಭಾರತ-ಇಸ್ರೇಲ್ ನಡುವಣ ರಕ್ಷಣಾ ಒಪ್ಪಂದದ ಕೇಂದ್ರಬಿಂದು ಪೆಗಾಸಸ್ ಸ್ಪೈವೇರ್; ನ್ಯೂಯಾರ್ಕ್ ಟೈಮ್ಸ್ ವರದಿ
ದಿ ನ್ಯೂ ಯಾರ್ಕ್ ಟೈಮ್ಸ್ ನ ವರದಿಯ ಪ್ರಕಾರ, 2017 ರಲ್ಲಿ ಭಾರತ-ಇಸ್ರೇಲ್ ನಡುವೆ ನಡೆದ, ಅತ್ಯಾಧುನಿಕ ಶಸ್ತ್ರಾಸ್ತ್ರ, ಗುಪ್ತಚರಕ್ಕೆ ಸಂಬಂಧಿಸಿದ 2 ಬಿಲಿಯನ್ ಡಾಲರ್ ನಡುವಿನ ಒಪ್ಪಂದದ ಕೇಂದ್ರಬಿಂದುವಾಗಿ ಪೆಗಾಸಸ್ ಇತ್ತು
ನ್ಯೂಯಾರ್ಕ್ ವರದಿಯನ್ನಾಧರಿಸಿ ವಿಪಕ್ಷ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಸರ್ಕಾರ ಇಸ್ರೇಲ್ ನಿಂದ ಪೆಗಾಸಸ್ ಸಾಫ್ಟ್ ವೇರ್ ಖರೀದಿಸಿ ತನಗೆ ಬೇಕಾದವರ ಮೊಬೈಲ್ ಗಳು ಆ ಬೇಹುಗಾರಿಕೆ ಸಾಫ್ಟ್ ವೇರ್ ಗೆ ತುತ್ತಾಗುವಂತೆ ಮಾಡಿ ಬೇಹುಗಾರಿಕೆ ನಡೆಸುತ್ತಿದೆ ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧ ಎಂದು ಆರೋಪ ಮಾಡಿತ್ತು.
Read more
[wpas_products keywords=”deal of the day”]