Karnataka news paper

ಕೇಂದ್ರ ಬಜೆಟ್ 2022: ಟೆಲಿಕಾಂ ವಲಯದ ನಿರೀಕ್ಷೆಗಳೇನು?


News

|

ನವದೆಹಲಿ, ಜನವರಿ 29: ಭಾರತದಲ್ಲಿ 2022-23ನೇ ಸಾಲಿನ ಕೇಂದ್ರ ಬಜೆಟ್‌ನ ಮೇಲೆ ದೂರಸಂಪರ್ಕ ವಲಯ ಹೆಚ್ಚು ನಿರೀಕ್ಷೆಗಳನ್ನು ಹೊಂದಿದೆ. “ತಂತ್ರಜ್ಞಾನ ಸದುಪಯೋಗದ ಮೂಲಕ ಭಾರತ ಬದಲಾವಣೆಯ ಹಂತದಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ ಈ ವಲಯದಲ್ಲಿ ದೃಢತೆ ಕಂಡು ಬರುತ್ತಿದೆ.

ಸೇವೆಗಳ ನೇತೃತ್ವದ ರಫ್ತು ಬಹಳ ಪ್ರಬಲವಾಗಿ ಮುಂದುವರಿದರೂ, ದೂರಸಂಪರ್ಕ ಉದ್ಯಮವು ಹೊಸ ಕಾರ್ಯಾಚರಣೆಯಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಈ ಹಂತದಲ್ಲಿ ಸವಾಲುಗಳನ್ನು ಎದುರಿಸಲು ಹೊಸ ಪ್ರತಿಭೆ ಮತ್ತು ಉದಯೋನ್ಮುಖ ಕೌಶಲ್ಯಗಳ ಬೇಡಿಕೆ ಹೆಚ್ಚಾಗಿದೆ.

ಚಿನ್ನದ ಬೆಲೆ ಇಳಿಕೆ: ಜನವರಿ 29ರ ದರ ತಿಳಿದುಕೊಳ್ಳಿ

“ತಂತ್ರಜ್ಞಾನ ಮತ್ತು ವೇದಿಕೆಗಳ ಮೂಲಕ ಅನೌಪಚಾರಿಕ ಆರ್ಥಿಕತೆ, ಸ್ವ-ಉದ್ಯೋಗಿಗಳು ಮತ್ತು ಭಾರತದ ಹಿಂದುಳಿಯುವಿಕೆಯನ್ನು ಬಗೆಹರಿಸಲು ನಮ್ಮ ಎದುರಿಗೆ ಸಾಕಷ್ಟು ಅವಕಾಶವಿದೆ. ಇದರಿಂದ ನಿಜವಾದ ಬದಲಾವಣೆಗೆ ಅಗತ್ಯವಿರುವ ಚಕ್ರವನ್ನು ರಚಿಸಬಹುದು. ಇದರ ಜೊತೆಗೆ ಟೆಲ್ಕೊದಲ್ಲಿ 5G, ಡಿಜಿಟಲ್ ಮಾಧ್ಯಮ ಮತ್ತು ಉತ್ಪಾದನೆ ಇತರ ದೊಡ್ಡ ವಿಷಯಗಳಾಗಿವೆ. ಇದಕ್ಕೆ ಬೆಂಬಲವಾಗಿರುವ ನೀತಿಗಳು ಈ ವಲಯದಲ್ಲಿ ಪರಿವರ್ತನೆಗೆ ಪ್ರಮುಖ ಪಾತ್ರ ವಹಿಸಲಿವೆ,” ಎಂದು ವ್ಯವಸ್ಥಾಪಕ ಬೋಸ್ಟನ್ ಸಲಹಾ ತಂಡದ ನಿರ್ದೇಶಕ ವಿಕಾಸ್ ಜೈನ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2022: ಟೆಲಿಕಾಂ ವಲಯದ ನಿರೀಕ್ಷೆಗಳೇನು?

