Karnataka news paper

ಸಿದ್ದರಾಮಯ್ಯಗೆ ಎಲ್ಲದಕ್ಕೂ ಪ್ರತಿಕ್ರಿಯೆ ಕೊಡಬೇಕೆಂಬ ಚಟ! ಆರ್‌. ಅಶೋಕ್ ಕಿಡಿ


ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಎಲ್ಲದಕ್ಕೂ ಪ್ರತಿಕ್ರಿಯೆ ಕೊಡಬೇಕೆಂಬ ಚಟ ಎಂದು ಕಂದಾಯ ಸಚಿವ ಆರ್‌. ಅಶೋಕ್ ಕಿಡಿಕಾರಿದರು. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಸರ್ಕಾರ ಏನು ಸಾಧನೆ ಮಾಡಿಲ್ಲ ಎಂದು ಹೇಳಿದ್ದಾರೆ. ಅವರಿಗೆ ನಾನು ಮಾಡಿದ್ದು ಸರಿ ಎಂದು ಭಾವಿಸಿದ್ದಾರೆ‌ ಎಂದರು.

ಹೆಚ್ಚು ಬಜೆಟ್ ಮಂಡನೆ ಮಾಡಿದ್ದೇನೆ ಎಂಬ ಅಹಂ ಸಿದ್ದರಾಮಯ್ಯಗೆ. ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡ್ತಾರೆ‌. ಸಿಕ್ಕ ಆರೇ ತಿಂಗಳಲ್ಲಿ ಸಿಎಂ ಒಳ್ಳೆಯ ಕೆಲಸ ಮಾಡಿದ್ದಾರೆ‌. ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿದ್ರು‌ ಏನು ಕೆಲಸ ಮಾಡಿಲ್ಲ. ಹಾಗಾಗಿ‌ ಜನ ಕಾಂಗ್ರೆಸ್ ತಿರಸ್ಕರಿಸಿದರು ಎಂದು ವಾಗ್ದಾಳಿ ನಡೆಸಿದರು.

ಅದಕ್ಕಾಗಿ ಕಾಂಗ್ರೆಸ್ 78 ಸ್ಥಾನಕ್ಕೆ ಬಂದ್ರು. ಹದಿನೇಳು ಜನ ಕಾಂಗ್ರೆಸ್ ಬಿಟ್ಟು ಬಂದ್ರು. ಕಾಂಗ್ರೆಸ್ ಇದರ ಬಗ್ಗೆ ಸತ್ಯ ಶೋಧನ ಸಮಿತಿ ಮಾಡಬೇಕಿತ್ತು. ಸಮಿತಿ ಮಾಡಿ ಯಾಕೆ ಬಿಟ್ಟು ಬಂದ್ರು ಎಂದು ತಿಳಿಯಬೇಕಿತ್ತು.ಮೊನ್ನೆ ಇಬ್ರಾಹಿಂ ಅವರು ಕಾಂಗ್ರೆಸ್ ಗುಡ್ ಬೈ ಮಾಡಿದ್ರು. ಕಾಂಗ್ರೆಸ್ ಸಿದ್ದರಾಮಯ್ಯ, ಡಿಕೆಶಿ ಶೋ ನಡೆಯುತ್ತಿದೆ‌. ಅವರಿಬ್ಬರ ನಡುವೆ ಸ್ಪರ್ಧೆ ನಡೆಯುತ್ತಿದೆ ಎಂದರು.

ಸಾರ್ವಜನಿಕರಿಗೆ ಗುಡ್ ನ್ಯೂಸ್: ನೈಟ್‌ ಕರ್ಫ್ಯೂ, 50-50 ರೂಲ್ಸ್ ರದ್ದು!

ಹೋಟೆಲ್‌ ಗಳ ಮುಂದೆ ಟುಡೇ ಸ್ಪೆಷಲ್ ಎಂದು ಬೋರ್ಡ್ ಇರುತ್ತೋ ಹಾಗೇಯೆ ಸಿದ್ದು, ಡಿಕೆಶಿ ನಡುವೆ ಟುಡೇ ಸ್ಪೆಷಲ್ ಎಂದು ನಡೆಯುತ್ತದೆ ಎಂದು ಲೇವಡಿ ಮಾಡಿದರು. ಬೆಳಗಾವಿ ನಾಯಕರ ಸಭೆಗೆ ಜಾರಕಿಹೊಳಿ ಬ್ರದರ್ಸ್ ಗೈರು ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅಸಮಾಧಾನ ಏನು ಇಲ್ಲ. ಮಾಧ್ಯಮಗಳ ಬಂದಿರೋದೆ ಬೇರೆ. ಸಭೆ ಸೇರಿ ಬೆಳಗಾವಿ ಮೇಯರ್ ಚುನಾವಣೆ ಚರ್ಚೆ ಮಾಡಿದ್ದಾರೆ ಎಂದರು. ಇನ್ನು ಕ್ಷೇತ್ರದ ಅಭಿವೃದ್ಧಿ ಸರ್ಕಾರ ಸ್ಪಂದಿಸಿಲ್ಲ ಎಂದ್ರೆ ರಾಜೀನಾಮೆ ಕೊಡ್ತೇನೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ, ರಮೇಶ್ ಜಾರಕಿಹೊಳಿ ಅವರು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಚೆನ್ನಾಗಿ ಅಭಿವೃದ್ಧಿ ಮಾಡಿದ್ದಾರೆ. ಅವರು ನಮ್ಮ ಪಕ್ಷದ ನಾಯಕರು ಎಂದರು.



Read more

[wpas_products keywords=”deal of the day sale today offer all”]