Online Desk
ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಸಚಿವ ಉಮೇಶ್ ಕತ್ತಿ ನೇತೃತ್ವದ ನಿಯೋಗದ ಜೊತೆ ಸಿಎಂ ಬೊಮ್ಮಾಯಿ ಸಭೆ ನಡೆಸಿದ್ದಾರೆ.
ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಸಭೆ ನಡೆಸಲಾಗಿದ್ದು, ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ನಲ್ಲಿ ಅನುದಾನ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಈ ಸಭೆಯಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ನಾಯಕರಾದ ಮಹಾಂತೇಶ್ ಕವಟಗಿಮಠ, ಮಹದೇವಪ್ಪ ಯಾದವಾಡ, ಅಭಯ್ ಪಾಟೀಲ್, ಅನಿಲ್ ಬೆನಕೆ ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಜಾರಕಿಹೊಳಿ ಸೋದರರು ಮತ್ತು ತಂಡ ಈ ಸಭೆಯಿಂದ ದೂರ ಉಳಿದಿದೆ. ಬೆಳಗಾವಿಯ ಬಿಜೆಪಿ ಶಾಸಕರ ನಡೆ ಭಾರಿ ಕುತೂಹಲ ಮೂಡಿಸಿದ್ದು, ಇತ್ತೀಚೆಗೆ ಜಾರಕಿಹೊಳಿ ಬ್ರದರ್ಸ್ ದೂರವಿಟ್ಟು ಸಭೆ ನಡೆಸಿದ್ದ ಕತ್ತಿ, ಇಂದು ಜಾರಕಿಹೊಳಿ ಬ್ರದರ್ಸ್ ದೂರವಿಟ್ಟು ಬೊಮ್ಮಾಯಿ ಭೇಟಿ ಮಾಡಿದ್ದಾರೆ.
Read more
[wpas_products keywords=”deal of the day”]