2022-23ರ ಕೇಂದ್ರ ಬಜೆಟ್‌ನಲ್ಲಿ ಟೆಲಿಕಾಂ ವಲಯದ ನಿರೀಕ್ಷೆಗಳು:

2022-23ರ ಕೇಂದ್ರ ಬಜೆಟ್‌ನಲ್ಲಿ ಟೆಲಿಕಾಂ ವಲಯದ ಬಗ್ಗೆ CareEdge ಇತ್ತೀಚಿಗೆ ವರದಿಯೊಂದನ್ನು ಪ್ರಕಟಿಸಿದೆ. ಈ ವರದಿ ಪ್ರಕಾರ ಟೆಲಿಕಾಂ ವಲಯದ ನಿರೀಕ್ಷೆಗಳೇನು ಎಂಬುದನ್ನು ಮುಂದೆ ಪಟ್ಟಿ ಮಾಡಲಾಗಿದೆ.

– ಪರವಾನಗಿ ಶುಲ್ಕದಲ್ಲಿ ಕಡಿತ

– ಪ್ರಮುಖ ಟೆಲಿಕಾಂ ಉಪಕರಣಗಳ ಮೇಲಿನ ಸುಂಕ ವಿನಾಯಿತಿ

– ಟೆಲಿಕಾಂ ಟವರ್‌ಗಳ ಮೇಲೆ ಪಾವತಿಸಿದ GST ಮೇಲಿನ ಇನ್‌ಪುಟ್ ತೆರಿಗೆ ನೀಡುವುದು

– TSPs/ನಿಷ್ಕ್ರಿಯ ಮೂಲಸೌಕರ್ಯ ಒದಗಿಸುವವರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು GST ದರಗಳಲ್ಲಿ ಕಡಿತ

– ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸುವ ಪ್ರೋತ್ಸಾಹಕ ಯೋಜನೆಗಳ ಮೂಲಕ ದೇಶೀಯ ಉತ್ಪಾದನೆಗೆ ಚಾಲನೆ ನೀಡುವುದು

– ಡಿಜಿಟಲ್ ಇಂಡಿಯಾದ ಕನಸನ್ನು ಸಾಧಿಸಲು ಗ್ರಾಮೀಣ ಪ್ರದೇಶಗಳಲ್ಲಿ ಪ್ರಸರಣಕ್ಕೆ ಉತ್ತೇಜನ ನೀಡುವ ಪ್ಯಾಕೇಜ್

– 5G ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸುಗಮ ಮತ್ತು ಲಾಭದಾಯಕ ಸುಧಾರಣೆಗಳು

– ವಲಯದ ದಕ್ಷತೆಯನ್ನು ಹೆಚ್ಚಿಸಲು ಹೊಸ ತಂತ್ರಜ್ಞಾನಗಳನ್ನು ಉತ್ತೇಜಿಸಲು ಪ್ರೋತ್ಸಾಹ ನೀಡುವುದು

ನಿರ್ಮಲಾ ಸೀತಾರಾಮನ್ 4ನೇ ಬಜೆಟ್ ಮೇಲೆ ನಿರೀಕ್ಷೆ:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಲಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 10ನೇ ಬಜೆಟ್ ಮತ್ತು ಸೀತಾರಾಮನ್ ಮಂಡಿಸುತ್ತಿರುವ ನಾಲ್ಕನೇ ಬಜೆಟ್ ಆಗಿದೆ. ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡುವ ಮೂಲಕ ಸಂಸತ್ತಿನಲ್ಲಿ ಬಜೆಟ್ ಅಧಿವೇಶನವನ್ನು ಪ್ರಾರಂಭಿಸಲಿದ್ದಾರೆ. ಬಜೆಟ್ ಅಧಿವೇಶನದ ಮೊದಲಾರ್ಧವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯುತ್ತದೆ, ದ್ವಿತೀಯಾರ್ಧವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ. ರಾಜ್ಯಸಭೆಯಲ್ಲಿ ಬಜೆಟ್ ಮಂಡಿಸುವ ಮೊದಲು ಸಂಸತ್ತಿನ ಕೆಳಮನೆ ಎನಿಸಿರುವ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.

English summary

What Are the Indian Telecom Sector Expectations on Union Budget 2022

What are the Indian Telecom Sector Expectations on Union Budget 2022: Here Read Details.

Story first published: Saturday, January 29, 2022, 16:59 [IST]



Read more…

[wpas_products keywords=”deal of the day”]