Karnataka news paper

Australia open: ಆಶ್ಲೀ ಬಾರ್ಟಿಗೆ ಚೊಚ್ಚಲ ಆಸ್ಟ್ರೇಲಿಯಾ ಓಪನ್‌ ಕಿರೀಟ!


ಮೆಲ್ಬೋನ್: ವಿಶ್ವದ ನಂ.1 ಆಟಗಾರ್ತಿ ಆಶ್ಲೀ ಬಾರ್ಟಿ ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಆ ಮೂಲಕ ವೈಯಕ್ತಿಕ ಮೂರನೇ ಹಾಗೂ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

ಅಷ್ಟೇ ಅಲ್ಲದೆ 44 ವರ್ಷಗಳ ನಂತರ ಆಸ್ಟ್ರೇಲಿಯನ್ ಓಪನ್ ಗೆದ್ದ ಮೊದಲ ಆಸೀಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ 25ರ ಪ್ರಾಯದ ಬಾರ್ಟಿ ಭಾಜನರಾಗಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕಿತೆ ಬಾರ್ಟಿ 6-3,7-6 (2) ನೇರ ಸೆಟ್ ಗಳಿಂದ ಅಮೆರಿಕದ ಡ್ಯಾನಿಯಲ್‌ ಕಾಲಿನ್ಸ್‌ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು.

1978ರಲ್ಲಿ ಕ್ರಿಸ್ ಒ ನೀಲ್ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ನಂತರ ಈ ಪ್ರಶಸ್ತಿ ಗೆದ್ದ ಮೊದಲ ಆಸ್ಟ್ರೇಲಿಯಾ ಮಹಿಳೆ ಎಂಬ ಹಿರಿಮೆಯನ್ನು ಬಾರ್ಟಿ ತಮ್ಮದಾಗಿಸಿಕೊಂಡರು. ಬಾರ್ಟಿ ಪ್ರಶಸ್ತಿ ಗೆಲ್ಲುತ್ತಿದ್ದಂತೆಯೇ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಒ ನೀಲ್ ಹಾಗೂ ಸ್ಥಳೀಯ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು.

ಆಸ್ಟ್ರೇಲಿಯಾ ಓಪನ್‌ 2022: ಫೈನಲ್‌ಗೇರಿದ ಆಶ್ಲಿ ಬಾರ್ಟಿ, ಕಾಲಿನ್ಸ್‌!

ಮೊದಲ ಸೆಟ್‌ನಲ್ಲಿ ಸಂಪೂರ್ಣ ಪಾರಮ್ಯ ಮೆರೆದ ಬಾರ್ಟಿ ಸುಲಭವಾಗಿ 6-3 ಅಂತರದಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡರು. ಆದರೆ ದ್ವಿತೀಯ ಸೆಟ್ ಉಭಯ ಆಟಗಾರ್ತಿಯರ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಯಿತು.
ಒಂದು ಹಂತದಲ್ಲಿ ಹಿನ್ನಡೆಗೆ ಒಳಗಾದ ವಿಶ್ವದ ನಂ.1 ಆಟಗಾರ್ತಿ, ಎದುರಾಳಿಗೆ ಸುಲಭವಾಗಿ ಪಾಯಿಂಟ್ಸ್ ಬಿಟ್ಟುಕೊಟ್ಟರು. ಹೀಗಾಗಿ ಕಾಲಿನ್ಸ್ ಪುಟಿದೇಳಲು ನೆರವಾಯಿತು.

ಅಂತಿಮವಾಗಿ ಅನುಭವ ಧಾರೆಯೆರೆದ ಬಾರ್ಟಿ ಅಮೆರಿಕ ಆಟಗಾರ್ತಿಯ ಸವಾಲು ಮೀರಿ ನಿಂತರು. 2019ರಲ್ಲಿ ಫ್ರೆಂಚ್ ಓಪನ್ ಗೆದ್ದಿದ್ದ ಬಾರ್ಟಿ, ಕಳೆದ ವರ್ಷ ವಿಂಬಲ್ಡನ್ ಟೂರ್ನಿ ಮುಡಿಗೇರಿಸಿಕೊಂಡಿದ್ದರು. ಇದೀಗ ತವರಿನ ಆಸ್ಟ್ರೇಲಿಯನ್ ಓಪನ್ ಕಿರೀಟ ಗೆಲ್ಲುವ ಮೂಲಕ ಕೊನೆಗೂ ಪ್ರಶಸ್ತಿ ಬರ ನೀಗಿಸಿಕೊಂಡಿದ್ದಾರೆ.

Australia Open 2022: 21ನೇ ಗ್ರ್ಯಾನ್‌ ಸ್ಲಾಮ್‌ ಮೇಲೆ ನಡಾಲ್‌ ಕಣ್ಣು!

ರನ್ನರ್ ಅಪ್ ಸ್ಥಾನ ಪಡೆದ ಹಿನ್ನೆಲೆಯಲ್ಲಿ 27 ನೇ ಶ್ರೇಯಾಂಕಿತೆ ಡ್ಯಾನಿಯಲ್ ಸೋಮವಾರ ಬಿಡುಗಡೆಯಾಗಲಿರುವ ನೂತನ ಡಬ್ಲ್ಯುಟಿಎ ಶ್ರೇಯಾಂಕದಲ್ಲಿ ಅಗ್ರ 10ರೊಳಗೆ ಕಾಣಿಸಿಕೊಳ್ಳಲಿದ್ದಾರೆ.

ನಡಾಲ್ ದಾಖಲೆಗೆ ಒಂದೇ ಮೆಟ್ಟಿಲು
ಸ್ಪೇನ್ ದಿಗ್ಗಜ ರಾಫೆಲ್ ನಡಾಲ್ ಆಧುನಿಕ ಟೆನಿಸ್ ಯುಗದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. 20 ಗ್ರ್ಯಾನ್ ಸ್ಲಾಮ್ ಚಾಂಪಿಯನ್ 35ರ ಪ್ರಾಯದ ರಾಫಾ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಷ್ಯಾದ ತರುಣ ಡ್ಯಾನಿಲ್ ಮೆಡ್ವೆಡೆವ್ ಅವರ ಸವಾಲು ಎದುರಿಸಲಿದ್ದಾರೆ.

ಜೊಕೊವಿಕ್‌ ಅನುಪಸ್ಥಿತಿಯಲ್ಲಿ ನಡಾಲ್ ಗೆಲ್ಲುವವರೇ 21ನೇ ಗ್ರ್ಯಾನ್ ಸ್ಲಾಮ್?

ಒಂದು ವೇಳೆ ನಡಾಲ್ ಈ ಪ್ರಶಸ್ತಿ ಗೆದ್ದರೆ 21 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ ಮೊದಲ ಪುರುಷ ಆಟಗಾರ ಎಂಬ ಚಾರಿತ್ರಿಕ ದಾಖಲೆ ಬರೆಯಲಿದ್ದಾರೆ. ಸದ್ಯ ನಡಾಲ್, ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಕ್ ತಲಾ 20 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದು ಜಂಟಿ ಮೊದಲ ಸ್ಥಾನ ಹೊಂದಿದ್ದಾರೆ.



Read more

[wpas_products keywords=”deal of the day gym”]