Karnataka news paper

ಕಾಂಗ್ರೆಸ್ ಪಕ್ಷ ಕಿರಿಕ್ ಪಾರ್ಟಿ ಇದ್ದಂಗೆ, ಅಲ್ಲಿರುವವರು ಕಿರಿಕ್ ನಾಯಕರು: ಸಚಿವ ಶ್ರೀರಾಮಲು ಲೇವಡಿ


ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಒಂದು ಕಿರಿಕ್ ಪಾರ್ಟಿ ಇದ್ದಂಗೆ. ಕಾಂಗ್ರೆಸ್‌ನಲ್ಲಿ ಕಿರಿಕ್ ನಾಯಕರೇ ಇದ್ದಾರೆ. ಬರೀ ಸುಳ್ಳು ಹೇಳುವದರಲ್ಲೇ ಕಾಂಗ್ರೆಸ್ ಪಕ್ಷ ಕಾಲಹರಣ ಮಾಡುತ್ತಿದೆ. ಇದರಿಂದಾಗಿಯೇ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಾ ಸಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದರು.

ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡದ ಆರೋಪ; ಕಿಮ್ಸ್‌ ವೈದ್ಯರ ಜತೆ ರೋಗಿ ಸಂಬಂಧಿಕರ ಜಟಾಪಟಿ

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೀತಮ್‌ ಗೌಡ ಕಾಂಗ್ರೆಸ್ ಪಕ್ಷ ಸೇರಲು ಅಪ್ಲಿಕೇಷನ್ ಹಾಕಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, 10-20 ಜನ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಅಂತ ಹೇಳುತ್ತಿದ್ದಾರೆ. ಇದರ ಮೇಲೆ ಗೊತ್ತಾಗುತ್ತೆ ಕಾಂಗ್ರೆಸ್‌ನವರು ಎಷ್ಟು ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ಸೋಲಿನ ಹತಾಶೆಯಿಂದ ಈ ರೀತಿ ಹೇಳ್ತಿದ್ದಾರೆ. ಪ್ರೀತಮ್‌ ಗೌಡ ವಿಚಾರದಲ್ಲಿಯೂ ಕಾಂಗ್ರೆಸ್ ನಾಯಕರು ಸುಳ್ಳನ್ನೇ ಹೇಳಿದ್ದಾರೆ. ಇಲ್ಲಿ ಅಷ್ಟೇ ಅಲ್ಲದೆ, ಗೋವಾದಲ್ಲಿ ಹೋಗಿ ಸುಳ್ಳು ಹೇಳ್ತಿದ್ದಾರೆ. ಕಾಂಗ್ರೆಸ್‌ನವರು ಯಾವುದೇ ಸುದ್ದಿಯಲ್ಲಿಲ್ಲ, ಹಾಗಾಗಿ ಟಿಆರ್ಪಿಗಾಗಿ ಮಾದ್ಯಮದಲ್ಲಿ ಕಾಣಿಸಿಕೊಳ್ಳಲು ಈ ರೀತಿ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇದೇ ವೇಳೆ ಸಿಎಂ ಇಬ್ರಾಹಿಂ ಕಾಂಗ್ರೆಸ್ ತೊರೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಹಿರಿಯ ನಾಯಕರು. ವಿರೋದ ಪಕ್ಷದ ನಾಯಕ ಸೇರಿದಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆಗುವಂತಹ ಸಾಮರ್ಥ್ಯ ಹೊಂದಿದ್ದ ನಾಯಕ. ಆದರೆ ಅವರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನ ಸಿದ್ದರಾಮಯ್ಯ ಮಾಡಿದ್ದಾರೆ. ಅವರ ಮತಗಳನ್ನು ಪಡೆದು ಅವರಿಗೆ ಮೋಸ ಮಾಡಿದರು. ರಾಜ್ಯದಲ್ಲಿ ಶೇಕಡಾ 18 ರಷ್ಟು ಮುಸ್ಲಿಂ ಸಮುದಾಯದ ಜನ ಇದ್ದಾರೆ. ಆದರೆ ಅವರಿಗೆ ಯಾವುದೇ ಸ್ಥಾನಮಾನವನ್ನು ಕಾಂಗ್ರೆಸ್ ನೀಡಲಿಲ್ಲ ಎಂದರು.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಹುಬ್ಬಳ್ಳಿ ಎಪಿಎಂಸಿ ಪೈಪೋಟಿ, ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆವಕ

ಸಿದ್ದರಾಮಯ್ಯ ತಾವೊಬ್ಬರೇ ಅಹಿಂದ ನಾಯಕ ಅಂತ ಹೇಳಿಕೊಂಡು ಓಡಾಡ್ತಾರೆ. ಆದರೆ ಈಗ ಸಿಎಂ ಇಬ್ರಾಹಿಂ ಅವರ ಪ್ರಶ್ನೆಗೆ ಉತ್ತರ ಕೊಡಲಿ. ಮಾಜಿ ಸಿಎಂ ಸಿದ್ದರಾಮಯ್ಯಗೆ 5 ಕಡೆಯಿಂದ ಕ್ಷೇತ್ರದ ಜನರು ಕರೆಯುತ್ತಿದ್ದಾರಂತೆ. ಅವರಿಗೆ 224 ಕಡೆಯೂ ಕರೆಯುತ್ತಿರಬಹುದು. ಅವರು ಎಲ್ಲಿ ಬೇಕಾದರೂ ಹೋಗಿ ಚುನಾವಣೆಯಲ್ಲಿ ಸ್ಪರ್ಧಿಸಲಿ. ಅವರಿಗೆ ಎಲ್ಲಿಯೂ ನೆಲೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದರು.



Read more

[wpas_products keywords=”deal of the day sale today offer all”]