The New Indian Express
ರಾಂಚಿ: ದೇಶಾದ್ಯಂತ ಚಳಿಯ ವಾತಾವರಣ ಜನರನ್ನು ಹೈರಾಣು ಮಾಡುತ್ತಿದೆ. ಉಳ್ಳವರು ಸ್ವೆಟರ್ ಗಳು, ಬೆಚ್ಚಗಿನ ದಿರಿಸು, ಗ್ಲವಸು ಎಲ್ಲವನ್ನೂ ತೊಟ್ಟು ಬೆಚ್ಚಗಿರುತ್ತಾರೆ. ಆದರೆ ನಿರ್ಗತಿಕರಿಗೆ ಆ ಸವಲತ್ತು ಇರುವುದಿಲ್ಲ. ಇದನ್ನು ಮನಗಂಡ ಜಾರ್ಖಂಡ್ ರಾಜ್ಯದ ಧನ್ ಬಾದ್ ನಗರದ ಯುವಕರು ವಿನೂತನ ಐಡಿಯಾ ಮಾಡಿದ್ದಾರೆ.
ಇದನ್ನೂ ಓದಿ: ಸೈಕಲ್ ಪೆಡಲ್ ನಿಂದ ಓಡುವ ನೀರಿನ ಪಂಪ್ ನಿಂದ 2.5 ಎಕರೆ ಭೂಮಿಗೆ ನೀರು: ಜಾರ್ಖಂಡ್ ರೈತನ ಆವಿಷ್ಕಾರ
ಧನ್ ಬಾದ್ ನಗರದ ಯುವಕರು ‘ನೇಕಿ ಕಿ ದೀವಾರ್’ ಎನ್ನುವ ಪರಿಕಲ್ಪನೆಯಡಿ ಗೋಡೆ ಮೇಲೆ ಸ್ವೆಟರ್ ಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ನೇಕಿ ಕಿ ದೀವಾರ್ ಎಂದರೆ ‘ಒಳ್ಳೆಯತನದ ಗೋಡೆ’ ಎಂದರ್ಥ. ಈ ಗೋಡೆಯ ಮೇಲೆ ಸಾರ್ವಜನಿಕರು ತಮ್ಮ ಬಳಿ ಇರುವ ಹೆಚ್ಚುವರಿ ಸ್ವೆಟರ್ ಗಳು, ಮಫ್ಲರ್ ಗಳು, ಬಟ್ಟೆಗಳನ್ನು ನೇತು ಹಾಕಬಹುದು. ಅದರ ಅಗತ್ಯ ಇರುವ ಯಾರು ಬೇಕಾದರೂ ಗೋಡೆ ಮೇಲಿಂದ ಬಟ್ಟೆಗಳನ್ನು ತೆಗೆದು ಬಳಸಬಹುದು.
ಇದನ್ನೂ ಓದಿ: ಟೀಚರ್ ಆಗಿ ಬದಲಾದ ನಿವೃತ್ತ ವಾಯುಪಡೆ ಅಧಿಕಾರಿ: 26 ವರ್ಷಗಳಿಂದ 1500 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ಈ ಪರಿಕಲ್ಪನೆಯ ಒಂದೇ ಷರತ್ತು ಎಂದರೆ ಸಾರ್ವಜನಿಕರು ಈ ಗೋಡೆ ಮೇಲೆ ಬಳಸಲು ಯೋಗ್ಯವಾದ ಸ್ವೆಟರ್ ಗಳು, ಬಟ್ಟೆಗಳನ್ನು ನೇತು ಹಾಕಬೇಕು ಎನ್ನುವುದು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಈ ಪರಿಕಲ್ಪನೆ ರೂಪಿಸಿದ ಯುವಕರು.
ಇದನ್ನೂ ಓದಿ: ಅತ್ಯಂತ ವೇಗವಾಗಿ ಮೌಂಟ್ ಎವರೆಸ್ಟ್ ಏರಿದ ಏಕಾಂಗಿ: ಭಾರತೀಯನ ದಾಖಲೆ
Read more
[wpas_products keywords=”deal of the day”]