ತೆಲುಗಿನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(rgv) ನಿರ್ದೇಶನದ ’ಕೊಂಡಾ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.
ಭೂ ಮಾಲೀಕರ ವಿರುದ್ಧ ತಿರುಗಿ ಬಿದ್ದು, ನಕ್ಸಲ್ ಚಳವಳಿಯಲ್ಲಿ ತೊಡಗಿಕೊಂಡಿದ್ದ ಕೊಂಡಾ ಮುರಳಿ, ಕೊಂಡಾ ಸುರೇಖಾ ಜೀವನ ಆಧರಿಸಿದ ಸಿನಿಮಾ ಇದಾಗಿದೆ. ಸದ್ಯ ಇವರು ರಾಜಕೀಯದಲ್ಲಿ ಇದ್ದಾರೆ.
ಟ್ರೈಲರ್ ಬಿಡುಗಡೆಯಾಗಿದ್ದು ವರ್ಮಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಯುಟ್ಯೂಬ್‌ನಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕೊಂಡಾ ಮುರಳಿ ಹಾಗೂ ಕೊಂಡಾ ಸುರೇಖಾ ಭಾಗವಹಿಸಿದ್ದರು. ಇದೇ ಸಮಾರಂಭದಲ್ಲಿ ವರ್ಮಾ ಕೂಡ ಹಾಜರಿದ್ಧರು. ಸಿನಿಮಾದ ಶೂಟಿಂಗ್ ವಾರಂಗಲ್ ಪ್ರಾಂತ್ಯದಲ್ಲಿ ನಡೆದಿದೆ.
ನನ್ನ ಮೇಲೆ ಪೊಲೀಸರು ಹಾಗೂ ವಿರೋಧ ಬಣದವರು ನಡೆಸಿದ ವಿವಿಧ ದಾಳಿಗಳಲ್ಲಿ 47 ಗುಂಡುಗಳು ಹೊಕ್ಕಿದ್ದವು. ಆದರೂ ನಾನು ಜನರಿಗಾಗಿ ಬದುಕಿ ಬಂದೆ ಎಂದು ಮುರಳಿ ಹೇಳಿದ್ದಾರೆ.
ಮುರಳಿ ಹಲವು ದಾಳಿಗಳಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು, ಅವರು ಮತ್ತೆ ಬದುಕಿ ಬರಲ್ಲ ಎಂದುಕೊಂಡಿದ್ದೆ. ಆದರೆ ಜನರಿಗಾಗಿ ಅವರು ಮತ್ತೆ ಬಂದರು ಎಂದು ಸುರೇಖಾ ಹೇಳಿದ್ದಾರೆ.
ಮುರಳಿ ಗ್ಯಾಂಗ್ ಮೇಲೆ ಪೊಲೀಸರು ಹಾಗೂ ವಿರೋಧಿ ಗುಂಪುಗಳು ಹಲವು ಸಲ ದಾಳಿ ಮಾಡಿದ್ದರು. ದಾಳಿಗಳು ನಡೆದ ಸ್ಥಳಗಳಲ್ಲಿಯೇ ಸಿನಿಮಾದ ಶೂಟಿಂಗ್ ಮಾಡಿರುವುದು ವಿಶೇಷ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ಕೊಂಡಾ ಸಿನಿಮಾದಲ್ಲಿ ಮುರಳಿಯಾಗಿ ಪೃಥ್ವಿರಾಜ್, ಸುರೇಖಾ ಪಾತ್ರದಲ್ಲಿ ಇರಾ ಮೋರಾ ಬಣ್ಣ ಹಚ್ಚಿದ್ದಾರೆ. ಪೋಷಕ ಪಾತ್ರಗಳಲ್ಲಿ ಹಿರಿಯ ನಟರು ಅಭಿನಯಿಸಿದ್ದಾರೆ. ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ವರ್ಮಾ ಹೇಳಿದ್ದಾರೆ.
Read More…Source link
[wpas_products keywords=”deal of the day party wear for men wedding shirt”]